ಭಕ್ತಿ-ಭವಿಷ್ಯ

ಕೃಷ್ಣ ಜನಿಸಿದ ನಾಡು ಮಥುರಾದಲ್ಲಿ ಜನ್ಮಾಷ್ಟಮಿ ಆಚರಣೆ ಹೇಗೆ ನಡೆಯುತ್ತೆ ಗೊತ್ತಾ?

Srinivas Rao BV
ಭಾರತ ಅವತಾರ ಪುರುಷರ ನಾಡು, ಹಬ್ಬಗಳ ಭೂಮಿ. ಸನಾತನ ಪರಂಪರೆಯಲ್ಲಿ ಅವತಾರ ಪುರುಷರ ಜನ್ಮದಿನಗಳನ್ನೂ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಪೈಕಿ ಕೃಷ್ಣ ಜನ್ಮಾಷ್ಟಮಿಯೂ ಒಂದು ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀ ಕೃಷ್ಣ ಜನ್ಮಿಸಿದ ದಿನವನ್ನು ಕೃಷ್ಣ ಜನ್ಮಾಷ್ಟಮಿಯನ್ನಾಗಿ ಆಚರಿಸಲಾಗುತ್ತದೆ. 
ಈ ವರ್ಷ ಆ.14 ರಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಶ್ರಾವಣ ಮಾಸದ ಕೃಷ್ಣ ಪಕ್ಷದ 8 ನೆಯ ದಿನದ ಮಧ್ಯರಾತ್ರಿ ಶ್ರೀ ಕೃಷ್ಣ ಜನಿಸಿದ್ದರ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಮಧ್ಯರಾತ್ರಿಯೂ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯುತ್ತದೆ. ಈ ದಿನದಂದು ಕೃಷ್ಣನ ಸಾಹಸಗಳನ್ನು ವರ್ಣಿಸುವ ಭಜನೆಗಳು ನಡೆಯಲಿರುವುದು ವಿಶೇಷವಾಗಿದೆ. ಸಾಮಾನ್ಯ ಆಚರಣೆಯಂತೆ ಬಾಲಕೃಷ್ಣನಿಗೆ ಕ್ಷೀರಾಭಿಷೇಕ ನೆರವೇರಿಸಿ ವಸ್ತ್ರಗಳನ್ನುಡಿಸಿ, ಉಪವಾಸವಿರುವ ಆಚರಣೆಯೂ ನಡೆಯಲಿದೆ. ಆದರೆ ಕೃಷ್ಣ ಜನ್ಮಿಸಿದ ನಾಡು ಮಥುರಾದಲ್ಲಿ ಭೋಗ್ ಎಂಬ ಆಚರಣೆ ನಡೆಯಲಿದೆ. 
ಶ್ರೀ ಕೃಷ್ಣನಿಗೆ 56 ರೀತಿಯ ಆಹಾರ ಪದಾರ್ಥಗಳನ್ನು ನೈವೇದ್ಯ ಇಡುವ ಪದ್ಧತಿಗೆ ಚಪ್ಪನ್ ಭೋಗ್ ಎಂದು ಕರೆಯಲಾಗುತ್ತದೆ. ನೈವೇದ್ಯ ಇರಿಸಿದ 56 ಬಗೆಯ ಆಹಾರ ಪದಾರ್ಥಗಳನ್ನು ಭಕ್ತಾದಿಗಳಿಗೆ ಅರ್ಪಿಸಲಾಗುತ್ತದೆ. ಮಥುರಾದಲ್ಲಿ ಮಧ್ಯರಾತ್ರಿಯ ವೇಳೆಯಲ್ಲಿ ನಂದ ಉತ್ಸವ ನಡೆಯಲಿದ್ದು, ಭೋಗ್ ಅರ್ಪಣೆಯಲ್ಲಿ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಆಹಾರಗಳನ್ನು ನೈವೇದ್ಯ ಮಾಡಲಾಗುತ್ತದೆ. 
SCROLL FOR NEXT