ಭಕ್ತಿ-ಭವಿಷ್ಯ

ದಶಮಹಾವಿದ್ಯೆ, ಬುದ್ಧಿವಂತಿಕೆ, ಜ್ಞಾನ ಶಕ್ತಿ ಬಾಗಲಮುಖಿ ದೇವಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

Srinivas Rao BV
ಭಾರತೀಯ ಸಂಸ್ಕೃತಿ ಬಾಹ್ಯ ಪ್ರಪಂಚಕ್ಕಿಂತಲೂ ಅಂತಃಸತ್ವವನ್ನು ಉತ್ತಮಗೊಳಿಸುವ ಜ್ಞಾನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ. ಆದ್ದರಿಂದಲೇ ವಿದ್ಯೆಗೆ ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಮಹತ್ವವಿದ್ದು ವಿದ್ಯೆಗೂ ಅಧಿದೇವತೆಯನ್ನು ಪೂಜಿಸುವ ಸಂಸ್ಕೃತಿ ಬೆಳೆದುಬಂದಿದೆ. 
ಪ್ರಮುಖವಾಗಿ ಉಲ್ಲೇಖಿಸಲಾಗಿರುವ ದಶಮಹಾವಿದ್ಯೆಗೆ ಸ್ತ್ರೀ ದೇವತೆಯನ್ನು ಅಧಿದೇವತೆಯನ್ನಾಗಿ ಪೂಜಿಸಲಾಗಿದ್ದು, ಶಾರದೆಯನ್ನು ಪೂಜಿಸುವಂತೆಯೇ ಬಾಗಲಮುಖಿ ಎಂಬ ದೇವತೆಯನ್ನು ಬುದ್ಧಿವಂತಿಕೆ ಹಾಗೂ ಜ್ಞಾನದ ಶಕ್ತಿ ವೃದ್ಧಿಗಾಗಿ ಪೂಜಿಸಲಾಗುತ್ತದೆ. 
ದಶಮಹಾವಿದ್ಯೆಗಳಲ್ಲಿ ೮ ನೇ ವಿದ್ಯೆಯೇ ಬಾಗಲಮುಖಿ ದೇವಿಯಾಗಿದ್ದು ಜ್ಞಾನ ಶಕ್ತಿ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ಹಿಮಾಚಲಪ್ರದೇಶದ ಕಂಗ್ರಾದಲ್ಲಿ ಬಾಗಲಮುಖಿ ದೇವಾಲಯವಿದೆ. ವಿದ್ಯೆಯ ಅಧಿದೇವತೆಯನ್ನು ಸಾಮಾನ್ಯವಾಗಿ ಸಾತ್ವಿಕ ಸ್ವರೂಪದಲ್ಲೇ ಕಂಡಿರುತ್ತೇವೆ. ಆದರೆ ತನ್ನನ್ನು ಆರಾಧಿಸುವ ಭಕ್ತರ ಜಿಜ್ಞಾಸೆಗಳನ್ನು ದೂರ ಮಾಡಿ, ತನ್ನನ್ನು ಆರಾಧಿಸುವವರಿಗೆ ತೊಂದರೆ ನೀಡುವವರನ್ನು ನಿಗ್ರಹಿಸುವುದು ಬಾಗಲಮುಖಿ ದೇವಿಯ ವೈಶಿಷ್ಟ್ಯ.
ಬಾಗಲಮುಖಿ ದೇವಿ ಶಿವನ ಬೆನ್ನಿನ ಭಾಗ ಎಂಬ ನಂಬಿಕೆಯೂ ಇದ್ದು, ೧೦೮ ಹೆಸರುಗಳಿಂದ, ಕೆಲವೊಮ್ಮೆ 1108 ಹೆಸರುಗಳಿಂದ ಅರ್ಚಿಸಲಾಗುತ್ತದೆ. ಉತ್ತರ ಭಾರತದಲ್ಲಿ ಬಾಗಲಮುಖಿ ದೇವಿ ಪೀತಾಂಬರ ಮಾ ಎಂದೇ ಪ್ರಸಿದ್ಧಿ ಪಡೆದಿದ್ದಾಳೆ.
SCROLL FOR NEXT