ಮೇಷ
ಈ ರಾಶಿಯವರಿಗೆ ಈ ವಾರ ಉತ್ತಮವಾಗಿದೆ. ಕುಟುಂಬದಲ್ಲಿ ಶುಭ ಕಾರ್ಯಗಳ ಸಾಧ್ಯತೆ. ಮನೆ ನಿರ್ಮಾಣ ಕೆಲಸ, ವಾಹನ ಲಾಭ, ಕೃಷಿಯಲ್ಲಿ ಆಸಕ್ತಿ. ಉದ್ದೇಶಿತ ಗುರಿ ಸಾಧಿಸುವಲ್ಲಿ ಯಶಸ್ಸು.
ವೃಷಭ
ಈ ರಾಶಿಯವರಿಗೆ ಈ ವಾರ ಉತ್ತಮ ಸಮಯ. ಸ್ನೇಹಿತರನ್ನು ಭೇಟಿಯಾಗುವ ಯೋಗ, ಸಹೋದರರಿಗೆ ಲಾಭ, ಆರ್ಥಿಕ ಲಾಭ. ಅನಿರೀಕ್ಷಿತ ಪ್ರಯಾಣದ ಯೋಗ
ಮಿಥುನ
ಈ ರಾಶಿ ಜನರಿಗೆ ಈ ಸಮಯ ತುಂಬಾ ಒಳ್ಳೆಯದು. ಶಿಕ್ಷಣದ ಮೂಲಕ ಖ್ಯಾತಿ, ವೇದಾಂತ ಮತ್ತು ಇತರ ವಿಜ್ಞಾನಗಳಲ್ಲಿ ಆಸಕ್ತಿ, ಸಂಶೋಧನಾ ಅಧ್ಯಯನದಲ್ಲಿ ತೊಡಗಿರುವವರಿಗೆ ಉತ್ತಮ ಅವಕಾಶ. ಆದರೆ ಕೆಲಸದಲ್ಲಿ ವಿಳಂಬ. ಅನಿರೀಕ್ಷೀತ ಸಂಪತ್ತು ದೊರೆಯುವ ಯೋಗವಿದೆ.
ಕಟಕ
ದೈವರಾದನೆಗೆ ಸೂಕ್ತ ಕಾಲ . ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿರುವವರು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅನುಕೂಲಕರ ಸಮಯ. ಅವಿವಾಹಿತರಿಗೆ ವಿವಾಹ ಯೋಗ. ಸಂತಾನ ಪ್ರಾಪ್ತಿ.
ಸಿಂಹ
ಎಲ್ಲಾ ವಿಷಯಗಳಲ್ಲಿ ಅಡೆತಡೆಗಳ ಸಾಧ್ಯತೆ ಇದೆ, ಆದರೆ ನೀವು ಕಷ್ಟಪಟ್ಟು ಎಚ್ಚರದಿಂದ ಕೆಲಸ ಮಾಡಿದರೆ ಯಶಸ್ಸು ಖಚಿತ. ಆಲಸ್ಯ. ಸೋಮಾರಿತನ, ಬೆಂಕಿಯ ಅಪಾಯ, ಪ್ರಾಣಗಳಿಂದ ಹಾನಿ. ಅನಗತ್ಯ ವಿಷಯಗಳಲ್ಲಿ ಹಸ್ತಕ್ಷೇಪ ಬೇಡ. ಆರ್ಥಿಕ ವಿಷಯದಲ್ಲಿ ಸಮೃದ್ಧಿ. ಆದಷ್ಟು ಜಾಗ್ರತೆ ವಹಿಸಿ.
ಕನ್ಯಾ
ಈ ರಾಶಿ ಜನರಿಗೆ ಈ ವಾರ ಬಹಳಷ್ಟು ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಗುರಿಗಳ ಸಾಧನೆ, ಆರ್ಥಿಕ ಲಾಭ, ಭೂಮಿ ವಿಷಯದಲ್ಲಿ ಲಾಭ, ಸಂಪತ್ತಿನ ಹೆಚ್ಚಳ . ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರು ಬಹಳಷ್ಟು ಅವಕಾಶ, ಮನೆ ಕಟ್ಟಿಸಲು ಪ್ರಾರಂಭಿಸುವವರಿಗೆ ಇದು ಸೂಕ್ತ ಸಮಯ. ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಒಳ್ಳೆಯ ಸಮಯ. ಇದು ತಮ್ಮ ಸತತ ಪ್ರಯತ್ನಗಳಿಂದ ಉತ್ತಮ ಫಲಿತಾಂಶ
ತುಲಾ
ಈ ಸಮಯ ಉತ್ತಮವಾಗಿದೆ ಕೆಲಸದಲ್ಲಿ ಯಶಸ್ಸು, ಅದೃಷ್ಟ, ಉನ್ನತ ಅಧಿಕಾರ ಸಾಧನೆ, ಆದಾಯ, ವಿದ್ಯಾರ್ಜನೆ, ವಿವಾಹ ಯೋಗ. ವಿದೇಶ ಪ್ರಯಾಣದ ಸಾಧ್ಯತೆ.
ವೃಶ್ಚಿಕ
ಇದು ಅವರಿಗೆ ಒಳ್ಳೆಯ ಸಮಯ. ಕೈಗೊಂಡ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವ ಸಮಯ. ಕೌಟುಂಬಿಕ ಸಂತೋಷ. ನೀವು ಸೋಮಾರಿತನದ ಬಿಟ್ಟು ಕೆಲಸ ಮಾಡಿದರೆ, ಅನೇಕ ಪ್ರಯೋಜನ . ಸಾಧಕರಿಗೆ ಉತ್ತಮ ಸಮಯ
ಧನಸ್ಸು
ಈ ರಾಶಿಯವರಿಗೆ ಈ ವಾರ ಕೊಂಚ ಆಲಸ್ಯ, ಸೋಮಾರಿತನ. ಪ್ರಯೋಜನ ಅನುಭವಿಸುವಲ್ಲಿ ವಿಳಂಬ. ಅನಗತ್ಯ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಿ. ಸಂಗೀತ, ಸಾಹಿತ್ಯ, ಕಲೆ, ಸಿನಿಮಾ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಇದು ಒಳ್ಳೆಯ ಸಮಯ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ದೊಡ್ಡ ಬದಲಾವಣೆಗಳ ಸಾಧ್ಯತೆ ಇದೆ.
ಮಕರ
ವೃದ್ಧಾಪ್ಯದಲ್ಲಿರುವವರಿಗೆ ಉತ್ತಮ ಸಮಯ ಇದು. ಕೃಷಿಯಲ್ಲಿ ಲಾಭ, ಸಮಾಜದಲ್ಲಿ ಗೌರವ, ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ, ಖರೀದಿ ಮತ್ತು ಮಾರಾಟದಲ್ಲಿ ಲಾಭ, ಆರಾಮದಾಯಕ ಜೀವನಕ್ಕೆ ಅವಕಾಶ. ವಂಚಕರಿಂದ ಮೋಸ ಹೋಗುವ ಸಾದ್ಯತೆ, ಅನಿರೀಕ್ಷಿತ ಹಾನಿ, ಗಾಯವಾಗುವ ಸಾಧ್ಯತೆ ಇರುವುದರಿಂದ ಇದು ಜಾಗರೂಕರಾಗಿರಬೇಕಾಗಿರುವುದು ಅವಶ್ಯಕ.
ಕುಂಭ
ಈ ರಾಶಿಯ ವ್ಯಕ್ತಿಗಳಿಗೆ ದೈವಿಕ ಮಾರ್ಗದರ್ಶನದ ಕೊರತೆ. ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲಿ ಅನಿರೀಕ್ಷಿತ ಅಡೆತಡೆಗಳನ್ನು ಅನುಭವಿಸುವ ಸಾಧ್ಯತೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯ.
ಮೀನ
ಒಳ್ಳೆಯ ಸಮಯ. ಕುಟುಂಬದಲ್ಲಿ ಮದುವೆಯಂತಹ ಶುಭ ಕಾರ್ಯಕ್ರಮಗಳು. ಮಾನಸಿಕ ಸಂತೋಷ, ಕೆಲಸದಲ್ಲಿ ಯಶಸ್ಸು ಮತ್ತು ಖ್ಯಾತಿ. ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ದೊಡ್ಡ ಬದಲಾವಣೆಗಳಿಗೆ ಉತ್ತಮ ಸಮಯ. ಅನಗತ್ಯ ಖರ್ಚುಗಳು.
ಉನ್ನಿಕೃಷ್ಣನ್ ತೆಕ್ಕೆಪ್ಪಟ್ಟು