ದ್ವಾದಶ ರಾಶಿಗಳು 
ಭಕ್ತಿ-ಜ್ಯೋತಿಷ್ಯ

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ- ಕೆಲಸ, ಹಣಕಾಸು, ಪ್ರೀತಿ; ಈ ವಾರ ನಿಮ್ಮ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಿ.

ಮೇಷ: ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಇದು ಸಾಮಾನ್ಯವಾಗಿ ಒಳ್ಳೆಯ ಸಮಯ. ಮದುವೆಯಂತಹ ಶುಭ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸು ಸಮಯ. ಖರೀದಿ ಮತ್ತು ಮಾರಾಟ, ಮನೆ ನಿರ್ಮಾಣ, ವಾಹನ ಲಾಭ, ಕೃಷಿಕರಿಗೆ ಉತ್ತಮ. ಉದ್ದೇಶಿತ ಕೆಲಸ ಸಾಧಿಸುವ ಯೋಗವಿದೆ.

ವೃಷಭ: ವೃತ್ತಿ ಸಂಬಂಧಿತ ಗಡುವುಗಳಿಂದ ನಿಮಗೆ ಒತ್ತಡ . ಕಠಿಣ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುವ ಸಾಧ್ಯತೆ. ನೀವು ತಂಡದ ವಿಶ್ವಾಸಾರ್ಹ ಸದಸ್ಯರು. ಆದರೆ ಜಾಗರೂಕರಾಗಿರಿ. ಸ್ನೇಹಿತರ ಸಹವಾಸ, ಶಿಕ್ಷಣ, ಆರ್ಥಿಕ ಲಾಭ, ಭೂ ಲಾಭ ಇತ್ಯಾದಿಗಳಿಗೆ ಯೋಗವಿದೆ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಅನಿರೀಕ್ಷಿತ ಧನಾಗಮ. ಜೊತೆಗೆ ಹೆಚ್ಚುವರಿ ವೆಚ್ಚ. ಭವಿಷ್ಯಕ್ಕಾಗಿ ಸ್ವಲ್ಪ ಹಣ ಮೀಸಲಿಡಿ.

ಮಿಥುನ: ಕುಟುಂಬ ವಿಚಾರದಲ್ಲಿ ಈ ವಾರ ನೀವು ತೆಗೆದುಕೊಳ್ಳುವ ಪ್ರಬಲ ನಿರ್ಧಾರದಿಂದ ಉತ್ತಮ ಫಲಿಕಾಂಶ. ಸಂಶೋಧನಾ ಅಧ್ಯಯನದಲ್ಲಿ ತೊಡಗಿರುವವರಿಗೆ ಲಾಭ, ಆರ್ಥಿಕ ಸಮೃದ್ಧಿ ಇತ್ಯಾದಿಗಳಿಗೆ ಯೋಗವಿದೆ. ನಿಮ್ಮ ಶಕ್ತಿಯನ್ನು ಸ್ಥಿರವಾಗಿರಿಸಿಕೊಳ್ಳಿ. ನಿಮ್ಮ ಸಂಬಂಧಿಕರಿಂದ ಹಣಕಾಸಿನ ವಿಷಯವಾಗಿ ಸಿಹಿ ಸುದ್ದಿ . ನಿಮ್ಮ ಕಠಿಣ ಪರಿಶ್ರಮದಿಂದ ಆದಾಯದ ಬೆಳವಣಿಗೆಯಲ್ಲಿ ಫಲ ನೀಡುತ್ತದೆ.

ಕಟಕ: ಮಹಾನ್ ತಪಸ್ವಿಗಳ ಸಹವಾಸ. ಬಾಸ್‌ಗಳು ಮತ್ತು ಕ್ಲೈಂಟ್‌ಗಳಿಂದ ಹೆಚ್ಚಿನ ನಿರೀಕ್ಷೆ ಬೇಡ. ಈ ವಾರ ನಿಮ್ಮ ಪ್ರಯತ್ನಗಳು ಫಲ ನೀಡುತ್ತವೆ. ಹೊಸ ಆದಾಯದ ಮೂಲ ಸೃಷ್ಟಿ. ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿರುವವರಿಗೆ ಲಾಭ. ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅನೇಕ ಪ್ರಯೋಜನಗಳ ಯೋಗ. ಮದುವೆಗೆ ಉತ್ತಮ ಸಮಯ.

ಸಿಂಹ: ಇತರ ಕೆಲಸ ಕಾರ್ಯಗಳಿಂದ ಉತ್ತಮ ಫಲಿತಾಂಶ. ಉದ್ಯೋಗಾಕಾಂಕ್ಷಿಗಳು ಆರೋಗ್ಯ ರಕ್ಷಣೆ, ವಿಮೆ ಕ್ಷೇತ್ರದಲ್ಲಿರುವವರಿಗೆ ಲಾಭ. ಹಣಕಾಸಿನ ವೆಚ್ಚಗಳು ಹೆಚ್ಚು. ಏಜೆಂಟ್ ಕೆಲಸವು ಲಾಭ ತರುತ್ತದೆ. ಪ್ರಯಾಣದಿಂದ ಹೊಸ ಆದಾಯದ ಮಾರ್ಗ ಸಿಗುತ್ತದೆ. ದಂಪತಿಗಳ ವಾದ ಉಲ್ಬಣ, ಹೆಚ್ಚು ಸಮಯ ಒಟ್ಟಿಗೆ ಕಾಲ ಕಳೆಯಿರಿ, ಇದರಿಂದ ಸಂಬಂಧದಲ್ಲಿ ಸುಧಾರಣೆಯಾಗುತ್ತದೆ. ಒಂಟಿಯಾಗಿರುವವರಿಗೆ ಉತ್ತಮ ಸಮಯ.

ಕನ್ಯಾ: ವೃತ್ತಿ ಬದುಕಿನಲ್ಲಿ ಭಾರೀ ಯಶಸ್ಸು. ಸಹೋದ್ಯೋಗಿಗಳಿಂದ ಕಿರಿಕಿರಿ. ನಿಮ್ಮ ಮೇಲಧಿಕಾರಿಗಳಿಂದ ನಿಮಗೆ ಸೂಕ್ತ ಬೆಂಬಲ. ಸಾಮಾಜಿಕ ವೆಚ್ಚಗಳು ಸಾಮಾನ್ಯಕ್ಕಿಂತ ಹೆಚ್ಚಾಗಿರಬಹುದು. ಆದರೆ ಇದು ಹೊಸ ಆದಾಯದ ಅವಕಾಶಗಳನ್ನು ಸಹ ತರುತ್ತದೆ. ಆರ್ಥಿಕ ಲಾಭ, ಭೂ ಸ್ವಾಧೀನ, ಸಮೃದ್ಧಿ, ಕೀರ್ತಿ, ಪ್ರಾಣಿಗಳ ಖರೀದಿ ಮತ್ತು ಮಾರಾಟದಿಂದ ಲಾಭ.

ತುಲಾ: ನಿಮ್ಮ ವೃತ್ತಿ ಹೊರತುಪಡಿಸಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಅದರ ಪ್ರತಿಫಲಗಳು ಯೋಗ್ಯವಾಗಿರುತ್ತವೆ. ಸವಾಲುಗಳು ಯಶಸ್ಸಾಗಿ ಪರಿವರ್ತನೆ. ನಿಮ್ಮ ಪ್ರಯತ್ನಗಳಿಂದ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುವ ಸಮಯ ಇದು. ಅದೃಷ್ಟ, ಉನ್ನತ ಅಧಿಕಾರ ಪ್ರಾಪ್ತಿ, ಸಂಪತ್ತು ಪ್ರಾಪ್ತಿ, ಮದುವೆ ಮತ್ತು ವಿದೇಶದಲ್ಲಿ ವಾಸಿಸುವ ಯೋಗ.

ವೃಶ್ಚಿಕ: ಸಹೋದ್ಯೋಗಿಗಳೊಂದಿಗೆ ನಿಕಟ ಸಂಬಂಧ, ಯೋಜಿಸಿದ್ದಕ್ಕಿಂತ ಮುಂಚಿತವಾಗಿ ಕೆಲಸ ಪೂರ್ಣ. ಕಚೇರಿಯಲ್ಲಿ ನಿಮ್ಮ ತಂಡದೊಂದಿಗೆ ಉತ್ತಮವಾಗಿ ವ್ಯವಹರಿಸಿ. ಈ ಹಿಂದೆ ನೀಡಿದ್ದ ಹಣ ಮರುಪಾವತಿ. ದಂಪತಿಗಳಿಗೆ ಈ ವಾರ ಯೋಗ್ಯ. ಸೋಮಾರಿತನದ ಬದಲು ಕೆಲಸ ಮಾಡಿದರೆ, ನೀವು ಅನೇಕ ಪ್ರಯೋಜನಗಳನ್ನು ಅನುಭವಿಸುವಿರಿ.

ಧನಸ್ಸು: ವೃತ್ತಿ ಜೀವನದಲ್ಲಿ ಸ್ವಲ್ಪ ಮಟ್ಟಿನ ಏರು ಪೇರು. ಕೃಷಿಯಲ್ಲಿ ಲಾಭ, ಸಮಾಜದಲ್ಲಿ ಗೌರವ, ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ, ಮಾರಾಟದಿಂದ ಲಾಭ, ಆರಾಮದಾಯಕ ಜೀವನ, ಮೋಸ ಹೋಗುವ ಸಾಧ್ಯತೆ, ದೇಹದಲ್ಲಿ ಗಾಯಗೊಳ್ಳುವ ಮತ್ತು ಅನಿರೀಕ್ಷಿತ ಹಾನಿಯಾಗುವ ಸಾಧ್ಯತೆಯೂ ಇದೆ, ಆದ್ದರಿಂದ ಇದು ಎಚ್ಚರಿಕೆಯಿಂದ ಕೆಲಸ ಮಾಡುವ ಸಮಯವೂ ಆಗಿದೆ.

ಮಕರ: ವೃತ್ತಿಯಲ್ಲಿ ಹೆಚ್ಚಿನ ಮನ್ನಣೆ, ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಉತ್ತಮ ಫಲಿತಾಂಶ ಪಡೆಯಬಹುದು. ನಿಮಗೆ ನೀಡಿರುವ ಕೆಲಸವನ್ನು ಶೀಘ್ರವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತೀರಿ. ಮನೆ ಅಥವಾ ಕೆಲಸದಲ್ಲಿ ಅನಿರೀಕ್ಷಿತ ನಿರ್ವಹಣಾ ವೆಚ್ಚಗಳು ಉದ್ಭವಿಸಬಹುದು. ಸ್ನೇಹಿತರಿಂದ ಹೆಚ್ಚುವರಿ ಆದಾಯ, ಶಾಂತ ಮತ್ತು ಪ್ರಾಮಾಣಿಕರಾಗಿರಿ.

ಕುಂಭ: ಕೆಲಸದ ಹೊರೆ ಹೆಚ್ಚಳ. ಆದರೆ ಹೊಸ ಕೌಶಲ್ಯಗಳನ್ನು ಕಲಿಯುವುದು ನಿಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ಸಹೋದ್ಯೋಗಿ ಗಳ ಬೆಂಬಲ. ಆಕಸ್ಮಿಕ ಧನ ಲಾಭ ಸಂಗಾತಿಯೊಂದಿಗ ಹೆಚ್ಚಿನ ಸಂಘರ್ಷ ಬೇಡ. ನೀವಿಬ್ಬರೂ ಕಲೆಯ ಮೂಲಕ ಗುಣಮಟ್ಟದ ಸಮಯವನ್ನು ಆನಂದಿಸುತ್ತೀರಿ, ಪ್ರಣಯವನ್ನು ಮರಳಿ ತರುತ್ತೀರಿ. ಸುಖಾ ಸುಮ್ಮನೆ ಸಮಯ ಹಾಗಗೂ ಹಣ ವ್ಯರ್ಥ ಮಾಡದಿರಿ.

ಮೀನ:ಒಳ್ಳೆಯ ಸಮಯ. ಮಾನಸಿಕ ಸಂತೋಷ, ಅಧಿಕಾರ ಪ್ರಾಪ್ತಿ, ಕುಟುಂಬದಲ್ಲಿ ಮದುವೆ, ಕೆಲಸದಲ್ಲಿ ಯಶಸ್ಸು. ನೀವು ಸೋಮಾರಿತನ ಬಿಟ್ಟು ಸರಿಯಾಗಿ ಕೆಲಸ ಮಾಡಿದರೆ, ಇದು ದೊಡ್ಡ ಬದಲಾವಣೆಗಳಿಗೆ ಯೋಗ. ಅನಗತ್ಯ ಖರ್ಚುಗಳು, ಹೊಟ್ಟೆಯ ಕಾಯಿಲೆಗಳು, ಪಾದಗಳ ಕಾಯಿಲೆಗಳು ಮತ್ತು ಅಲರ್ಜಿಯಿಂದ ಉಂಟಾಗುವ ಕಾಯಿಲೆಗಳಿಗೆ ಇದು ಯೋಗವಾಗಿದೆ, ಆದ್ದರಿಂದ ಜಾಗರೂಕರಾಗಿರಿ.

ಜ್ಯೋತಿಷಿ: ಉನ್ನಿಕೃಷ್ಣನ್ ತೆಕ್ಕೆಪ್ಪಟ್ಟು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೌದಿಯಲ್ಲಿ ಬಸ್–ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ: 45 ಮಂದಿ ಭಾರತೀಯ ಯಾತ್ರಿಕರು ದುರ್ಮರಣ, ಸಹಾಯವಾಣಿ ಆರಂಭ

"ನನಗೆ ಚಿಂತೆಯೇ ಇಲ್ಲ. ಅಲ್ಲಾಹ್ ಜೀವ ಕೊಟ್ಟಿದ್ದಾನೆ.. ಅವನೇ ತೆಗೆದುಕೊಳ್ಳುತ್ತಾನೆ": ಕೋರ್ಟ್ ತೀರ್ಪಿಗೂ ಮೊದಲು ಶೇಖ್ ಹಸೀನಾ!

ಬಿಹಾರದಲ್ಲಿ ಶಾಕಿಂಗ್ ಟ್ವಿಸ್ಟ್: ಎನ್ ಡಿಎಗೆ ಲಾಲೂ ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ ಬೆಂಬಲ!

ಬಿಹಾರ: ನ. 20ಕ್ಕೆ ನೂತನ ಸಿಎಂ ಪದ ಗ್ರಹಣ, ಪ್ರಧಾನಿ ಮೋದಿ ಸಮಾರಂಭದಲ್ಲಿ ಭಾಗಿ!

ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್: ಸಿಎಂ ಸಿದ್ದರಾಮಯ್ಯ ಓಟಕ್ಕೆ 'ಬಂಡೆ' ಬ್ರೇಕ್! KN ರಾಜಣ್ಣ ಕಮ್ ಬ್ಯಾಕ್?

SCROLL FOR NEXT