ಮೇಷ (ಮಾರ್ಚ್ 21-ಏಪ್ರಿಲ್ 19)
ಉದ್ಯೋಗ: ಕಚೇರಿಯಲ್ಲಿ ಉನ್ನತ ಸ್ಥಾನ, ಆದರೆ ಸಹೋದ್ಯೋಗಿಗಳ ಬೆಂಬಲ ಅತ್ಯಗತ್ಯ
ಹಣಕಾಸು: ಮನೆ ಅಥವಾ ಕಾರನಿಂದಾಗಿ ಅಧಿಕ ವೆಚ್ಚಗಳ ಸಾಧ್ಯತೆ. ವಿವೇಚನಾಯುತವಾಗಿ ಖರ್ಚುಮಾಡುವುದು ಒಳಿತು
ದಾಂಪತ್ಯ: ಹಿಂದಿನ ಘಟನೆಗಳ ಪುನರಾವರ್ತನೆಯಿಂದ ಮರೆಯಾಗಿರುವ ಸತ್ಯಗಳು ಹೊರಗೆ ಬರುವ ಸಾಧ್ಯತೆ. ಈ ಸವಾಲುಗಳನ್ನು ಶಾಂತವಾಗಿ ನಿರ್ವಹಿಸಿ.
ಮಿಥುನ (ಮೇ 21-ಜೂನ್ 20)
ಉದ್ಯೋಗ: ಕೆಲಸದ ವಿಚಾರವಾಗಿ ನಿಮ್ಮ ನಿರ್ಧಾರಗಳು ಅಚಲವಾಗಿರುತ್ತವೆ. ಹೊಸ ಪ್ರಾಜೆಕ್ಟ್ ಸಿಗುವ ಅವಕಾಶ. ನಿಮ್ಮ ಮನಸ್ಸಲ್ಲು ಸ್ಥಿರವಾಗಿಸಿ.
ಹಣಕಾಸು: ಹಣಕಾಸಿನ ವಿಚಾರವಾಗಿ ಹೊಸ ಸುದ್ದಿ ಬರುವ ಸಾಧ್ಯತೆ. ವರಮಾನ ವೃದ್ಧಿಗಾಗಿ ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ.
ದಾಂಪತ್ಯ: ನಿಮ್ಮ ಪ್ರಣಯ ಜೀವನವು ಉತ್ತಮವಾಗಿರುತ್ತದೆ. ಭವಿಷ್ಯದ ಬಗ್ಗೆಗಿನ ಚರ್ಚೆ ಉತ್ತಮ ಫಲ ನೀಡುತ್ತದೆ. ಹೊಸ ವ್ಯಕ್ತಿಗಳು ನಿಮಗೆ ಆಕರ್ಷಿತರಾಗಬಹುದು.
ಕಟಕ (ಜೂನ್ 21-ಜುಲೈ 22)
ಉದ್ಯೋಗ: ಹಳೆಯ ಪ್ರಾಜೆಕ್ಟ್ ಗಳ ಪುನರಾವಲೋಕನ ಉತ್ತಮ. ಹೊಸ ಕ್ಲೈಂಟ್‌ಗಳಿಂದ ಹೆಚ್ಚಿನ ನಿರೀಕ್ಷೆ ಬೇಡ. ಈ ಸಮಯಗಲ್ಲಿ ಆತೀವ ಕೆಲಸದ ಒತ್ತಡ ಸಾಧ್ಯತೆ, ಆದರೆ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ.
ಹಣಕಾಸು: ಒಂದು ಹೊಸ ಆದಾಯದ ಮಾರ್ಗ. ಖರ್ಚು ನಿಯಂತ್ರಿಸಲು ಐಷಾರಾಮಿ ಜೀವನದ ವೆಚ್ಚಗಳನ್ನು ಕಡಿಮೆ ಮಾಡಿ, ಆದಾಯಕ್ಕಿಂತ ಅಧಿಕ ವೆಚ್ಚದ ಸಾಧ್ಯತೆ.
ದಾಂಪತ್ಯ: ಸಂಸಾರದ ವಿಚಾರವಾಗಿ ಸೂಕ್ತವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಿ. ಈ ವಾರ ಪರಸ್ಪರ ಸಮಯ ಕೊಟ್ಟುಕೊಳ್ಳಲು ಸಾಧ್ಯವಾಗದಿರಬಹುದು. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಸಮಯ.
ಸಿಂಹ (ಜುಲೈ 23-ಆಗಸ್ಟ್ 22)
ಉದ್ಯೋಗ: ಈ ವಾರ ಅತೀವ ಕೆಲಸದ ಒತ್ತಡ, ಆದರೆ ಅದರಿಂದ ಉತ್ತಮ ಫಲಿತಾಂಶ. ಉದ್ಯೋಗಿಗಳು ಆರೋಗ್ಯ ರಕ್ಷಣೆ ಬಗ್ಗೆ ಗಮನ ಹರಿಸುವುದು ಒಳಿತು.
ಹಣಕಾಸು: ಈ ಸಮಯದಲ್ಲಿ ಹಣಕಾಸಿನ ವೆಚ್ಚ ಹೆಚ್ಚಳ ಸಾಧ್ಯತೆ. ಸಂಸ್ಥೆಗೆ ಹೆಚ್ಚಿನ ಲಾಭ. ದೂರ ಪ್ರಯಾಣದಿಂದ ಹೊಸ ಆದಾಯ ಕ್ಷೇತ್ರಗಳ ಪರಿಚಯ.
ದಾಂಪತ್ಯ: ಸಂಗಾತಿಯೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ಒಟ್ಟಿಗೆ ಹೆಚ್ಚು ಸಮಯ ಕಳೆಯುವುದು ಉತ್ತಮ. ಒಂದು ಸಣ್ಣ ಪ್ರಯಾಣ ಮಾಡುವುದರಿಂದ ಇಬ್ಬರ ಮನಸ್ಥಿತಿ ಉತ್ತಮವಾಗಿರುತ್ತದೆ.
ಕನ್ಯಾ (ಆಗಸ್ಟ್ 23-ಸೆಪ್ಟೆಂಬರ್ 22)
ಉದ್ಯೋಗ: ಕೆಲಸಕ್ಕೆ ಅಗತ್ಯವಾಗಿ ಸಮಯವನ್ನು ಸಿದ್ದ ಪಡಿಸಿಕೊಳ್ಳಿ, ಇದರಿಂದ ನೌಕರಿಯಲ್ಲಿ ಎದುರಾಗಬಹುದಾದಿ ಸಮಸ್ಯೆ ತಪ್ಪುತ್ತದೆ. ಆಪ್ತರಿಂದ ಹೆಚ್ಚಿನ ಸಹಾಯ ಒದಗಲಿದೆ. ನಿಮ್ಮ ಮೇಲಧಿಕಾರಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.
ಹಣಕಾಸು : ಸಾಮಾಜಿಕ ವೆಚ್ಚಗಳು ಸಾಮಾನ್ಯವಾಗಿ ಹೆಚ್ಚಾಗುವ ಸಾಧ್ಯತೆ. ಆದರೆ ಅದು ಹೊಸ ಆದಾಯ ಬರಲು ದಾರಿ ಮಾಡಿಕೊಡುತ್ತದೆ.
ದಾಂಪತ್ಯ: ಸಂಬಂಧದಲ್ಲಿ ಸ್ವಲ್ಪ ಮಟ್ಟಿನ ಕಿರಿಕಿರಿ ಆರಂಭ, ವಾರಾಂತ್ಯದಲ್ಲಿ ಎಲ್ಲಾ ತೊಂದರೆಗಳಿಂದ ಮುಕ್ತಿ. ಸಂಗಾತಿಯೊಡನೆ ಸಮಾಧಾನದಿಂದ ವ್ಯವಹರಿಸಿ.
ತುಲಾ (ಸೆಪ್ಟೆಂಬರ್ 23-ಅಕ್ಟೋಬರ್ 22)
ಉದ್ಯೋಗ: ಕರಿಯರಿನಲ್ಲಿ ಕೆಲವು ಮಂದಿ ನಿಮ್ಮನ್ನು ನಿರ್ಲಕ್ಷ್ಯಿಸುವ ಸಾಧ್ಯತೆ. ಆದರೆ ನಿಮ್ಮ ಪ್ರಯತ್ನದಿಂಗ ಸೂಕ್ತ ಪ್ರತಿಫಲ ಸಿಗಲಿದೆ. ಸವಾಲುಗಳು ಯಶಸ್ಸಿನ ಮೆಟ್ಟಿಲಾಗುತ್ತವೆ.
ಹಣಕಾಸು: ಷೇರು ವ್ಯವಹಾರಗಳು ಲಾಭಕರ. ಸ್ನೇಹಿತರಿಂದ ಧನಾಗಮ.
ದಾಂಪತ್ಯ: ಸಂಗಾತಿಯೊಂದಿಗಿನ ಸಂಘರ್ಷ ತಪ್ಪಿಸಿಕೊಳ್ಳಲು ನಿಮಗೆ ಉತ್ತಮ ಅವಕಾಶ, ಅತಿಯಾಗಿ ವಾದ ಮಾಡುವುದನ್ನು ಬಿಡಿ. ಕೆಲ ವಿಷಯಗಳನ್ನು ಲಘುವಾಗಿ ಪರಿಗಣಿಸುವುದು ಉತ್ತಮ
ವೃಶ್ಚಿಕ (ಅಕ್ಟೋಬರ್ 23-ನವೆಂಬರ್ 21)
ಉದ್ಯೋಗ: ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ. ಇದರಿಂದ ತಂಡದ ಕೆಲಸ ಸುಲಭವಾಗುತ್ತದೆ, ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸುವುದು ಸೂಕ್ತ.
ಹಣಕಾಸು: ಅನಿರೀಕ್ಷಿತ ಧನಾಗಮ. ಹೊಸ ಆದಾಯದ ಕಲ್ಪನೆಗಳಿಗೆ ಸ್ಫೂರ್ತಿ. ಹೊಸ ಕೆಲಸಗಳಿಂದ ಉತ್ತಮ ಆದಾಯ ನಿರೀಕ್ಷೆ.
ದಾಂಪತ್ಯ: ಸಂವಹನವು ಉತ್ತಮವಾಗಿರುತ್ತದೆ. ಸುಮಧುಕ ಕ್ಷಣಗಳು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಉದ್ಯೋಗಸ್ಥಳದಲ್ಲಿ ಅಪರಿಚಿತರೊಂದಿಗೆ ಎಚ್ಚರಿಕೆಯಿಂದಿರಿ.
ಧನಸ್ಸು (ನವೆಂಬರ್ 22-ಡಿಸೆಂಬರ್ 21)
ಉದ್ಯೋಗ: ಈ ವಾರದ ಸಂವಹನದ ಕೊರತೆ. ಕಳೆದುಹೋದ ಸಮಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಸಂಘಟಿತವಾಗಿ ಮುಂದುವರಿಯಿರಿ. ಯಾವುದೇ ನಿರ್ಧಾರಕ್ಕೂ ಮುನ್ನ ಎರಡು ಬಾರಿ ಪರಿಶೀಲಿಸಿ.
ಹಣಕಾಸು: ಮನೆಯಲ್ಲಿ ಉದ್ಯೋಗಸ್ಥಳದಲ್ಲಿ ಅನಿರೀಕ್ಷಿತ ವೆಚ್ಚಗಳು. ಸ್ನೇಹಿತರು ಅಧಿಕ ಆದಾಯದ ಸಾಧ್ಯತೆ.
ದಾಂಪತ್ಯ: ಭೂತಕಾಲದೊಂದಿಗೆ ಸತ್ಯಗಳು ಹೊರಬರುವ ಸಾಧ್ಯತೆ, ಹಿಂದಿನ ನೋವುಗಳಿಂದ ಅಶಾಂತತೆ, ಸಂಗಾತಿಯೊಂದಿಗೆ ಪ್ರಾಮಾಣಿಕತೆಯಿಂದಿರಿ.
ಮಕರ (ಡಿಸೆಂಬರ್ 22-ಜನವರಿ 19)
ಉದ್ಯೋಗ: ಕೆಲಸದಲ್ಲಿ ಈ ವಾರ ಹೆಚ್ಚಿನ ಒತ್ತಡ. ಉದ್ವೇಗಕ್ಕೆ ಒಳಗಾಗಬೇಡಿ. ಉತ್ತಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರಿಂದ ಸೂಕ್ತ ಸಲಹೆ ಪಡೆಯಿರಿ, ಶ್ರಮಕ್ಕೆ ತಕ್ಕ ಫಲಿತಾಂಶ.
ಹಣಕಾಸು: ಅಧಿಕ ಆದಾಯ ಪ್ರವಾಹ ನಿರೀಕ್ಷೆ. ಆಸ್ತಿ ಖರೀದಿ ಸಾಧ್ಯತೆ.
ದಾಂಪತ್ಯ: ಪ್ರಯಾಣದಿಂದ ಸಂತಸ. ಆತ್ಮವಿಶ್ವಾಸದಿಂದ ಮುಂದೆ ಹೆಜ್ಜೆ ಇಡಿ. ಕುಟುಂಬಕ್ಕೆ ಸಂಬಂಧಿಸಿದ ಜವಾಬ್ದಾರಿ ಪಡೆಯಲು ಸೂಕ್ತಕಾಲ.
ಕುಂಭ (ಜನವರಿ 20-ಫೆಬ್ರುವರಿ 18)
ಉದ್ಯೋಗ: ಕಚೇರಿಯಲ್ಲಿ ಹೆಚ್ಚಿನ ಕೆಲಸದ ಒತ್ತಡ. ನಿಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಲು ಸದವಕಾಶ. ಪರಿಸ್ಥಿತಿಗಳು ಕಷ್ಟ ಎನಿಸಿದರೇ ಹಿರಿಯರ ಸಲಹೆ ಸೂಕ್ತ
ಹಣಕಾಸು: ಅನಿರೀಕ್ಷಿತ ದಾರಿಯಿಂದ ಅಧಿಕ ಆದಾಯ. ಭೂತಕಾಲದಲ್ಲಿ ನೀವು ಮಾಡಿದ ಸಹಾಯದಿಂದ ನಿಮಗೆ ಧನಾಗಮ
ದಾಂಪತ್ಯ: ಸಂಗಾತಿಯೊಂದಿಗೆ ಆಹ್ಲಾದಕರ ಸಮಯ ಕಳೆಯುವ ಸಾಧ್ಯತೆ. ಪರಸ್ಪರ ಬೆಂಬಲದೊಂದಿ ಉತ್ತಮ ಕಾರ್ಯ ಕೈಗೊಳ್ಳುವ ಸಮಯ.
ಮೀನ (ಫೆಬ್ರುವರಿ 19-ಮಾರ್ಚ್ 20)
ಉದ್ಯೋಗ: ನಿಮ್ಮ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ. ಮೇಲಧಿಕಾರಿಗಳಿಂದ ಮೆಚ್ಚುಗೆ. ಒಂದು ವೇಳೆ ನೀವು ಹೊಸ ನೌಕರಿ ಹುಡುಕುತ್ತಿದ್ದರೇ ತಕ್ಷಣವೇ ನಿಮಗೆ ಉದ್ಯೋಗ ಸಿಗಲಿದೆ.
ಹಣಕಾಸು: ಸಂಬಂಧಿಕರಿಂದ ಆರ್ಥಿಕ ಸಹಾಯ, ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಉತ್ತಮ.
ದಾಂಪತ್ಯ: ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದು ಉತ್ತಮ. ಸಂಗಾತಿ ಆರೋಗ್ಯದ ಬಗ್ಗೆ ಗಮನ ನೀಡಿ. ಕುಟುಂಬದಲ್ಲಿ ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಸಂತಸ. ಪ್ರೀತಿ ಪಾತ್ರರನ್ನು ಸಂತೋಷ ಪಡಿಸುವ ಸಮಯ.
ಮಾಹಿತಿ: ಅಮರಕೋಶ