ಹಿಂದೂ ಸನಾತನ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಇಂದು ನವರಾತ್ರಿಯ ಮೂರನೇ ದಿನ ಚಂದ್ರಘಂಟಾ (Chandraghanta) ದೇವಿಯನ್ನು ಪೂಜಿಸಲಾಗುವುದು.
ದಿನದ ಮಹತ್ವ
ಶರನ್ನವರಾತ್ರದ ಒಂಬತ್ತು ದಿನಗಳ ಕಾಲ ದೇವಿ ದುರ್ಗೆಯ ವಿವಿಧ ರೂಪಗಳನ್ನು ಆರಾಧಿಸಲಾಗುತ್ತದೆ. ಮೂರನೇ ದಿನ ದೇವಿ ಪಾರ್ವತಿಯ ವಿವಾಹಿತ ರೂಪವಾದ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ದೇವಿ ಹಣೆಯಲ್ಲಿ ಗಂಟೆ ಆಕಾರದ ಅರ್ಧ ಚಂದ್ರವನ್ನು ಧರಿಸಿರುತ್ತಾರೆ. ಶಿವನೊಂದಿಗೆ ವಿವಾಹದ ನಂತರದ ಅವಾರವನ್ನು ಚಂದ್ರಘಂಟಾ ಎಂದು ಕರೆಯಲಾಗುತ್ತದೆ.
ಸಿಂಹದ ಮೇಲೆ ಸವಾರಿ ಮಾಡುವ, ಚಿನ್ನದಂತಹ ದೇಹದ, ಮೂರು ಕಣ್ಣು ಮತ್ತು ಹತ್ತು ಕೈಗಳನ್ನು ಹೊಂದಿರುವ ದೇವಿಯ ಅವತಾರವಾಗಿದೆ. ದೇವಿಯು ಕಮಲ, ಕಮಂಡಲ, ಜಪಮಾಲೆ, ತ್ರಿಶೂಲ, ಖಡ್ಗ, ಗದೆ, ಬಾಣ ಮತ್ತು ಬಿಲ್ಲನ್ನು ಧರಿಸಿದ್ದಾರೆ. ಇವರು ಸೂರ್ಯನನ್ನು ಆಳುವವರಾಗಿದ್ದು, ಭಕ್ತರಿಗೆ ಧೈರ್ಯ, ಸಂತೋಷ, ಐಶ್ವರ್ಯ ಮತ್ತು ಆರೋಗ್ಯ ನೀಡುತ್ತಾರೆ ಎಂಬ ನಂಬಿಕೆ ಇದೆ. ಚಂದ್ರಘಂಟಾದೊಂದಿಗೆ ರಾಯಲ್ ಬ್ಲೂ ಬಣ್ಣ ಸಂಬಂಧಿಸಿದ್ದು ಈ ಬಣ್ಣ ಧರಿಸುವುದು ಶುಭವೆಂದು ನಂಬಲಾಗುತ್ತದೆ.
ಚಂದ್ರಘಂಟಾ ದೇವಿಗೆ ಪಾಯಸ, ಅಕ್ಕಿ ಕಡುಬು ಮತ್ತು ಹಾಲಿನಿಂದ ತಯಾರಿಸಿದಂತಹ ಸಿಹಿ ತಿಂಡಿಗಳನ್ನು ಅರ್ಪಿಸಬೇಕು. ಇದಲ್ಲದೇ, ಸಕ್ಕರೆ ಅಥವಾ ಸಕ್ಕರೆ ಮಿಠಾಯಿಯನ್ನು ಕೂಡ ಅರ್ಪಿಸಬಹುದು.