ಗೂಗಲ್ ಸ್ವಯಂ ಚಾಲಿತ ಕಾರು 
ವಾಹನ

ಅಂತು ರೋಡಿಗಿಳಿದ ಸ್ವಯಂಚಾಲಿತ ಗೂಗಲ್ ಕಾರು

ಗೂಗಲ್ ನ ಸ್ವಯಂಚಾಲಿತ ಕಾರು ಹಲವು ಪರೀಕ್ಷೆಗಳ ನಂತರ ಕೊನೆಗೂ ರಸ್ತೆಗಿಳಿದಿದೆ...

ಗೂಗಲ್ ನ ಸ್ವಯಂಚಾಲಿತ ಕಾರು ಹಲವು ಪರೀಕ್ಷೆಗಳ ನಂತರ ಕೊನೆಗೂ ರಸ್ತೆಗಿಳಿದಿದೆ.

ನ್ಯಾನೋ ಥರ ಕಾಣುವ ಬಸವನ ಹುಳು ಆಕಾರದ ಈ ಚಿಕ್ಕ ಕಾರು ಸೆನ್ಸಾರ್ ಮತ್ತು ಇತರೆ ಗಣಕೀಕೃತ ಗ್ಯಾಡ್ಜೆಟ್‍ಗಳನ್ನು ಅವಲಂಬಿಸಿಯೇ ಕಾರ್ಯ ನಿರ್ವಹಿಸುವಂತಿದ್ದು, ತೀರ ಅಗತ್ಯದ ಸಂದರ್ಭಗಳಲ್ಲಿ ಅದನ್ನು ಮನುಷ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ಸುಮಾರು 20ಕ್ಕೂ ಹೆಚ್ಚು ಗೂಗಲ್ ನ ಲೆಕ್ಸಸ್ ಕಾರುಗಳು ಈಗಾಗಲೇ ಓಡಾಡುತ್ತಿವೆಯಾದರೂ, ಸ್ವಯಂಚಾಲಿತ ಕಾರುಗಳ ಪರಿಚಯ ಈ ರಸ್ತೆಗಳಿಗೆ ಹೊಸತು ಎಂದು ಗೂಗಲ್ ಹೇಳಿದೆ. ಇದರ ಗರಿಷ್ಠ ವೇಗ ಗಂಟೆಗೆ 40ಕಿಮೀ ಇದ್ದು, ತುರ್ತು ಸಮಯದಲ್ಲಿ ಡ್ರೈವರ್‍ಗೆ ಜಾಗ, ಬೇರ್ಪಡಿಸಬಲ್ಲ ಸ್ಟೀಯರಿಂಗ್ ವೀಲ್, ಆಕ್ಸಿಲರೇಟರ್ ಪೆಡಲ್ ಮತ್ತು ಬ್ರೇಕ್ ಪೆಡಲ್ ಗಳು ಕೂಡ ಇದರಲ್ಲಿವೆ. ಅಪಘಾತದ ಸಾಧ್ಯತೆಗಳು ಅತ್ಯಂತ ಕಡಿಮೆ ಇದ್ದು, ಹಿಂದಿನಿಂದ ಬೇರೆ ವಾಹನ ಗುದ್ದಿದರೆ ಮಾತ್ರ ಅಪಘಾತವಾಗುವ ಸಂಭವವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ!

ಅಕ್ರಮ ಆಸ್ತಿ ಗಳಿಕೆ: ರಾಜ್ಯಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಒಟ್ಟು 29.61 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ!

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ