ಟಿಯಾಗೋ ಎನ್ಆರ್ ಜಿx 
ವಾಹನ

ಒರಟಾದ ರಸ್ತೆಗಳಿಗೆ ಹೊಚ್ಚ ಹೊಸ 'ಟಾಟಾ ಟಿಯಾಗೋ ಎನ್‌ಆರ್‌ಜಿ'

ತನ್ನ 'ಎಂದೆಂದಿಗೂ ವಿನೂತನ' ಬ್ರ್ಯಾಂಡ್ ಪ್ರಯಾಣವನ್ನು ಮುಂದುವರಿಸಿರುವ ಟಾಟಾ ಮೋಟಾರ್ಸ್ ಹೊಚ್ಚ ಹೊಸ ಟಿಯಾಗೋ ಎನ್ಆರ್ಜಿ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಬೆಂಗಳೂರು: ತನ್ನ 'ಎಂದೆಂದಿಗೂ ವಿನೂತನ' ಬ್ರ್ಯಾಂಡ್ ಪ್ರಯಾಣವನ್ನು ಮುಂದುವರಿಸಿರುವ ಟಾಟಾ ಮೋಟಾರ್ಸ್ ಹೊಚ್ಚ ಹೊಸ ಟಿಯಾಗೋ ಎನ್ಆರ್ಜಿ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಈ ಮೂಲಕ ತನ್ನ ವಾಹನಗಳ ಸರತಿಗೆ ಹೊಸ ವಾಹನ ಸೇರ್ಪಡೆಯಾಗಿದ್ದು, ಟಾಟಾ ಟಿಯಾಗೋ ಎನ್ಆರ್ ಜಿ ಅನ್ನು 'ನಗರದ ಒರಟು ರಸ್ತೆಗಳಿಗೆ' ಹೊಂದಿಕೆಯಾಗುವಂತೆ ನಿರ್ಮಿಸಲಾಗಿದೆ.

ಟಿಯಾಗೋ ಎನ್ಆರ್ ಜಿ,  ಎಸ್ ಯುವಿ ವಿನ್ಯಾಸ ಹೊಂದಿರುವುದರ ಜೊತೆಗೆ, ಕಡಿದಾದ, ಕಠಿಣ ರಸ್ತೆಗಳಲ್ಲಿ ಎಗ್ಗಿಲ್ಲದೆ ಸಂಚಾರ ಮಾಡಬಯಸುವವರಿಗೆ ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಒದಗಿಸಿದೆ.

ಜಿಎನ್ ಸಿಎಪಿ ಇಂದ ಸುರಕ್ಷತಾ ಮಾನದಂಡದಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿರುವ ಟಿಯಾಗೋ, ಹಸಿರು, ಕೆಂಪು, ಬಿಳಿ, ಬೂದು ಬಣ್ಣಗಳಲ್ಲಿ ಲಭ್ಯವಿದೆ. ಇದರ ಶೋರೂಂ ದರ 6.57 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. 

ಎನ್ ಆರ್ ಜಿಯ ವಿಶಿಷ್ಟ ವಿನ್ಯಾಸ ಮತ್ತು ಸಾಮರ್ಥ್ಯಗಳ ಬಗ್ಗೆ ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪಿವಿಬಿಯು ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕ ಆರೈಕೆ ವಿಭಾಗದ ಉಪಾಧ್ಯಕ್ಷ  ರಾಜನ್ ಅಂಬಾ, ಟಾಟಾ ಟಿಯಾಗೊ ಎನ್ ಆರ್ ಜಿ ತನ್ನ ಹೆಸರಿನಂತೆಯೇ ನಿಜವಾಗಿಯೂ ಶಕ್ತಿಯುತವಾಗಿದೆ.

ಇತ್ತೀಚಿಗೆ ಮಾರುಕಟ್ಟೆಗೆ ಎಸ್ ಯುವಿಗಳ ಬಿಡುಗಡೆ ಒಂದು ಹೊಸ ಟ್ರೆಂಡ್ ಆಗಿ ಬದಲಾಗಿದೆ. ಇದು ಹೊರಭಾಗದಲ್ಲಿ ಮಾತ್ರ ಪ್ರಬಲವಾಗಿಲ್ಲ, ಜೊತೆಗೆ, ಒಳಾಂಗಣದಲ್ಲಿ ವೈಶಿಷ್ಟ್ಯ-ಲೋಡ್ ಮತ್ತು ಸ್ಟೈಲಿಶ್ ಆಗಿದೆ. ಜೊತೆಗೆ, ಒರಟಾದ ಭೂಪ್ರದೇಶಗಳಲ್ಲಿ ವಿಶೇಷ ಮೃದು ಚಾಲನೆಯ ಅನುಭವ ನೀಡುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನಗೇನೂ ಬೇಡ, ಯಾವುದಕ್ಕೂ ಆತುರ ಪಡಲ್ಲ' ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ: ಡಿಕೆ ಶಿವಕುಮಾರ್

‘ಅವರ ಕೈಗೆ ರಕ್ತ ಅಂಟಿದೆ’: SIR ಸಂಬಂಧಿತ 40 ಸಾವುಗಳನ್ನು ಉಲ್ಲೇಖಿಸಿ CECಗೆ ಟಿಎಂಸಿ ತರಾಟೆ

5 ದಶಕಗಳ ಹಿಂದೆಯೇ ಉಡುಪಿ ಹೊಸ ಆಡಳಿತ ಮಾದರಿಯನ್ನು ಪ್ರಸ್ತುತಪಡಿಸಿದೆ: ಪ್ರಧಾನಿ ಮೋದಿ

BBK ನಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ಧ್ರುವಂತ್: ತಾಳ್ಮೆ ಕಳೆದುಕೊಂಡ ಧನುಷ್, ಸೂರಜ್ ಮುಂದೇನಾಯ್ತು? Video!

ಹರಿಯಾಣ ವಿವಿ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಪುರಾವೆ ಕೇಳಿದ ಆರೋಪ: ಕೇಂದ್ರಕ್ಕೆ ಸುಪ್ರೀಂ ನೋಟಿಸ್

SCROLL FOR NEXT