1234, 999 - ಫ್ಯಾನ್ಸಿ ನಂಬರ್ ಬೇಕಾ? Online Desk
ವಾಹನ

ನಿಮ್ಮ ಗಾಡಿಗೂ 1234, 999, 1111 ಫ್ಯಾನ್ಸಿ ನಂಬರ್ ಬೇಕಾ? ಹೀಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿ!

ಬೈಕ್ ಇರಲಿ, ಕಾರ್ ಇರಲಿ 9999, 786, 1111, 1234 ತರಹದ ವಿವಿಐಪಿ ಸಂಖ್ಯೆ ಇದ್ರೆ ಲುಕ್ ಡಬಲ್ ಆಗುತ್ತಾ? ಆರ್‌ಟಿಒನಲ್ಲಿ ಈ ತರಹದ ಫ್ಯಾನ್ಸಿ ನಂಬರ್ ಅಥವಾ ವಿಐಪಿ ನಂಬರ್‌ಗೆ ಬೇರೆ ಬೇರೆಯಾಗಿ ಹರಾಜು ನಡೀತಾ ಇರುತ್ತೆ. ಹಣ ಕಟ್ಟಿ ನಿಮಗೆ ಇಷ್ಟದ ನಂಬರ್ ಬುಕ್ ಮಾಡ್ಕೋಬಹುದು! ಹೇಗೆ ಗೊತ್ತಾ?

VIP Vehicle Number Booking: ರಸ್ತೆಯಲ್ಲಿ ಓಡಾಡುವಾಗ ದುಬಾರಿ ಕಾರುಗಳನ್ನು ನೋಡೋದೇ ಒಂಥರಾ ಛಂದ, ಅದರಲ್ಲೂ, ಅವುಗಳ ನಂಬರ್ ಪ್ಲೇಟ್ ಕಂಡರೆ ಕಣ್ಣಿಗೆ ಹಬ್ಬ! ಯಾಕಂದ್ರೆ, ದುಬಾರಿ ಕಾರು (Expensive Car) ಅಂದ್ರೆ 1234, 999, 786, 000 ನಂತಹ ಫ್ಯಾನ್ಸಿ ನಂಬರ್ (Fancy Number) ಪ್ಲೇಟ್ ಅಂದ್ರೆ ವಿವಿಐಪಿ ನಂಬರ್ (VVIP Number)!

ಇನ್ನು, ಈ ಫ್ಯಾನ್ಸಿ ನಂಬರ್ ಪ್ಲೇಟ್ ಅಂದ್ರೆ ದುಬಾರಿ ಎಂದು ಅದರಿಂದ ದೂರವೇ ಉಳಿಯಲು ಪ್ರಯತ್ನಿಸುತ್ತಾರೆ. ಆದ್ರೆ, ನಿಮಗೆ ಗೊತ್ತಾ? ಈ ಫ್ಯಾನ್ಸಿ ನಂಬರ್ ಪಡೆಯಲು ಯಾವುದೇ ಆರ್‌ಟಿಒ ಕಚೇರಿಗೆ ಅಲೆಯಬೇಕಾಗಿಲ್ಲ. ಬದಲಿಗೆ ನಿಮ್ಮ ಮೊಬೈಲ್‌ನಲ್ಲಿ ಸುಲಭವಾಗಿ ಪಡೆಯಬಹುದು ಎಂದು? ಇಲ್ಲಿದೆ ನೋಡಿ ಆ ಕುರಿತ ಸ್ಟೆಪ್ ಬೈ ಸ್ಟೆಪ್ ಗೈಡ್:

ಸ್ಟೆಪ್ 1:

  1. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪರಿವಾಹನ್ ಅಧಿಕೃತ ವೆಬ್‌ಸೈಟ್ನ ಫ್ಯಾನ್ಸಿ ನಂಬರ್ ವಿಭಾಗಕ್ಕೆ ಭೇಟಿ ನೀಡಿ.

  2. ಇಲ್ಲಿ ನಿಮ್ಮ ಇಷ್ಟದ ನಂಬರ್ ಹುಡುಕಿ:

  • ಉದಾಹರಣೆಗೆ: ನಿಮ್ಮ ರಾಜ್ಯ (ಕರ್ನಾಟಕ) ಮತ್ತು ನಿಮ್ಮ ಹತ್ತಿರದ ಆರ್‌ಟಿಒ ಕೋಡ್ (KA-09, KA-45) ಆಯ್ಕೆಮಾಡಿ.

  • ತದನಂತರ ನಿಮಗೆ ಬೇಕಾದ ಸಂಖ್ಯೆಯನ್ನು (1234 ಅಥವಾ 0786) ನಮೂದಿಸಿ, ಆ ನಂಬರ್ ಇನ್ನು ಯಾರಿಗೂ ಹಂಚಿಕೆಯಾಗದೆ ಉಳಿದಿದೆಯಾ ಎಂದು ಚೆಕ್ ಮಾಡಿ.

ಸ್ಟೆಪ್ 2:

  • ಅದೇ ಪೋರ್ಟಲ್‌ನಲ್ಲಿ ಸಾರ್ವಜನಿಕ ಬಳಕೆದಾರರಾಗಿ ಆಗಿ ಹೊಸ ಅಕೌಂಟ್ ರಚಿಸಿ.

  • ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ನೀಡಿ ಲಾಗಿನ್ ಐಡಿ ಕ್ರಿಯೇಟ್ ಮಾಡಿ

ಸ್ಟೆಪ್ 3:

  • ಲಾಗಿನ್ ಆದ ನಂತರ, ನಿಮ್ಮ ಇಷ್ಟದ ನಂಬರ್ ಆಯ್ಕೆ ಮಾಡಿ.

  • ಆ ನಂಬರ್‌ನ ವರ್ಗಕ್ಕೆ (ಎಲೈಟ್, ಪ್ರೀಮಿಯಂ ಅಥವಾ ಸಾಮಾನ್ಯ ಚಾಯ್ಸ್ ನಂಬರ್) ನಿಗದಿಪಡಿಸಲಾದ ನೋಂದಣಿ ಫೀಸ್ ಮತ್ತು ಸ್ವಲ್ಪ ಅಡ್ವಾನ್ಸ್ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿ.

  • ಇನ್ನು, ಇ-ಹರಾಜು ಪ್ರಕ್ರಿಯೆಯು ಸಾಮಾನ್ಯವಾಗಿ 5 ದಿನಗಳ ಕಾಲ ನಡೆಯುತ್ತದೆ.

  • ಮೊದಲ 3 ದಿನಗಳು ನೋಂದಣಿಗೆ ಅವಕಾಶವಿದ್ದು, ಮುಂದಿನ 2 ದಿನಗಳು ಆನ್‌ಲೈನ್ ಹರಾಜು ನಡೆಯುತ್ತದೆ.

  • ಈ ವೇಳೆ ನಿಮ್ಮ ಸಂಖ್ಯೆಗೆ ಬೇರೆ ಯಾರಾದರೂ ಬಿಡ್ ಮಾಡಿದರೆ, ನೀವು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬಿಡ್ ಮಾಡಬೇಕಾಗುತ್ತದೆ.

ಸ್ಟೆಪ್ 4:

  • ಇ-ಹರಾಜು ಮುಗಿದ ನಂತರ ಅತಿ ಹೆಚ್ಚು ಬಿಡ್ ಮಾಡಿದವರಿಗೆ ಆ ನಂಬರ್ ಸಿಗುತ್ತದೆ ಜೊತೆಗೆ ಮೇಸೆಜ್ ಅಥವಾ ಇಮೇಲ್ ಮೂಲಕ ಮಾಹಿತಿ ಬರುತ್ತದೆ.

  • ನೀವು ಬಿಡ್ ಗೆದ್ದರೆ, ಬಾಕಿ ಉಳಿದ ಹಣವನ್ನು 5 ದಿನಗಳ ಒಳಗೆ ಆನ್‌ಲೈನ್‌ನಲ್ಲಿ ಪಾವತಿಸಿ ಅಲ್ಲೋಟ್ಮೆಂಟ್ ಲೆಟರ್ ಡೌನ್‌ಲೋಡ್ ಮಾಡಿಕೊಳ್ಳಬೇಕು.

  • ಒಂದು ವೇಳೆ ಹರಾಜಿನಲ್ಲಿ ಇಷ್ಟದ ನಂಬರ್ ನಿಮಗೆ ಸಿಗದಿದ್ದರೆ, ನಿಮ್ಮ ಅಡ್ವಾನ್ಸ್ ಹಣ ವಾಪಾಸ್ ನಿಮ್ಮ ಬ್ಯಾಂಕ್ ಖಾತೆಗೆ ರಿಫಂಡ್ ಆಗುತ್ತದೆ.

ಏತನ್ಮಧ್ಯೆ, ಹಂಚಿಕೆ ಪತ್ರ ಸಿಕ್ಕ 90 ದಿನಗಳ ಒಳಗಾಗಿ ನೀವು ಆ ನಂಬರ್ ಅನ್ನು ನಿಮ್ಮ ವಾಹನಕ್ಕೆ ಆರ್‌ಟಿಒ ಮೂಲಕ ನೋಂದಣಿ ಮಾಡಿಸಬೇಕು. ಅಲ್ಲದೆ, ಸರ್ಕಾರಿ ನಿಯಮಾವಳಿಗಳ ಪ್ರಕಾರ ನಿಮ್ಮ ವಾಹನಕ್ಕೆ ಅಧಿಕೃತ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

Biggboss Kannada ಅಗ್ನಿಪರೀಕ್ಷೆ: ಗೆಟ್ ಔಟ್, ಇದೆಲ್ಲಾ ಬೇಡ ಬ್ರೇ; ವಿನಯ್ ಗೌಡಗೆ ಸ್ಪರ್ಧಿ ತಿರುಗೇಟು, Video ವೈರಲ್!

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಕೊಲಂಬೊ ಟೆಸ್ಟ್‌ನಲ್ಲಿ ಭಾರತದ ಅಬ್ಬರ: 503/9ಕ್ಕೆ ಇನ್ನಿಂಗ್ಸ್ ಡಿಕ್ಲೇರ್, ಲಂಕಾ ಇನ್ನಿಂಗ್ಸ್ ಗೆ ಮಳೆ ಅಡ್ಡಿ

ಬೆಂಗಳೂರಿನಲ್ಲಿ ಜಪಾನಿಗನ ಬಂಧನ: 19 ದಿನ ಜೈಲುವಾಸ, 7 ವರ್ಷಗಳ ಬಳಿಕ ಕರ್ನಾಟಕ ಸರ್ಕಾರದಿಂದ 75 ಸಾವಿರ ಪರಿಹಾರ!