ವಾಹನ ಸರ್ವಿಸ್‌ AI Image
ವಾಹನ

ಶೋರೂಮ್ v/s ಲೋಕಲ್ ಗ್ಯಾರೇಜ್: ನಿಮ್ಮ ವಾಹನ ಸರ್ವಿಸ್‌ಗೆ ಯಾವುದು ಬೆಸ್ಟ್? ಮೋಸ ಹೋಗದಿರಲು ಈ 5 ವಿಷಯ ಮರೀಬೇಡಿ!

ನಿಮ್ಮ ನೆಚ್ಚಿನ ಬೈಕ್ ಅಥವಾ ಕಾರನ್ನು ಸರ್ವಿಸ್‌ಗೆ ಬಿಡುವಾಗಲೆಲ್ಲಾ ಸರಿಯಾಗಿ ಕೆಲಸ ಮಾಡ್ತಾರಾ ಇಲ್ವಾ ಅನ್ನೋ ಸಂಶಯ ನಿಮ್ಮನ್ನು ಕಾಡುತ್ತಿದೆಯಾ? ಅದಕ್ಕೆ ಉತ್ತರ ಇಲ್ಲಿದೆ:

Vehicle Service: ನಿಮ್ಮ ಬೈಕ್ ಅಥವಾ ಕಾರನ್ನು ಸರ್ವಿಸ್‌ಗೆ ಕೊಡುವಾಗ ಮನಸ್ಸಿನಲ್ಲಿ ಮೊದಲು ಬರುವ ಪ್ರಶ್ನೆ ಇದೆಲ್ಲೋ ಸರಿಯಾಗಿ ಮಾಡುತ್ತಾರಾ ಇಲ್ಲವೋ ಎಂಬುದು. ಕಂಪನಿ ಶೋರೂಮ್‌ನಲ್ಲಿ ಸರ್ವಿಸ್ ಮಾಡಿಸಿದರೆ ಬಿಲ್ ಜಾಸ್ತಿ ಬರುತ್ತದೆ, ಲೋಕಲ್ ಗ್ಯಾರೇಜ್‌ನಲ್ಲಿ ಕಡಿಮೆ ಆಗುತ್ತದೆ ಆದರೆ ನಂಬಿಕೆ ಬರುವುದಿಲ್ಲ. ಈ ಗೊಂದಲ ಬಹುತೇಕ ಎಲ್ಲಾ ವಾಹನ ಮಾಲೀಕರಿಗೂ ಇದೆ. ನಿಜವಾಗಿ ಎಲ್ಲಿ ಬೆಸ್ಟ್ ಮತ್ತು ಸರ್ವಿಸ್ ಆದ ನಂತರ ಏನೆಲ್ಲಾ ಚೆಕ್ ಮಾಡಬೇಕು ಎಂದು ತಿಳಿದುಕೊಳ್ಳದಿದ್ದರೆ ನಿಮ್ಮ ಜೇಬಿಗೆ ನಷ್ಟ ಪಕ್ಕಾ. ಆ ಕುರಿತ ವರದಿ ಇಲ್ಲಿದೆ:

ಶೋರೂಮ್‌ನಲ್ಲಿ ಸರ್ವಿಸ್ ಮಾಡಿಸುವುದರ ಲಾಭವೇನು?

ಹೊಸ ವಾಹನಕ್ಕೆ ಮೊದಲ ಎರಡು-ಮೂರು ವರ್ಷ ಕಂಪನಿ ಶೋರೂಮ್‌ನಲ್ಲೇ ಸರ್ವಿಸ್ ಮಾಡಿಸುವುದು ಉತ್ತಮ. ಕಾರಣ ವಾರಂಟಿ ಹಾಗೆ ಉಳಿಯುತ್ತದೆ. ಅದರಲ್ಲೂ, ಶೋರೂಮ್‌ನಲ್ಲಿ ಒರಿಜಿನಲ್ ಸ್ಪೇರ್ ಪಾರ್ಟ್ಸ್ ಬಳಸುತ್ತಾರೆ, ಕಂಪನಿ ಟ್ರೈನಿಂಗ್ ಪಡೆದ ಮೆಕ್ಯಾನಿಕ್ ಇರುತ್ತಾರೆ, ಸರ್ವಿಸ್ ಹಿಸ್ಟರಿ ಕಂಪನಿ ರೆಕಾರ್ಡ್ ನಲ್ಲಿ ಸೇವ್ ಆಗುತ್ತದೆ. ಮುಂದೆ ವಾಹನ ಮಾರುವಾಗ ಇದರಿಂದ ಒಳ್ಳೆಯ ಬೆಲೆ ಸಿಗುತ್ತದೆ. ಆದರೆ ಇದರ ನ್ಯೂನತೆ ಎಂದರೆ ಲೇಬರ್ ಚಾರ್ಜ್ ಮತ್ತು ಸ್ಪೇರ್ ಪಾರ್ಟ್ಸ್ ಬೆಲೆ 30 ರಿಂದ 40 ಪ್ರತಿಶತ ಜಾಸ್ತಿ ಇರುತ್ತದೆ. ಸಣ್ಣ ಸಣ್ಣ ಕೆಲಸಕ್ಕೂ ಬಿಲ್ ಹಾಕುತ್ತಾರೆ.

ಲೋಕಲ್ ಗ್ಯಾರೇಜ್‌ನಲ್ಲಿ ಸರ್ವಿಸ್ ಮಾಡಿಸುವುದು ಯಾವಾಗ ಬೆಸ್ಟ್?

ವಾಹನದ ವಾರಂಟಿ ಮುಗಿದ ನಂತರ ಲೋಕಲ್ ಗ್ಯಾರೇಜ್ ಉತ್ತಮ ಆಯ್ಕೆ. ಒಳ್ಳೆಯ ಅನುಭವ ಇರುವ ಗ್ಯಾರೇಜ್‌ನಲ್ಲಿ ಖರ್ಚು ಅರ್ಧದಷ್ಟು ಕಡಿಮೆಯಾಗುತ್ತದೆ. ನೀವು ನಿಮ್ಮ ಕಣ್ಣ ಮುಂದೆಯೇ ಕೆಲಸ ಮಾಡಿಸಬಹುದು, ಯಾವ ಆಯಿಲ್ ಹಾಕುತ್ತಿದ್ದಾರೆ ಎಂದು ನೋಡಬಹುದು. ಬೇಕಾದರೆ ಹೊರಗಿನಿಂದ ಒಳ್ಳೆಯ ಕಂಪನಿಯ ಸ್ಪೇರ್ ತಂದು ಕೊಡಬಹುದು. ಆದರೆ ಸಮಸ್ಯೆ ಎಂದರೆ ಕೆಲವು ಗ್ಯಾರೇಜ್‌ಗಳಲ್ಲಿ ನಕಲಿ ಪಾರ್ಟ್ಸ್ ಹಾಕುವ ಸಾಧ್ಯತೆ ಇರುತ್ತದೆ, ಸ್ಕ್ಯಾನಿಂಗ್ ಟೂಲ್ ಇರುವುದಿಲ್ಲ, ಸರ್ವಿಸ್ ರೆಕಾರ್ಡ್ ಇರುವುದಿಲ್ಲ.

ಹಾಗಾದರೆ ಯಾವುದು ಬೆಸ್ಟ್?

ತಜ್ಞರ ಪ್ರಕಾರ ವಾರಂಟಿ ಇರುವವರೆಗೆ ಕಂಪನಿ ಶೋರೂಮ್, ವಾರಂಟಿ ಮುಗಿದ ನಂತರ ನಂಬಿಕಸ್ಥ ಲೋಕಲ್ ಗ್ಯಾರೇಜ್ ಬೆಸ್ಟ್. 50 ಸಾವಿರ ಕಿಲೋಮೀಟರ್ ಓಡಿದ ನಂತರ ಶೋರೂಮ್‌ಗಿಂತ ಹೊರಗೆ ಮಾಡಿಸುವುದು ಜಾಣತನ.

ಸರ್ವಿಸ್ ನಂತರ ಈ 5 ವಿಷಯಗಳನ್ನು ಖಂಡಿತ ಚೆಕ್ ಮಾಡಿ:

  1. ಎಂಜಿನ್ ಆಯಿಲ್ ಲೆವೆಲ್ ಮತ್ತು ಕಲರ್ - ಡಿಪ್ ಸ್ಟಿಕ್ ತೆಗೆದು ನೋಡಿ, ಹೊಸ ಆಯಿಲ್ ಗೋಲ್ಡನ್ ಕಲರ್ ಇರಬೇಕು, ಕಪ್ಪಾಗಿದ್ದರೆ ಹಳೆ ಆಯಿಲ್ ನ್ನೇ ಬಿಟ್ಟಿದ್ದಾರೆ ಎಂದರ್ಥ.

  2. ಬಿಲ್ ಮತ್ತು ಹಳೆ ಪಾರ್ಟ್ಸ್ - ಬಿಲ್ ನಲ್ಲಿ ಏನೇನು ಬದಲಾಯಿಸಿದ್ದಾರೆ ಎಂದು ಬರೆದಿದೆಯಾ ನೋಡಿ, ಹಳೆ ಪಾರ್ಟ್ಸ್ ವಾಪಸ್ ಕೇಳಿ ಪಡೆಯಿರಿ.

  3. ಬ್ರೇಕ್ ಮತ್ತು ಕ್ಲಚ್ - ಗ್ಯಾರೇಜ್ ನಿಂದ ಹೊರಡುವ ಮೊದಲೇ ಬ್ರೇಕ್ ಹಿಡಿಯುತ್ತಿದೆಯಾ, ಕ್ಲಚ್ ಸ್ಮೂತ್ ಆಗಿದೆಯಾ ಎಂದು ಚೆಕ್ ಮಾಡಿ.

  4. ವಾಷಿಂಗ್ ಮತ್ತು ನಟ್ ಬೋಲ್ಟ್ - ವಾಹನ ಸರಿಯಾಗಿ ತೊಳೆದಿದ್ದಾರಾ, ಎಲ್ಲಾ ನಟ್ ಬೋಲ್ಟ್ ಟೈಟ್ ಆಗಿದೆಯಾ ಎಂದು ನೋಡಿ.

  5. ಮೀಟರ್ ನಲ್ಲಿ ಸರ್ವಿಸ್ ಲೈಟ್ - ಸರ್ವಿಸ್ ರಿಮೈಂಡರ್ ಲೈಟ್ ಆಫ್ ಆಗಿದೆಯಾ ಮತ್ತು ಮೀಟರ್ ನಲ್ಲಿ ಯಾವುದೇ ಹೊಸ ವಾರ್ನಿಂಗ್ ಲೈಟ್ ಬರುತ್ತಿದೆಯಾ ಎಂದು ಗಮನಿಸಿ.

ಒಟ್ಟಾರೆಯಾಗಿ, ಈ ಸಣ್ಣ ಚೆಕ್ ಲಿಸ್ಟ್ ಮಾಡಿದರೆ ಮೆಕ್ಯಾನಿಕ್ ನಿಮ್ಮನ್ನು ಮೋಸ ಮಾಡಲು ಸಾಧ್ಯವಿಲ್ಲ ಮತ್ತು ವಾಹನದ ಲೈಫ್ ಹೆಚ್ಚಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!

Pakನ ಹೊಸ ನಾಟಕ: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಗೀಡಾದ SSG ಉಗ್ರ ಜೀವಂತವಾಗಿದ್ದಾನೆ ಎಂದ ಪಾಕ್ ಸೇನೆ

ಬೆಳಗಾವಿಯಲ್ಲಿ 100 ಕೋಟಿ ರೂ ವೆಚ್ಚದಲ್ಲಿ ಗಾಂಧೀಜಿ ಸ್ಮಾರಕ ನಿರ್ಮಾಣ- ಸಿಎಂ ಡಿಕೆ ಶಿವಕುಮಾರ್ ಘೋಷಣೆ!

SIR ವಿವಾದ: ಫಾರ್ಮ್‌-6 ನಿಯಮ ಸರಳಗೊಳಿಸಿದ ಚುನಾವಣಾ ಆಯೋಗ, ಪಟ್ಟಿಯಿಂದ ಹೊರಗುಳಿದವರ ಸೇರ್ಪಡೆಗೆ ವಿಶೇಷ ಅಭಿಯಾನಕ್ಕೆ ಸೂಚನೆ..!