2014

ಬಿಫ್ಸ್: ಸಿನೆಮಾ ನೋಡಲು ಕೆಲವು ಸಲಹೆಗಳು

Guruprasad Narayana

ಬೆಂಗಳೂರು: ನಗರದಲ್ಲಿ ಡಿಸೆಂಬರ್ ನಾಲ್ಕರಂದು ಪ್ರಾರಂಭವಾಗುತ್ತಿರುವ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ, ಚಲನಚಿತ್ರಗಳನ್ನು ಪರಿಣಾಮಕಾರಿಯಾಗಿ ನೋಡಲು ಸಿನೆಮಾಸಕ್ತ ವಾಸುಕಿ ರಾಘವನ್ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದಕ್ಕೆ ಕನ್ನಡಪ್ರಭ[ಡಾಟ್]ಕಾಂ ನ ಕೆಲವನ್ನು ಸೇರಿಸಿದ್ದೇವೆ.

೧. ಇಂದು ಅಥವಾ ನಾಳೆ ಬೆಳಗ್ಗೆ, ಪ್ರದರ್ಶನಗೊಳ್ಳುತ್ತಿರುವ ಎಲ್ಲ ಸಿನೆಮಾಗಳ ಪರಿಚಯ ಇರುವ ಪುಸ್ತಕವನ್ನು ನಿಮ್ಮ ಪಾಸ್ ತೋರಿಸಿ ಉಚಿತವಾಗಿ ಪಡೆದುಕೊಳ್ಳಿ. ಹಾಗೆಯೇ ಸಿನೆಮಾಗಳ ಚಿತ್ರಪಟ್ಟಿ ಮತ್ತು ಪ್ರದರ್ಶನ ಸಮಯದ ಪಟ್ಟಿ ತೆಗೆದುಕೊಳ್ಳಿ.

೨. ಸಾಧ್ಯವಾದಷ್ಟು ಮಲ್ಟಿಪ್ಲೆಕ್ಸ್ ಸಿನೆಮಾ ಹಾಲ್ ಗಳನ್ನು ಆಯ್ಕೆ ಮಾಡಿ. ಏಕೆಂದರೆ ಅಲ್ಲಿ ಸುಮಾರು ೩ ಸ್ಕ್ರೀನ್ ಗಳಿದ್ದು, ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ. ಅಲ್ಲದೆ ತಿಂಡಿ ತಿನಿಸುಗಳೂ ಕೂಡ ಸುಲಭವಾಗಿ ಸಿಗಬಹುದು. [ಆಯೋಜಕರು ತಿಳಿಸಿರುವಂತೆ ಮನೆಯಿಂದ ತಂದ ತಿಂಡಿ-ನೀರನ್ನೂ ಒಳಗೆ ಬಿಡಲು ಅವಕಾಶ ನೀಡಲಾಗುವುದು ಎನ್ನಲಾಗಿದೆ]

೩. ನೀವು ನೋಡಬೇಕೆಂದಿರುವ ಸಿನೆಮಾಗಳ ಪಟ್ಟಿ ಮಾಡಿಕೊಳ್ಳಿ ಮತ್ತು ಅವುಗಳ ಅವಧಿಯನ್ನು ತಿಳಿದುಕೊಳ್ಳಿ. ಇದರಿಂದ ನೀವು ಮತ್ತೊಂದು ಸಿನೆಮಾದ ಆಯ್ಕೆ ಮಾಡಿಕೊಳ್ಳುವುದು ಸುಲಭವಾಗುತ್ತದೆ.

೪. ಎಷ್ಟೇ ಯೋಜಿತವಾಗಿ ಸಿದ್ಧವಾದರು, ಕೆಲವೊಮ್ಮೆ ಸಿನೆಮಾ ಪ್ರದರ್ಶನಗಳು ಅದಲು ಬದಲಾಗುವ ಸಾಧ್ಯತೆ ಇರುತ್ತದೆ ಆದುದರಿಂದ ಅನಿರೀಕ್ಷಿತ ಬದಲಾವಣೆಗಳಿಗೆ ಸಿದ್ಧರಿರಿ. ಹಾಗೆಯೆ ನೀವು ಪಟ್ಟಿ ಮಾಡದ ಸಿನೆಮಾ ನೋಡಲು ಕೂಡ ಮಾನಸಿಕವಾಗಿ ಸಿದ್ಧರಿರಿ.

೫. ವಾರಾಂತ್ಯಗಳಲ್ಲಿ ಸಿನೆಮಾಗಳನ್ನು ನೋಡಲು ಉದ್ದನೆಯೇ ಸಾಲುಗಳಿರುತ್ತವೆ. ಆದಷ್ಟು ಬೇಗನೆ ಸಿನೆಮಾ ಹಾಲ್ ಗಳನ್ನು ತಲಪುವುದು ಅಗತ್ಯ.

೬. ಚಳಿಗಾಲ ಇರುವುದರಿಂದ, ಹಾಗೂ ಮಲ್ಟಿಪ್ಲೆಕ್ಸ್ ಸಿನೆಮಾ ಹಾಲ್ ಗಲ್ಲಿ ಕೆಲವೊಮ್ಮೆ  ಕೊರೆಯುವ ಎ ಸಿ ಯಲ್ಲಿ ಕುಳಿತುಕೊಳ್ಳುವುದು ಕಷ್ಟ. ಆದುದರಿಂದ ಬೆಚ್ಚಗಿನ ಉಡುಪು ಧರಿಸಿ.

೭. ಕೊನೆಯದಾಗಿ: "ಟೈಟಲ್ ಕಾರ್ಡ್" ನೋಡುವುದರಿಂದ ತಪ್ಪಿಸಿಕೊಳ್ಳಬೇಡಿ. 

SCROLL FOR NEXT