ಬೆಂಗಳೂರು: ಸಿನಿಮಾ ಮಂದಿಯೇ ಇಲ್ಲದ ಸಿನಿಮೋತ್ಸವ. ಇಂಥದ್ದೊಂದು ದುಸ್ಥಿತಿ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಎದುರಾಗಿದೆ.
'ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ' ಶುರುವಾಗಿ ಸೋಮವಾರಕ್ಕೆ ಆರು ದಿನಗಳಾದವು. ಲಿಡೋ, ಫನ್ ಸಿನಿಮಾಸ್, ಪ್ರಿಯದರ್ಶಿನಿ ಸೇರಿದಂತೆ ನಗರದ ಆರು ಚಿತ್ರಮಂದಿರಗಳು 11 ಪರದೆಗಳಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನ ಕಂಡಿವೆ. ವಿವಿಧ ಭಾಷೆಗಳ ಅನೇಕ ಸಮಕಾಲೀನ ಸಮಸ್ಯೆಗಳನ್ನು ಬಿಂಬಿಸಿದ ಸಿನಿಮಾಗಳು ಪ್ರದರ್ಶನಗೊಂಡವು. ಆದರೆ, ಇಂಥ ಅಪರೂಪದ ಚಿತ್ರಗಳನ್ನು ಕಣ್ತುಂಬಿಸಿಕೊಳ್ಳುವಲ್ಲಿ ಕನ್ನಡ ಚಿತ್ರೋದ್ಯಮ ಮಾತ್ರ ನೀರಸ ಪ್ರತಿಕ್ರಿಯೆ ತೋರುತ್ತಿದೆ.