ಹೆಣ್ಣಿನ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡ್ಕೋಳೋದು ಅಸಾಧ್ಯ...ಮದುವೆ ಆಗಿ ಸಂತೋಷವಾಗಿರೋಕೆ ಸಾಧ್ಯಾನೇ ಇಲ್ಲಾರೀ..ಹೂಂ ಹೊಸ ಹೊಸದರಲ್ಲಿ ನಾನೂ ಹೀಗೇ ಇದ್ದೆ, ಒಂದು ವರ್ಷ ಕಳೀಲಿ ನಿಂಗೇ ಅನುಭವಕ್ಕೆ ಬರುತ್ತೆ...ಹೆಂಡ್ತಿ ಅಂದ್ರೆ ಅನುಮಾನ, ಅನುಮಾನ ಅಂದ್ರೆ ಹೆಂಡ್ತಿ..ಇದು ಮಾಡು, ಅದು ಮಾಡಬೇಡ, ಅಲ್ಲಿಗೆ ಹೋಗಬೇಡ...ಬರೀ ಕಂಡೀಶನ್ನು ಮಾಡೋದು, ತಪ್ಪು ಹುಡುಕೋದು, ನನ್ನ ಗಂಡ ಸರಿ ಇಲ್ಲ ಅಂತ ಎಲ್ಲರ ಹತ್ರ ಹೇಳ್ಕೊಂಡು ಬರೋದು...
ಈ ಗಂಡಸರೆಲ್ಲಾ ಒಂದೇರೀ...ಲವ್ ಮಾಡೋ ಟೈಮಲ್ಲಿ ಹೆಂಗೆ ಹಿಂದೆ ಹಿಂದೇ ಬರ್ತಾರೆ ನೋಡಿ...ಮದುವೆಗೆ ಮುಂಚೆ ಸಾವಿರ ಸಲ ಐ ಲವ್ ಯು ಅನ್ನೋನು, ಈಗ ..ಬೇಡ ಅಂದಿದ್ದೇ ಮಾಡೋದು...ಹೆಂಡ್ತಿ ಅಂದ್ರೆ ಬರೀ ಮನೆ ಕೆಲಸ ಮಾಡೋಳು, ಮಕ್ಕಳನ್ನ ಹೆರೋಳು ಅಷ್ಟೇನಾ..? ಒಂದು ಗೌರವ ಬೇಡವಾ..? ಹೆಂಡ್ತಿ ಅಂದ್ರೆ ತಾತ್ಸಾರ...ಪ್ರೀತಿಯಿಂದ ನಾಲಕ್ ಮಾತಾಡಿ ಯಾವ ಕಾಲ ಆಯ್ತೋ..ಸೂಕ್ಷ್ಮ ಅನ್ನೋದೇ ಗೊತ್ತಿಲ್ಲ..ಈ ಗಂಡಸರ ಜಾತೀನೇ ಇಷ್ಟು...ಡಾಮಿನೇಟಿಂಗ್...
ಹೆಚ್ಚು ಕಮ್ಮಿ ಇಂಥಾ ಒಂದು ಪರ್ಸೆಪ್ಶನ್ ಇಬ್ಬರಿಗೂ ಇರುತ್ತೆ ಅಲ್ವಾ..? ಅದು ತಪ್ಪೋ ಸರೀನೋ ಅನ್ನೋದಲ್ಲ ಪಾಯಿಂಟ್...ಗಂಡು ಹಾಗು ಹೆಣ್ಣು ಇವರಿಬ್ಬರ ಮಾತು, ಮೌನ, ಯೋಚನೆ, ಬಿಹೇವಿಯರ್, ಏನು ಮಾಡ್ತಾರೆ, ಏನು ಮಾಡಲ್ಲ, ಯಾಕೆ ಹೀಗೆ ಅನ್ನೋದರ ಹಿಂದೆ ಒಂದು ಸೈಕಾಲಜಿ ಇದೆ..ಸೈನ್ಸ್ ಇದೆ...ಮೆದುಳು ಹೀಗೇ ಕೆಲಸ ಮಾಡಬೇಕು ಅಂತ ಪ್ರೋಗ್ರಾಮ್ ಆಗಿದೆ..ಅದರ ಬಗ್ಗೆ ಗೊತ್ತಿದೆಯಾ..? ಎಲ್ಲೂ ಬೋರೇ ಹೊಡೆಸ್ಬಾರ್ದು, ಓದೋಕೆ ಮಜಾ ಬರ್ಬೇಕು, ಒಂದು ಹೊಸ ಅನುಭವ ಆಗಬೇಕು, ನನ್ ಮಗಂದು ಕನ್ನಡದಲ್ಲೂ ಇಂಥಾ ಬುಕ್ ಇದೆಯಾ ಅಂತ ಅನ್ನಿಸಬೇಕು ಅನ್ನೋ ಹಾಗೆ ಬರೆದಿದ್ದೀನಿ..ಬುದ್ಧಿವಂತಿಕೆ ಪ್ರದರ್ಶನ, ಗಿಮಿಕ್ಕು ಎಲ್ಲ ಸೈಡ್ಗೆ ಇಟ್ಟು ಪ್ರೀತಿಯಿಂದ ಹೇಳ್ತಾ ಇದ್ದೀನಿ..ಇದನ್ನ ಓದಿ..ನಿಮಗೆ ತಗೋಬೇಕು ಅಂತ ಅನಿಸ್ತಾ ಇಲ್ಲ ಅಂದ್ರೆ ಖಂಡಿತಾ ಫೋರ್ಸ್ ಮಾಡಲ್ಲ...ನಿಮ್ಮ ಚಾಯ್ಸ್‌ನ ಗೌರವಿಸ್ತೀನಿ...
-ರಘು ಸಮರ್ಥ
ಈ ವಾರದ ಹೊತ್ತಗೆ: ಶ್ರೀಮಾನ್ ಶ್ರೀಮತಿ
ಲೇಖಕರು: ರಘು ಸಮರ್ಥ
ಪ್ರಕಾಶಕರು: ಸಾವನ್ನ
ಬೆಲೆ: ರು.150