ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ ಪುಸ್ತಕದ ಬಗ್ಗೆ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಶುಭ ಹಾರೈಸಿ ಬರೆದ ಸಂದೇಶ
ತಿರುಪತಿ ಮಲ್ಲಿಗೆರಾಮ ದುರ್ಗದ ಸಂಪಿಗೆರಾಮ ಎಂಬ ಕಾಲ್ಪನಿಕ, ಸಾಮಾಜಿಕ, ವೈನೋದಿಕ ನಾಟಕವನ್ನು ರಚಿಸಿರುವ ಡಾ. ನೀರ್ಗುಂದ ನಾಗರಾಜ್ ಅವರು ನನಗೆ ತುಂಬ ದಿನಗಳಿಂದ ಪರಿಚಿತರು. ಸಾಹಿತ್ಯ ಸಂದರ್ಭಗಳಲ್ಲಿ ನಾವಿಬ್ಬರೂ ಅನೇಕ ವೇಳೆ ಪರಸ್ಪರ ಚರ್ಚೆಯಲ್ಲಿ ಭಾಗವಹಿಸಿದ್ದೇವೆ. ಈ ನಾಟಕವು ದೀರ್ಘನಾಟಕ, ಪ್ರದರ್ಶಿಸಬೇಕಾದರೆ ನಾಲ್ಕು ಗಂಟೆಗಳ ಕಾಲ ಬೇಕು. ಅವಳಿಜವಳಿ ಮಕ್ಕಳು ಸಂಪೂರ್ಣವಾಗಿ ಯಾವ ವ್ಯತ್ಯಾಸವೂ ಇಲ್ಲದೆ ಒಂದೇ ಆಗಿದ್ದಾಗ ಒದಗಬಹುದಾದ ಅವಕಾಶಗಳನ್ನು ತುಂಬಲಾಗಿದೆ. ಈ ನಾಟಕದಲ್ಲಿ ಗೀತಗಳು ಹೆಚ್ಚಾಗಿವೆ. ಶೃಂಗಾರ ಪ್ರಮುಖವಾದ ಜಾವಳಿಗಳಾಚೆ ಇರುವ ಹಾಡುಗಳೂ ಇವೆ. ಚಲನಚಿತ್ರಕ್ಕೆ ಹೋಗುವ ಅನೇಕ ಸಂದರ್ಭಗಳಿವೆ. ರಂಗದ ಮೇಲೆ ಒಮ್ಮೆ ಪ್ರದರ್ಶಿತವಾದರೆ ಇನ್ನಷ್ಟು ಸಂಗ್ರಹಿಸಬಹುದಾದ ಭಾಗಗಳು ಕಾಣಬರಬಹುದು.
ಈ ನಾಟಕಕ್ಕೆ ತಕ್ಕ ಪ್ರಚಾರ ದೊರೆಯಲಿ ಎಂದು ಹಾರೈಸುತ್ತೇನೆ.
ಪ್ರೊ. ಜಿ. ವೆಂಕಟಸುಬ್ಬಯ್ಯ
18-6-13
ಈವಾರದ ಹೊತ್ತಗೆ: ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ
ಲೇಖಕರು: ಡಾ.ನಾಗರಾಜ್ ನೀರಗುಂದ
ಪ್ರಕಾಶಕರು: ಸಾಹಿತ್ಯ ಭಂಡಾರ
ಬಳೇಪೇಟೆ
ಬೆಂಗಳೂರು- 560053
ದೂರವಾಣಿ: 080-22877618