ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿರುವ ಡಾ. ಅನಸೂಯಾದೇವಿಯವರ ಅನೇಕ ಕೃತಿಗಳು ನಮ್ಮ ಪ್ರಕಾಶನದ ಮೂಲಕ ಈಗಾಗಲೇ ಬೆಳಕು ಕಂಡಿವೆ. ಅವರು ರಚಿಸಿದ ಕಾದಂಬರಿಗಳು, ಕಥಾ ಸಂಕಲನಗಳು, ಚಿಂತನಾಪೂರ್ಣ ಹಾಗೂ ಆಧ್ಯಾತ್ಮಿಕವಾದ ವೈಚಾರಿಕ ಲೇಖನಗಳ ಸಂಕಲನಗಳನ್ನು ನಮ್ಮ ಪ್ರಕಾಶನ ಹೊರತಂದು ಕನ್ನಡ ಸಾಹಿತ್ಯಲೋಕಕ್ಕೆ ಅರ್ಪಿಸಿದೆ. ಡಾ.ಅನಸೂಯಾದೇವಿಯವರನ್ನು ಲೇಖಕಿಯಾಗಿ , ಕತೆಗಾರ್ತಿಯಾಗಿ, ಚಿಂತಕಿಯಾಗಿ ಕನ್ನಡ ಓದುಗರಿಗೆ ಅವರ ಕೃತಿಗಳ ಮೂಲಕ ಪರಿಚಯಿಸಿರುವ ಸೃಷ್ಟಿ ಪ್ರಕಾಶನ ಇದೀಗ ಅವರ ವ್ಯಕ್ತಿತ್ವದ ನಾಲ್ಕನೇ ಆಯಾಮವಾಗಿ ಅವರಲ್ಲಿನ ಕವಿಯನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ಸ್ವತಃ ಗಾಯಕಿಯಾಗಿಯೂ ಇರುವ ಇವರ ಕವಿತೆಗಳ ವಸ್ತು , ಚಿಂತನ, ಅಭಿವ್ಯಕ್ತಿ ಎಲ್ಲದರಲ್ಲೂ ಹೊಸತನದ ಲಯಗಾರಿಕೆ ತುಂಬಿಕೊಂಡಿದೆ.
ಡಾ. ಅನಸೂಯಾದೇವಿಯವರ ಇದುವರೆಗಿನ ಸಮಗ್ರ ಕವಿತೆಗಳ ಸಂಕಲನ ಎದೆಹಾಸಿನ ಭಾವ ಹೂವುಗಳು ಕನ್ನಡ ಓದುಗರೆಲ್ಲರ ಮನಸ್ಸನ್ನು ಅರಳಿಸಲಿ ಎಂಬ ಹಾರೈಕೆಯೊಡನೆ
-ಪ್ರಕಾಶಕರು
ಈ ವಾರದ ಹೊತ್ತಗೆ : ಎದೆ ಹಾಸಿನ ಭಾವ ಹೂಗಳು (ಕವಿತೆಗಳು)
ಲೇಖಕರು: ಡಾ. ಅನಸೂಯಾದೇವಿ
ಪ್ರಕಾಶಕರು: ಸೃಷ್ಟಿ ಪಬ್ಲಿಕೇಷನ್ಸ್
ವಿಜಯನಗರ
ಬೆಂಗಳೂರು
560040
ದೂರವಾಣಿ: 080- 23153558
ಬೆಲೆ: 150 ರು.