ಬುಕ್ ಸೈಟ್

ಕಾದಂಬರಿ ಲೋಕ

ಪ್ರೊಫೆಸರ್ ವಿ. ಎಂ. ಇನಾಂದಾರರು (1912-86) ಕನ್ನಡದ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದರು. ಅವರು ಶ್ರೇಷ್ಠ ಅನುವಾದಕರೂ...

ಪ್ರೊಫೆಸರ್ ವಿ. ಎಂ. ಇನಾಂದಾರರು (1912-86) ಕನ್ನಡದ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದರು. ಅವರು ಶ್ರೇಷ್ಠ ಅನುವಾದಕರೂ, ಬಹುಶ್ರುತ ವಿಮರ್ಶಕರೂ ಹೌದು. ಇಂಗ್ಲಿಷಿನಲ್ಲಿಯೂ ಕೆಲವು ಪುಸ್ತಕಗಳನ್ನು ಪ್ರಕಟಿಸಿರುವ ಅವರಿಗೆ ಕನ್ನಡ, ಮರಾಠಿ, ಸಂಸ್ಕೃತ ಭಾಷೆ ಸಾಹಿತ್ಯಗಳಲ್ಲಿ ಖಚಿತವಾದ ಪ್ರವೇಶವಿತ್ತು. ಬದುಕಿನ ತೇಲಿಕೆಯ ಸ್ತರಗಳನ್ನೇ ಆಗಲಿ, ಆಳವಾದ ತಾತ್ವಿಕ ಮುಖಗಳನ್ನೇ ಆಗಲಿ ಅವರು ತಮ್ಮ ಕೃತಿಯಲ್ಲಿ ಗಂಭೀರವಾಗಿ ನಿರೂಪಿಸಿದ್ದಾರೆ; ಚರ್ಚಿಸಿದ್ದಾರೆ. ಅವರ ಶೈಲಿಯಲ್ಲಿ ಆಕರ್ಷಣೆಯಿದೆ; ಪಾತ್ರ ನಿರ್ವಹಣೆಯಲ್ಲಿ ಕುತೂಹಲವಿದೆ; ಸಂದರ್ಭ ಚಿತ್ರಣದಲ್ಲಿ ಗಾಂಭೀರ್ಯವಿದೆ. ಇವೆಲ್ಲದರಿಂದ ಅವರು ಕನ್ನಡ ಕಾದಂಬರಿಯ ಸಾಧ್ಯತೆಗಳನ್ನು ವಿಸ್ತರಿಸಿದ ಹಿರಿಯರಲ್ಲಿ ಒಬ್ಬರೆನಿಸಿದ್ದಾರೆ.

ಪರಿಪೂರ್ಣತೆಯ ಹಾಗೂ ಶ್ರೇಷ್ಠತೆಯ ಆರಾಧಕರಾಗಿದ್ದ ಅವರ ಅಭಿರುಚಿಗೆ ಅನುಗುಣವಾದ ಕಾದಂಬರಿ ಲೋಕ ಕನ್ನಡ ವಿಮರ್ಶೆಯ ಕ್ಷೇತ್ರಕ್ಕೆ ಒಂದು ಗಣನೀಯ ಕೊಡುಗೆಯಾಗಿದೆ. ಕಾದಂಬರಿ ಪ್ರಕಾರಕ್ಕೆ ರೂಪಸ್ವರೂಪಗಳನ್ನು ತಂದುಕೊಟ್ಟ, ಜಗತ್ತಿನ ಶ್ರೇಷ್ಠ ಕಾದಂಬರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೂವತ್ತೊಂದು ಇಂಗ್ಲಿಷ್, ಅಮೆರಿಕನ್ ಹಾಗೂ ಯುರೋಪಿಯನ್ ಕಾದಂಬರಿಗಳ ಪರಿಚಯ, ವಿಮರ್ಶೆ, ವಿಶ್ಲೇಷಣೆ ಇಲ್ಲಿದೆ. ಈ ವ್ಯಾಪ್ತಿಯ ಪುಸ್ತಕ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಪ್ರಕಟವಾಗುತ್ತಿದೆ. ಕನ್ನಡದ ಹೆಸರಾಂತ ಹಿರಿಯ ಕಿರಿಯ ಲೇಖಕರು ಈ ಸಂಪುಟಕ್ಕೆ ಬರೆದಿದ್ದಾರೆ.

ಮಹತ್ವದ ಈ ವಿಮರ್ಶಾಕೃತಿ ಇನಾಂದಾರರ ಜನ್ಮಶತಾಬ್ದ ವರ್ಷದಲ್ಲಿ ಇದೀಗ ಮರುಮುದ್ರಣಗೊಂಡು ಸಾಹಿತ್ಯಾಸಕ್ತರಿಗೆ ಮತ್ತೊಮ್ಮೆ ಲಭ್ಯವಾಗುತ್ತಿದೆ.


ಈವಾರದ ಹೊತ್ತಗೆ : ಕಾದಂಬರಿ ಲೋಕ (ಕೆಲವು ಪ್ರಮುಖ ವಿಶ್ವ ಕಾದಂಬರಿಗಳ ಅವಲೋಕನ)
ಸಂಪಾದಕರು: ಡಾ. ಹಾ. ಮಾ. ನಾಯಕ
ಎಂ ವಿ  ವೆಂಕಟೇಶ ಮೂರ್ತಿ


ವಸಂತ ಪ್ರಕಾಶನ
ನಂ.360, 10 ನೇ 'ಬಿ' ಮುಖ್ಯ ರಸ್ತೆ,
3 ನೇ ಬ್ಲಾಕ್ ಜಯನಗರ
ಬೆಂಗಳೂರು -560011
ದೂರವಾಣಿ: 22443996
ಇಮೇಲ್: info@vasantaprakashana.com
www.vasanthaprakashana.com


ಬೆಲೆ ರು: 350

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...." ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾ ನೇರಾ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು, ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

ಧರ್ಮಸ್ಥಳ ಪ್ರಕರಣ: ಹೊಸ ದೂರು ದಾಖಲು, ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ!

Thyroid Cancer: ಗುರುತೇ ಸಿಗಲಾರದಷ್ಟು ಬದಲಾದ ನಟ! 'ರಾಯ್' ಗೆ ಬೇಕಾಗಿದೆ ನೆರವಿನ ಹಸ್ತ..Video

SCROLL FOR NEXT