ಕೇವಲ ಎಂಟು ರುಪಾಯಿಗೆ ಹೆತ್ತಮ್ಮನಿಂದಲೇ ಫುಟ್‌ಪಾತ್‌ನಲ್ಲೇ ಮಾರಾಟಗೊಂಡ ಕಂದಮ್ಮ
- ಆಶ್ರಯದಾತರಿಂದಲೇ ಬೀದಿಗೆ ಹಬ್ಬಿಸಿಕೊಂಡ ನತದೃಷ್ಟ ಬಾಲಕ
- ಹಸಿವು ನೀಗಿಸಿಕೊಳ್ಳಲು ಪೇಯಿಂಟರ್ ಆದರು, ನಟಿಸಲು ಹೋಗಿ ಗೇಟ್ ಕೀಪರ್ ಆದರು ,ಬಣ್ಣದ ಮೋಹ ಉಂಡಮನೆಗೆ ಕನ್ನ ಹಾಕುವಂತೆ ಮಾಡಿತೆ?
- ಕನಿಷ್ಠ ಎಂಟನೇ ತರಗತಿಯನ್ನೂ ಪಾಸು ಮಾಡದ ಇವರು ಕೋಟಿ ಕೋಟಿ ಕನ್ನಡಿಗರ ಮನ ಗೆದ್ದರು...
- ತನ್ನ ಬಾಲ್ಯದ ಸ್ಥಿತಿಯೇ ತನ್ನ ಮಗುವನ್ನೂ ಬಾಧಿಸಿದಾಗ
-
- ನೆತ್ತಿ ಸುಡುವ ಬಿಸಿಲಿನಲ್ಲಿ ಮದ್ರಾಸಿನ ನಡುಬೀದಿಯಲ್ಲಿ ಅರೆ ಬೆತ್ತಲಾಗಿ ನಡೆದಿದ್ದಾರೆ...
- ನಮ್ಮ ಬಂಗಾರದ ಮನುಷ್ಯ ಸಿದ್ಧಲಿಂಗಯ್ಯ ನಿರ್ದೇಶಕನಾಗಲು ಮೂಲ ಕಾರಣಕರ್ತರು...
- 'ರಾಧಾರಮಣ'ದಿಂದ 'ಯಮಕಿಂಕರ'ದವರೆಗೂ ಆರು ದಶಕಗಳ 500ರ ಹೆಜ್ಜೆಗಳು
- ದಲ್ಲಾಳಿ, ಕಳ್ಳ, ಕುತಂತ್ರಿ, ಮನೆಮುರುಕ, ಕೋಳಿ ಕಳ್ಳ, ಕಾಮುಕ, ದುಷ್ಟ, ಸ್ವಾರ್ಥಿ, ಖಳನಾಯಕ, ಸಜ್ಜನ, ಪೋಷಕ ನಟ, ಹಾಸ್ಯಗಾರ, ಮನೆ ಹಿರಿಯ, ತುಂಟ ತಾತ...
- ಆದರೂ ಇವರ ಪಾಲಿಗೆ ಇಡೀ ಜಗತ್ತೇ ಕಿವುಡು. ಆದರೆ...
- ಇಂಥಾ ನೂರಾರು ತಿರುವುಗಳನ್ನು ತನ್ನ ಬದುಕಿನ ಬುಟ್ಟಿಯಲ್ಲಿ ಅಡಗಿಸಿಕೊಂಡಿರುವ ಬಾಲಣ್ಣನವರ ಸಿನಿಪಯಣದ ಜೊತೆಗೆ ಜೀವನದ ಅಚ್ಚರಿಗಳು ಇಲ್ಲಿವೆ. ಓದಿ, ಅರಸೀಕೆರೆ. ಬೀದಿ ಬಾಲಕ ಬಾನೆತ್ತರಕ್ಕೆ ಬೆಳೆದ ಕಥೆಯನ್ನು.
ಈ ವಾರದ ಹೊತ್ತಗೆ:
ಕಲಾಭಿಮಾನಿ ಬಾಲಣ್ಣ
ಲೇಖಕರು
ಪ್ರಕಾಶಕರು
ಬೆಲೆ: ರು.75