ಬುಕ್ ಸೈಟ್

ಮರುಭೂಮಿಯ ಹೂ

1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ರಾಣಿಯಂತೆ ಮೆರೆದ ವಾರಿಸ್ ಡೆರಿಸ್‌ಳ ಬದುಕು ಸಾಹಸಮಯ ಮತ್ತು ರೋಮಾಂಚನ...

1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ರಾಣಿಯಂತೆ ಮೆರೆದ ವಾರಿಸ್ ಡೆರಿಸ್‌ಳ ಬದುಕು ಸಾಹಸಮಯ ಮತ್ತು ರೋಮಾಂಚನಕಾರಿಯಾದುದು. ಜಗತ್ತಿನ 85 ಭಾಷೆಗಳಿಗೆ ಅನುವಾದಗೊಂಡಿರುವ ಆಕೆಯ ಆತ್ಮಚರಿತ್ರೆಯಲ್ಲಿ ಅಕ್ಷರದಲ್ಲಿ ಹಿಡಿದಿಡಲು ಮುಜುಗರವಾಗುವಂತಹ ಅಪಮಾನ ಮತ್ತು ಅತ್ಯಾಚಾರದ ಘಟನೆಗಳಿವೆ.

ಆಫ್ರಿಕಾದ ಸೋಮಾಲಿಯ ಬುಡಕಟ್ಟು ಜನಾಂಗದ ಕುಟುಂಬದಲ್ಲಿ ಜನಿಸಿ ಅನಕ್ಷರಸ್ಥೆಯಾಗಿ ಬೆಳೆದು ಮರುಭೂಮಿಯನ್ನು ದಾಟಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಬದುಕುಕಟ್ಟಿಕೊಂಡಿದ್ದು ಯಶಸ್ವೀ ಸಿನಿಮಾವೊಂದರ ಚಿತ್ರಕತೆಯಂತಿದೆ. ಆಫ್ರಿಕಾ ದೇಶಗಳಲ್ಲಿರುವ ಅಮಾನವೀಯ ಆಚರಣೆ ಕುರಿತು ವಾರಿಸ್ ದಾಖಲಿಸಿರುವ ಘಟನೆಗಳು ಮೈನಡುಗಿಸುವಂತಿವೆ. ಯಾವುದೇ ಸಂಕೋಚ, ಮುಜುಗರವಿಲ್ಲದೆ ತನ್ನ ಹೋರಾಟದ ಬದುಕನ್ನು ದಾಖಲಿಸಿರುವುದು ಆಕೆಯ ವಿಶೇಷ. ಈ ಕಾರಣಕ್ಕಾಗಿ ವಾರಿಸ್ ನಮಗೆ ಆಪ್ತವಾಗಿ ಬಿಡುತ್ತಾಳೆ. ಈ ಅನಾಮಿಕ ಹೆಣ್ಣು ಮಗಳ ಸಾಹಸಗಾಥೆ ಎಲ್ಲರ ಎದೆಯಲ್ಲಿ ಬಹುಕಾಲ ಉಳಿಯುವಂಥಹದ್ದು. ಇದು ಹೆಣ್ಣು ಮಕ್ಕಳಿಗೆ ಇಷ್ಟವಾಗುವ, ಗಂಡಸರ ಮನಕಲುಕುವ ಹಾಗು ಎಂತಹ ಮಡಿವಂತಿಕೆಯವರಿಗೂ ಅಶ್ಲೀಲವೆನಿಸದ ಅಪರೂಪದ ಆತ್ಮಕಥನ.

-ಡಾ. ಎನ್. ಜಗದೀಶ್ ಕೊಪ್ಪ


ಈ ವಾರದ ಹೊತ್ತಗೆ: ಮರುಭೂಮಿಯ ಹೂ

ಲೇಖಕರು: ಡಾ.ಎನ್. ಜಗದೀಶ್ ಕೊಪ್ಪ

ಪ್ರಕಾಶಕರು:
ಮಣಿ ಪ್ರಕಾಶನ
ಬೆಂಗಳೂರು
ಬೆಲೆ: 125 ರು.

ಪ್ರಸ್ತುತ ಕೃತಿ 31-1-2014 ಶುಕ್ರವಾರ ಬಿಡುಗಡೆಗೊಳ್ಳಲಿದೆ
ಸ್ಥಳ:  ಪ್ರೆಸ್‌ಕ್ಲಬ್ ಆವರಣ, ಕಬ್ಬನ್ ಪಾರ್ಕ್ ಬೆಂಗಳೂರು
ಸಮಯ: ಬೆಳಗ್ಗೆ 11 ಗಂಟೆಗೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT