ಬುಕ್ ಸೈಟ್

ಆರನೇ ಹೆಂಡತಿಯ ಆತ್ಮಕಥೆ

Rashmi Kasaragodu

ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಅನುಭವ ಹಾಗೂ ಆಯಾಮವನ್ನು ತೆರೆದಿಡುವ ಸಾಮರ್ಥ್ಯ ಹೊಂದಿರುವ ಇದು, ತೆಹಮಿನಾಳ ಆತ್ಮಚರಿತ್ರೆಯೂ ಹೌದು; ಅವಳು ಸಕ್ರಿಯವಾಗಿ ತೊಡಗಿಕೊಂಡಿದ್ದ ಪಾಕಿಸ್ತಾನಿ ರಾಜಕಾರಣದ ದಾಖಲೆಯೂ ಹೌದು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಪಡುವ ಪಾಡು, ದಾಂಪತ್ಯದ ಪರಿಧಿಯೊಳಗೇ ಎದುರಿಸಬೇಕಾದ ಸಮಸ್ಯೆ ಸವಾಲುಗಳು, ಕೊನೆಗೆ ಗೆದ್ದರೂ ಗೆಲುವಿನಲ್ಲಿಯೂ ಸೋಲಿನ ಅನುಭವ - ಮುಂತಾದ ಸಂಗತಿಗಳನ್ನು ತೆಹಮಿನಾ ದುರ್ರಾನಿಯವರಷ್ಟು ಸಮರ್ಥವಾಗಿ ದಾಖಲಿಸಿದವರು ತುಂಬ ವಿರಳ.

ಪುರುಷ ಲೋಕತ ಪಾಶವೀತನವನ್ನು ನಿರ್ಭಿಡೆಯಿಂದ ಬಿಚ್ಚಿಡುವ ದುರ್ರಾನಿಯವರ ಆತ್ಮಚರಿತ್ರೆ, ಆರನೆಯ ಹೆಂಡತಿಯ ಆತ್ಮಕಥೆ ಈಗಾಗಲೇ ಅನೇಕ ಭಾಷೆಗಳಿಗೆ ಅನುವಾದಗೊಂಡು ಕೋಟ್ಯಾಂತರ ಪ್ರತಿಗಳು ಮಾರಾಟವಾಗಿರುವ ಕೃತಿ. ಒಂದು ಅರ್ಥದಲ್ಲಿ ಪಾಕಿಸ್ತಾನದ ಪ್ರತಿಯೊಬ್ಬರ ಮನೆಯ ಮಾತಾಗಿರುವ ಕೃತಿ. ತನ್ನ ಪತಿ ಮುಸ್ತಾಫಾಖಾರ್‌ನ ಐದು ಜನ ಹೆಂಡಂದಿರು ಅವನೆಲ್ಲಾ ರಕ್ಕಸತನವನ್ನು ಸಹಿಸಿ ಮೌನದಿಂದಲೇ ನಿರ್ಗಮಿಸಿದರೆ , ಅವನ ಆರನೇ ಹೆಂಡತಿಯಾಗಿದ್ದ ತೆಹಮಿನಾ ದುರ್ರಾನಿ ಕೊನೆಗೂ ಶಕ್ತಿ ಸಂಚಯಿಸಿಕೊಂಡು, ಧೈರ್ಯಸಮನಿಸಿಕೊಂಡು ಹೊಟ್ಟೆ ಬಿಚ್ಚಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ- ತಾನು ಮಾಡಿದ ಪಾಪ, ಮೋಸ ಹಾಗೂ ಧೀಮಂತಿಕೆಯ ಹೋರಾಟದ ಜೊತೆಗೆ ತನ್ನ ಪತಿ ಹಾಗೂ ತಾಯಿತ ಅಸಹಜ್ಯ, ಅಮಾನವೀಯ ನಡವಳಿಕೆಗಳಿಗೆ ಬೆಲ್ಜಿಯಮ್ ಕನ್ನಡಿ ಹಿಡಿದಿದ್ದಾಳೆ. ಹಾಗಾಗಿ ಇದು ಸ್ವ-ಸಮರ್ಥನೆಗಾಗಿ ಮಾತ್ರ ರಚಿಸಿದ ಕೃತಿಯಲ್ಲ. ಕೃತಿಯುದ್ದಕ್ಕೂ ಇತರರ ಬಗೆಗಿನ ಕಹಿ ಸತ್ಯಗಳನ್ನು ಬರೆದಷ್ಟೇ ನಿಷ್ಠುರವಾಗಿ, ಸತ್ಯ ನಿಷ್ಠಳಾಗಿ ತನ್ನ ಚ್ಯುತಿ ನ್ಯೂನತೆಗಳನ್ನು ಕೂಡಾ ದಾಖಲಿಸಿದ್ದಾಳೆ. ಹಾಗಾಗಿ ಇದು ಕನ್ನಡ ಲೋಕಕ್ಕೆಂತೋ ಅಂತೆಯೇ ಭಾರತೀಯ ಭಾಷೆಗಳ ಸಾಹಿತ್ಯ ಲೋಕದಲ್ಲಿಯೂ ಒಂದು ಅನನ್ಯ ಕೃತಿ ಎನಿಸದಿರಲಾರದು. ಇದರ ಓದು ಲಕ್ಷಾಂತರ ಮಹಿಳೆಯರ ಬಾಳಿಗೆ ಹೊಸ ಬೆಳಕು ನೀಡಬಲ್ಲದೆಂಬ ವಿಶ್ವಾಸ ನಮಗಿದೆ. ಆದ್ದರಿಂದಲೇ ಇದನ್ನು ಕನ್ನಡಿಗರ ಕೈಗೆ ಕೊಡುತ್ತಿದ್ದೇವೆ.

-ಸೃಷ್ಟಿ ಪಬ್ಲಿಕೇಷನ್ಸ್



ಈ ವಾರದ ಹೊತ್ತಗೆ : ಆರನೇ ಹೆಂಡತಿಯ ಆತ್ಮಕಥೆ


ಲೇಖಕರು: ತೆಹಮಿನಾ ದುರ್ರಾನಿ
ಕನ್ನಡಕ್ಕೆ: ರಾಹು
ಪ್ರಕಾಶಕರು: ಸೃಷ್ಟಿ ಪಬ್ಲಿಕೇಷನ್ಸ್
ವಿಜಯನಗರ
ಫೋನ್: 080- 23153558, 9845096668
ಬೆಂಗಳೂರು: 560040
ಬೆಲೆ : 400 ರು

SCROLL FOR NEXT