ನವದೆಹಲಿ: ರೇಲ್ವೇ ಸಚಿವ ಸುರೇಶ್ ಪ್ರಭು ತಮ್ಮ ಚೊಚ್ಚಲ ರೇಲ್ವೇ ಬಜೆಟ್ ನಲ್ಲಿ ಪ್ರಯಾಣಿಕರ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದು, ಬಜೆಟ್ ನ ಮೂಲಮಂತ್ರವಾದ ಹೊಸ ರೈಲುಗಳು ಹೊಸ ಮಾರ್ಗಗಳು ಮತ್ತು ಟಿಕೆಟ್ ದರಗಳ ಬಗ್ಗೆ ಯಾವುದೇ ಬದಲಾವಣೆ ಮಾಡದೆ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಇಂಧನದ ಬೆಲೆ ಗಣನೀಯ ಇಳಿಮುಖ ಕಂಡಿದ್ದರು, ರೈಲ್ವೆ ಪ್ರಯಾಣಿಕರಿಗೆ ಸಂತಸ ತರುವಂತಹ ಟಿಕೆಟ್ ದರದ ಇಳಿಕೆಯ ಯಾವ ಪ್ರಸ್ತಾಪವೂ ಇಲ್ಲ. ಸಾಮಾನ್ಯವಾಗಿ ಹೆಚ್ಚಿನ ರೈಲುಗಳ ನಿರೀಕ್ಷೆ, ಹೊಸ ಮಾರ್ಗಗಳ ನಿರೀಕ್ಷೆ ರೇಲ್ವೇ ಬಜೆಟ್ ನಲ್ಲಿ ಇರುತ್ತದೆ. ಆದರೆ ಯಾವುದೇ ಹೊಸ ರೈಲನ್ನು ಘೋಷಣೆ ಮಾಡದೆ, ಗಣನೀಯವಾದ ಯಾವುದೇ ಹೊಸ ರೇಲ್ವೇ ಮಾರ್ಗವನ್ನು ಘೋಷಿಸದೆ ಅಚ್ಚರಿ ಮೂಡಿಸಿದ್ದಾರೆ.
ಹಲವಾರು ರಾಜ್ಯಗಳಲ್ಲಿ ಸಬ್ ಅರ್ಬನ್ ರೇಲ್ವೇ ಮಾರ್ಗಗಳನ್ನು ನಿರ್ಮಿಸುವ ಪ್ರಸ್ತಾಪ ಮಾಡಿರುವುದು ಒಂದು ಖುಷಿಯ ಸಂಗತಿಯಾಗಿದೆ.