ಬೆಂಗಳೂರು: 2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಾರಂಪರಿಕ ಪ್ರದೇಶಗಳಾದ ಮೈಸೂರು, ಶ್ರೀರಂಗಪಟ್ಟಣ, ಬೇಲೂರು, ಹಳೇಬೀಡು ಸೇರಿದಂತೆ ಇನ್ನಿತರೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗಳಿಗೆ ರು.20 ಕೋಟಿಗಳ ಒದಗಿಸಿದ್ದಾರೆ.
ಯೋಜನೆಗಳು
• ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ -1 ಕೋಟಿ ರೂ.
• `ಹಾವೇರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಸ್ತು ಸಂಗ್ರಹಾಲಯ ಸ್ಥಾಪನೆ'-2.5 ಕೋಟಿ.ರೂ.
• ಕನ್ನಡದ ಪ್ರಥಮ ಅಂತರ್ಜಾಲ ವಿಶ್ವಕೋಶ `ಕಣಜ' ಅಭಿವೃದ್ಧಿಗೆ ಸಮಿತಿ ಸ್ಥಾಪನೆ - 2 ಕೋಟಿ ರೂ.
• ತಲಾ 1 ಕೋಟಿ ರೂ.ಗಳ ಅನುದಾನದಲ್ಲಿ,
1 ಕಡಲ ತೀರದ ಭಾರ್ಗವ ಡಾ|| ಶಿವರಾಮ ಕಾರಂತ ಸ್ಮಾರಕ ನಿರ್ಮಾಣ.
2 ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಮಡಿಕೇರಿಯ ನಿವಾಸ - ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ.
3 ಕನ್ನಡದ ಮೊದಲ ರಾಷ್ಟ್ರಕವಿ ಡಾ|| ಮಂಜೇಶ್ವರ ಗೋವಿಂದ ಪೈ ಅವರ ನಿವಾಸದ ಪುನರುಜ್ಜೀವನ.
4 ಕವಿ ಶೈಲ ಮಾದರಿಯಲ್ಲಿ ಜಿ.ಎಸ್. ಶಿವರುದ್ರಪ್ಪ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ.ರಾ. ಬೇಂದ್ರೆ ಇವರ ಜನ್ಮ ಸ್ಥಳ/ಮನೆಗಳ ಅಭಿವೃದ್ಧಿ.
• ಕೊಂಕಣಿ ಅಧ್ಯಯನ ಪೀಠ ಸ್ಥಾಪನೆ - 2 ಕೋಟಿ ರೂ.ಗಳ ಶಾಶ್ವತ ನಿಧಿ ಘೋಷಣೆ.
• ಶ್ರವಣಬೆಳಗೊಳದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಜೈನ ಶಾಸನಗಳ ಅಧ್ಯಯನ ಪೀಠ ಸ್ಥಾಪನೆ - 1 ಕೋಟಿ ರೂ.
• ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ವರ್ಚುವಲ್ ತರಗತಿಗಳ ಮತ್ತು ಬೆಂಗಳೂರಿನಲ್ಲಿ ಕನ್ನಡ ಕಲಿಕೆ ಕೇಂದ್ರಗಳ ಸ್ಥಾಪನೆ - 1 ಕೋಟಿ ರೂ.
• ಒಟ್ಟು 4 ಕೋಟಿ ರೂ.ಗಳ ಅನುದಾನದಲ್ಲಿ,
1 ಹವ್ಯಾಸಿ ರಂಗತಂಡಗಳ ಪುನಶ್ಚೇತನ.
2 ಜನಪದ ಪ್ರದರ್ಶನ ಕಲೆಗಳಲ್ಲಿ ಮಹಿಳೆಯರಿಗೆ ತರಬೇತಿ ಕಾರ್ಯಾಗಾರಗಳ ಹಾಗೂ ತಂಡಗಳ ನಿರ್ಮಾಣ.
3 ಮಹಿಳಾ ದೌರ್ಜನ್ಯಗಳ ಕುರಿತ ಹೊಸ ನಾಟಕಗಳ ಪ್ರಯೋಗ.
4 ಮಕ್ಕಳ ಸಮಸ್ಯೆ ಕುರಿತ ನಾಟಕ ರಚನೆ ಮತ್ತು ಪ್ರದರ್ಶನಕ್ಕೆ ಪ್ರೋತ್ಸಾಹ ಹಾಗೂ ಸಾಹಿತ್ಯ ಚಟುವಟಿಕೆಗಳ ವಿಸ್ತರಣೆ.
• ಚರ್ಮವಾದ್ಯ ಕಲಾವಿದರ ರಾಜ್ಯಮಟ್ಟದ ಸಮ್ಮೇಳನ, ಕಾರ್ಯಾಗಾರಗಳ ಆಯೋಜನೆ.
• ವಿಭಾಗೀಯ ರಂಗಾಯಣಗಳ ಕಾರ್ಯನಿರ್ವಹಣೆಗೆ ಮತ್ತು ಹೊಸ ನಾಟಕಗಳ ಸಿದ್ಧತೆಗಾಗಿ 4 ಕೋಟಿ ರೂ.ಗಳ ವಿಶೇಷ ಅನುದಾನ.
• ಬೆಂಗಳೂರಿನಲ್ಲಿ ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ - 1.2 ಕೋಟಿ ರೂ.
• ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳನ್ನೊಳಗೊಂಡ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ - ಪ್ರಾಥಮಿಕವಾಗಿ 1 ಕೋಟಿ ರೂ.
• ಘೋಷಿತ 772 ಸಂರಕ್ಷಿತ ಸ್ಮಾರಕಗಳ ಪಹರೆ/ಕಾವಲು, ಜಿ.ಐ.ಎಸ್. ಮೂಲಕ ಸರ್ವೆ ಮತ್ತು 3ಡಿ ಮ್ಯಾಪಿಂಗ್, ಸಂರಕ್ಷಣೆ ಹಾಗೂ ಅರಕ್ಷಿತ ಸ್ಮಾರಕಗಳ ಇನ್‍ವೆಂಟರಿ ತಯಾರಿಕೆಗಾಗಿ 5 ಕೋಟಿ ರೂ.
• ಘೋಷಿತ 20 ಪಾರಂಪರಿಕ ಪ್ರದೇಶಗಳ ಸಮಗ್ರ ಅಭಿವೃದ್ಧಿ- 20 ಕೋಟಿ ರೂ.
• ಮಳಖೇಡ ಕೋಟೆಯ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿ - 5 ಕೋಟಿ ರೂ.
• ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಯಲ್ಲಿರುವ ರಾಜ್ಯದ 3 ಸ್ಮಾರಕ ಸಮೂಹ ತಾಣಗಳ ಡೋಸಿಯರ್ ಮತ್ತು ವರದಿ ತಯಾರಿಕೆ - 3 ಕೋಟಿ ರೂ.
• ದೇವರದಾಸಿಮಯ್ಯನವರಿಗೆ ಸಂಬಂಧಿಸಿದ ಸ್ಮಾರಕಗಳು, ಪುಷ್ಕರಣಿಗಳ ಸಂರಕ್ಷಣೆಗೆ ಕಾರ್ಯ ಯೋಜನೆ - 2 ಕೋಟಿ ರೂ.
• ಕಿತ್ತೂರು ರಾಣಿ ಚನ್ನಮ್ಮ ಸಮಾಧಿ ಸ್ಥಳದ ಸಮಗ್ರ ಅಭಿವೃದ್ಧಿ- 1 ಕೋಟಿ ರೂ.
• ಶಿವಶರಣ ಬಸವಣ್ಣನವರ ಸಮಕಾಲೀನ ಹರಳಯ್ಯನವರ ಗದ್ದಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆ - 50 ಲಕ್ಷ ರೂ.
• ಕನ್ನಡ ಸಾಹಿತ್ಯ ಪರಿಷತ್ 100 ವರ್ಷ ಪೂರ್ಣ, 2015-16 ಕನ್ನಡ ವರ್ಷಾಚರಣೆ - 10 ಕೋಟಿ ರೂ.ಗಳು.
• ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಿದ್ಧ ಚಿತ್ರ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿರವರ ಅಧ್ಯಯನ ಪೀಠ ಸ್ಥಾಪನೆ - 1 ಕೋಟಿ ರೂ.ಗಳು.
• ಚಿತ್ರದುರ್ಗದ ಶ್ರೀ ಮುರುಘಮಠದ ಆವರಣದಲ್ಲಿ ವಿಶ್ವಗುರು ಬಸವಣ್ಣನವರ 325 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ- 10 ಕೋಟಿ ರೂ.ಗಳು.
• ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ 20ಕೋಟಿ ರೂ. ನಿಗದಿ.
ಒಟ್ಟಾರೆಯಾಗಿ ಕನ್ನಡ ಮತ್ತುತ ಸಂಸ್ಕೃತಿ ಇಲಾಖೆಗೆ 2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರು.303 ಕೋಟಿ ಗಳನ್ನು ಒದಗಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.