ನವದೆಹಲಿ: ಒಳ್ಳೆಯ ದಿನಗಳು ಬರಲಿವೆ. ಇಂದಿಗಿಂತ ನಾಳೆ ಮತ್ತಷ್ಟು ಉತ್ತಮವಾಗಲಿದೆ. ಹಾಗಂತ ಲೋಕಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ 2014-15ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.
ರಾಷ್ಟ್ರದ ಆರ್ಥಿಕ ಅಭಿವೃದ್ಧಿ 2016ನೇ ವಿತ್ತೀಯ ವರ್ಷದಲ್ಲಿ ಶೇ.8.1-8.5ರಷ್ಟಾಗಲಿದೆ, ಪ್ರಸಕ್ತ ಸಾಲಿನ ಅಬಿsವೃದಿಟಛಿ ದರ ಶೇ.7.4ರಷ್ಟು ಎಂದು ಅಂದಾಜಿಸಿದೆ. ಪ್ರಸಕ್ತ ಸಾಲಿನ ಅಭಿವೃದ್ಧಿ ದರ ಶೇ.7.4. ಮುಂದಿನ ವಿತ್ತೀಯ ವರ್ಷದ ಅಭಿವೃದ್ಧಿ ದರ ಶೇ.8.5ರಷ್ಟಾದರೆ, ಭಾರತ ಅಭಿವೃದ್ಧಿ ಪಥದಲ್ಲಿ ಚೀನಾವನ್ನು ಹಿಂದಿಕ್ಕಿದಂತಾಗುತ್ತದೆ. ಹಣದುಬ್ಬರ ಇಳಿಜಾರು ಹಾದಿಯಲ್ಲೇ ಸಾಗಿರುವುದರಿಂದ ಬರುವ ದಿನಗಳಲ್ಲಿ ಎರಡಂಕಿ ಅಭಿವೃದ್ಧಿಯೂ (ಅಂದರೆ ಶೇ.10 ಮತ್ತು ಅದಕ್ಕಿಂತ ಹೆಚ್ಚು) ಸಾಧ್ಯ ಎಂದು ಸಮೀಕ್ಷೆ ತಿಳಿಸಿದೆ.
ಕೆಲವು ಅಡಚಣೆಗಳ ಹೊರತಾಗಿ ಇಡೀ ಆರ್ಥಿಕ ಪರಿಸರ ಅಭಿವೃದ್ಧಿಗೆ ಪೂರಕವಾಗಿದೆ ಎಂಬ ಅಂಶವನ್ನು ಸಮೀಕ್ಷೆ ದಾಖಲಿಸಿದೆ. ಪ್ರಸಕ್ತ ವಿತ್ತೀಯ ವರ್ಷದ ಚಾಲ್ತಿ ಖಾತೆ ಕೊರತೆ (ಸಿಎಡಿ)ಯನ್ನು ಜಿಡಿಪಿಯ ಶೇ.1.3ರಷ್ಟು ಎಂದು ಅಂದಾಜಿಸಿದೆ. ವಿದೇಶಿ ಬಂಡವಾಳ ಹೂಡಿಕೆಗೆ ಪೂರಕ ಪರಿಸ್ಥಿತಿ ಇದೆ. ಆದರೆ, ವಿತ್ತೀಯ ಕೊರತೆ ತಗ್ಗಿಸಲು ಸರ್ಕಾರ ತನ್ನ ವೆಚ್ಚದ ಮೇಲೆ ನಿಯಂತ್ರಣ ಸಾ„ಸುವುದು ಅಗತ್ಯ ಎಂದು ಸಮೀಕ್ಷೆ ಸಲಹೆ ನೀಡಿದೆ.
ಅಭಿವೃದ್ಧಿ ಸಾಧಿಸಲು ರಫ್ತು ಹಾಗೂ ಉಳಿತಾಯ ಹೂಡಿಕೆಗಳು ನಿರ್ಣಾಯಕವಾಗಲಿವೆ. ಅಭಿವೃದ್ಧಿ ಪಥದಲ್ಲಿ ಸಾಗಲು ಸರ್ಕಾರ ಆದಾಯ ಸೃಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ಮಧ್ಯಂತರ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ. 3ರಷ್ಟಕ್ಕೆ ತಗ್ಗಿಸುವ ಗುರಿ ಸಾಧಿಸಬೇಕು.
ಅಪಾಯ
ಯೂರೋಪಿನಲ್ಲಿ ಆಗುತ್ತಿರುವ ಆರ್ಥಿಕ ತಲ್ಲಣ ಮತ್ತು ಅಮೆರಿಕದ ಬಡ್ಡಿದರ ನೀತಿ- ನಮ್ಮ ಮುಂದಿರುವ ಹೊರಗಿನ ಎರಡು ಅಪಾಯಗಳು ಎಂದೂ ಸಮೀಕ್ಷೆ ತಿಳಿಸಿದೆ.
ಅಭಿವೃದ್ಧಿಗೆ ಪೂರಕ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆ, ತಗ್ಗಿದ ಹಣದುಬ್ಬರ ಮತ್ತು ಕಡಮೆ ಬಡ್ಡಿದರ ಹಾಗೂ ನಿರೀಕ್ಷಿತ ಸಾಮಾನ್ಯ ಮುಂಗಾರಿನಿಂದಾಗಿ ಅಭಿವೃದ್ಧಿ ಚೇತರಿಕೆ ಪಡೆದು ಕೊಳ್ಳಲಿದೆ. ಸರ್ಕಾರ ಇದುವರೆಗೆ ಕೈಗೊಂಡಿರುವ ಸುಧಾರಣೆಗಳು ಮತ್ತು ಕೈಗೊಳ್ಳಲಿರುವ ಸುಧಾರಣೆಗಳೂ ಅಭಿವೃದ್ಧಿಗೆ ಪೂರಕವಾಗಿವೆ.
ಸಮೀಕ್ಷೆ ಹೇಳಿದ್ದೇನು?
ಕಳೆದ ಮೂರು ತ್ರೈಮಾಸಿಕಗಳಿಂದ ಸ್ಥಗಿತಗೊಳ್ಳುತ್ತಿರುವ ಯೋಜನೆಗಳ ಪ್ರಮಾಣ ತಗ್ಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಅಂತಹ ಯೋಜನೆಗಳ ಒಟ್ಟು ಮೊತ್ತ ನಮ್ಮ ಜಿಡಿಪಿಯ ಶೇ.7ರಷ್ಟು ಇತ್ತು. ಹಿಂದಿನ ವರ್ಷ ಈ ಪ್ರಮಾಣ ಶೇ.8.3ರಷ್ಟಿತ್ತು. ಸಾರ್ವಜನಿಕ ಹೂಡಿಕೆಗೆ ಚೇತರಿಕೆ ನೀಡಿ ಮೂಲ ಸೌಲಭ್ಯ ಹೆಚ್ಚಿಸಿದ್ದರಿಂದ ಇದು ಸಾಧ್ಯವಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಯೋಜನೆಗಳು ತ್ವರತಿಗತಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈಗಿರುವ ಒಪ್ಪಂದಗಳ ಪರಾಮರ್ಶೆ ಅಗತ್ಯ.
ಅನುಷ್ಠಾನ ಕಾರ್ಯಸಾಧ್ಯ ಮಾಡುವವರಿಗೆ ಯೋಜನೆಗಳನ್ನು ಹಸ್ತಾಂತರಿಸಬೇಕು. ಪಿಪಿಪಿ ಯೋಜನೆಗಳಿಗೆ ಪೆನ್ಷನ್ ಮತ್ತು ವಿಮಾ ನಿಧಿಗಳಿಂದ ಬಂಡವಾಳ ಒದಗಿಸಬೇಕು. ಹೆದ್ದಾರಿಗಳಲ್ಲಿ ಇ-ಟೋಲ್ ವ್ಯವಸ್ಥೆ ಜಾರಿಯಾಗಬೇಕು. ನೇರ ತೆರಿಗೆ ವ್ಯವಸ್ಥೆಗೆ ಸುಧಾರಣೆ ತರುವುದು ಅತ್ಯಗತ್ಯ ಎಂದು ಸಮೀಕ್ಷೆ ಹೇಳಿದೆ.
ಸಬ್ಸಿಡಿ ಇರುತ್ತೆ
ಸಬ್ಸಿಡಿ ನೀಡಿಕೆಯಲ್ಲಿ ಸುಧಾರಣೆ ಅಗತ್ಯ, ಆದರೆ, ಸಬ್ಸಿಡಿಯನ್ನು ಪೂರ್ಣವಾಗಿ ತೆಗೆದುಹಾಕುವುದು ಅಗತ್ಯವೂ ಅಲ್ಲ, ಅಪೇಕ್ಷಣೀಯವೂ ಅಲ್ಲ ಎಂದು ಸಮೀಕ್ಷೆ ಹೇಳಿದೆ. ಕಷಿ ಉತ್ಪನ್ನಗಳ ಮಾರಾಟಕ್ಕಾಗಿ ರಾಷ್ಟ್ರೀಯ ಪ್ರಧಾನ ಮಾರುಕಟ್ಟೆ ಸ್ಥಾಪನೆಗೆ ಆರ್ಥಿಕ ಸಮೀಕ್ಷೆ ಸಲಹೆ ಮಾಡಿದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ , ರೈತರ ಮಾರುಕಟ್ಟೆಗಳು ಹಾಗೂ ಎಪಿಎಂಸಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ರೀತಿಯಲ್ಲಿ ಕೆಲಸ ಮಾಡಬೇಕಾದ ಕ್ರಮಗಳನ್ನು ಅದು ಸೂಚಿಸಿದೆ.
ಕೃಷಿ ಮಾರುಕಟ್ಟೆ: ಕೃಷಿ ಮಾರುಕಟ್ಟೆ ಎಪಿಎಂಸಿ ಕಾಯ್ದೆ ವ್ಯಾಪ್ತಿಯಲ್ಲಿದೆ. ಈ ಕಾಯ್ದೆಗಳನ್ನೂ ರಾಜ್ಯ ಸರ್ಕಾರಗಳು ರೂಪಿಸಿವೆ. ಇದರಿಂದ ರೈತರಿಗೆ ಹೆಚ್ಚಿನ ಉಪಯೋಗವಾಗುತ್ತಿಲ್ಲ. ತೆರಿಗೆ ವಸೂಲಿಗಷ್ಟೇ ಸೀಮಿತವಾಗಿದೆ. ಆದ್ದರಿಂದ ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ರಚನೆ ಅತ್ಯಗತ್ಯ ಎಂದು ಸಮೀಕ್ಷೆ ಹೇಳಿದೆ. ರೈಲು ಸರಕುಸಾಗಣೆ ದರ ಭಾರಿ ಹೆಚ್ಚಿರುವುದು ಅಭಿವೃದ್ಧಿಗೆ ಅಡ್ಡಿಯಾಗುವ ಬಗ್ಗೆಯೂ ಸಮೀಕ್ಷೆ ಕಾಳಜಿ ವ್ಯಕ್ತಪಡಿಸಿದೆ.
2015ರ ಅಂದಾಜು ಆರ್ಥಿಕ ಅಭಿವೃದ್ಧಿ ಶೇ.7.4 ಹಣದುಬ್ಬರ ಶೇ.5- 5.5 ಸಬ್ಸಿಡಿ ಜಿಡಿಪಿ ಶೇ.4.24 ಸಿಎಡಿ ಜಿಡಿಪಿಯ ಶೇ. 1.3 2016- ಮುನ್ನೋಟ ಶೇ8.5ರಷ್ಟು ಜಿಡಿಪಿ ಬೆಳವಣಿಗೆ, ಶೇ.8ರಷ್ಟು ಆರ್ಥಿಕ ಬೆಳವಣಿಗೆ ಸಿಎಡಿ ಜಿಡಿಪಿಎ ಶೇ.1ಕ್ಕಿಂತ ಕಡಿಮೆ ಹಣದುಬ್ಬರ ಶೇ.4.5-5.0