- ಕರ್ನಾಟಕದಲ್ಲಿ ಐಐಟಿ ಸ್ಥಾಪನೆ, ಜತೆಗೆ ಐಎಸ್ಎಮï ಧನಬಾದ್ ನ್ನು ಐಐಟಿಯಾಗಿ ಮೇಲ್ದರ್ಜೆಗೆ ಏರಿಸಲು ಅನುಮತಿ. ತಮಿಳುನಾಡು, ಜಮ್ಮುಕಾಶ್ಮೀರ, ಪಂಜಾಬ್, ಹಿಮಾಚಲಪ್ರದೇಶ ಹಾಗೂ ಪಮಜಾಬ್ ನಲ್ಲಿ ಏಮ್ಸ್ ಸ್ಥಾಪನೆಗೆ ಒಪ್ಪಿಗೆ. ಜತೆಗೆ ಆಂಧ್ರಪ್ರದೇಶ ಹಾಗೂ ಜಮ್ಮುಕಾಶ್ಮೀರದಲ್ಲಿ ಐಐಎಂ ಸ್ಥಾಪನೆಗೂ ಒತ್ತು ನೀಡಿರುವ ಸರ್ಕಾರ ಒಟ್ಟಾರೆ ಪ್ರಾಥಮಿಕವಾಗಿ ರು.500 ಕೋಟಿ ಮೀಸಲಿರಿಸಿದೆ.
- ಬಿಹಾರದಲ್ಲಿ ಮತ್ತೊಂದು ಏಮ್ಸ್ ಮಾದರಿ ಸಂಸ್ಥೆ ಸ್ಥಾಪನೆ.
- ಕಲಿಕಾ ಪ್ರಮಾಣಪತ್ರವಿರದ ಅಲ್ಪಸಂಖ್ಯಾತ ಯುವಕರಿಗೆ ಉದ್ಯೋಗದ ಜತೆ ಕಲಿಕೆಗಾಗಿ ವಿಶೇಷ `ನಯೀ ಮಂಝಿಲ್' ಯೋಜನೆ ಜಾರಿ, ರು.3738 ಕೋಟಿ ಮೀಸಲು.
- ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗದಂತೆ ತಡೆಯಲು ಪ್ರಧಾನ ಮಂತ್ರಿ ವಿದ್ಯಾ ಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದ್ದು, ಇದರ ನಿರ್ವಹಣೆಗೆ `ವಿದ್ಯಾರ್ಥಿ ಆರ್ಥಿಕ ನೆರವು ಪ್ರಾಧಿಕಾರ' ರಚನೆ. ಈ ಪ್ರಾಧಿಕಾರವು ಆಧುನಿಕ ತಂತ್ರಜ್ಞಾನದ ನೆರವು ಪಡೆದು ಕಾರ್ಯನಿರ್ವಹಿಸಲಿದ್ದು, ಸಾಲ ಹಾಗೂ ವಿದ್ಯಾರ್ಥಿ ವೇತನದ ನಿರ್ವಹಣೆ ಮಾಡಲಿದೆ.
- ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ ಮುಂದುವರಿಯಲಿದೆ.
- ಅಮೃತಸರದಲ್ಲಿ ತೋಟಗಾರಿಕೆ ಸಂಶೋಧನಾ ಹಾಗೂ ಅಧ್ಯಯನ ಸ್ನಾತಕೋತ್ತರ ಸಂಸ್ಥೆ.
- ಮಹಾರಾಷ್ಟ್ರ, ರಾಜಸ್ತಾನ ಹಾಗೂ ಛತ್ತೀಸಗಡದಲ್ಲಿ ರಾಷ್ಟ್ರೀಯ ಫಾರ್ಮಾಸೆಟಿಕಲ್ ಅಧ್ಯಯನ ಹಾಗೂ ಸಂಶೋಧನ ಸಂಸ್ಥೆ.
- ನಾಗಾಲ್ಯಾಂಡ್, ಓಡಿಶಾದಲ್ಲಿ ವಿಜ್ಞಾನ, ಶೈಕ್ಷಣಿಕ ಸಂಶೋಧನಾ ಸಂಸ್ಥೆ.
- ಅರುಣಾಚಲ ಪ್ರದೇಶದಲ್ಲಿ ಚಿತ್ರ ನಿರ್ಮಾಣ, ಆ್ಯನಿಮೇಷನ್ ಹಾಗೂ ಗೇಮಿಂಗ್ ಸಂಸ್ಥೆ.
- ಹರಿಯಾಣ, ಉತ್ತರಖಾಂಡದಲ್ಲಿ ಮಹಿಳಾ ತರಬೇತಿ ಅಧ್ಯಯನ ಸಂಸ್ಥೆ.
- ದೀನದಯಾಳ ಉಪಾಧ್ಯಾಯ ಜನ್ಮ ಶತಮಾನೋತ್ಸವದ ಅಂಗವಾಗಿ ಗ್ರಾಮೀಣ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಚಾಲನೆ ಹಾಗೂ ಆರಂಭಿಕವಾಗಿ ರು.1500 ಕೋಟಿ ಹಂಚಿಕೆ.