ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ ಹಾಗೂ ಸಂಶೋಧನೆಗೆ ಒತ್ತು ನೀಡಲು ಅಟಲ್ ಇನ್ನೊವೆಷನ್ ಮಿಷನ್ (ಏಮ್) ಜಾರಿಗೆ ಬರಲಿದೆ.`ನೀತಿ' ಅಡಿಯಲ್ಲಿಯೇ ಈ .ೋಜನೆ ಕಾರ್ಯನಿರ್ವಹಿಸಲಿದ್ದು, ಹೊಸತನಕ್ಕೆ ಮುನ್ನುಡಿ ಬರೆಯಲು ಪೂರಕವಾಗಲಿದೆ. ಶೈಕ್ಷಣಿಕ ರಂಗದಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುವ, ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ನೂತನ ಪರಿಕಲ್ಪನೆ ಸೃಷ್ಟಿಸಲು ಸಹಾಯಕವಾಗಲಿದೆ.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ರಂಗವನ್ನು ಪರಿಚಯಿಸುವ ಕೆಲಸ ಮಾಡಲಿದೆ. ತಾಂತ್ರಿಕತೆ ಕುರಿತು ಭಾರತಕ್ಕೆ ಪೂರಕವಾಗುವಂತೆ ವಿಶ್ವದರ್ಜೆಯಲ್ಲಿ ಒತ್ತು ನೀಡಲು ಇದು ಕಾರ್ಯನಿರ್ವಹಿಸಲಿದೆ. ಇದಕ್ಕೆ ಹರು.150 ಕೋಟಿ ಮೀಸಲಿರಿಸಲಾಗಿದೆ.
ಖಾತೆಗೆ 34,699 ಕೋಟಿ ಖಾತ್ರಿ
`ಯಾವ ರೈತನೂ ಕೆಲಸ ಇಲ್ಲದ ಖಾಲಿ ಕೂರುವಂತಿಲ್ಲ' ಇದು ಜೇಟ್ಲಿ ಹರಿಯಬಿಟ್ಟ ಮತ್ತೊಂದು ಸಂದೇಶ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ಇನ್ನಷ್ಟು ಪುಷ್ಟಿ ಒದಗಿಸಿದ್ದಾರೆ ಜೇಟ್ಲಿ. 34,699 ಕೋಟಿ ರು. ಬಿಡುಗಡೆ ಮೂಲಕ ಗ್ರಾಮೀಣ ಉದ್ಯೋಗದತ್ತ ಗಮನಾರ್ಹ ಚಿತ್ತ ಹರಿಸಿದ್ದಾರೆ. ಪ್ರತಿ ರಾಜ್ಯವೂ ಇದನ್ನು ಗುಣಮಟ್ಟದಲ್ಲಿ ಮತ್ತು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ವಿಶ್ವಾಸವಿಟ್ಟಿದ್ದಾರೆ.
ತೆರಿಗೆ ವಿನಾಯ್ತಿಗೆ ಪಿಂಚಣಿ ನಿಧಿ ಹೂಡಿಕೆ ಹೆಚ್ಚಳ
ತೆರಿಗೆ ವಿನಾಯ್ತಿ ಅವಕಾಶ ಪಡೆಯಲು ಪಿಂಚಣಿ ನಿಧಿ ಹೂಡಿಕೆ ಮಿತಿ ಹೆಚ್ಚಳ ಮಾಡಲಾಗಿದೆ. ಇದುವರೆಗೂ ರು.1 ಲಕ್ಷವರೆಗೆ ಇದ್ದ ಮಿತಿಯನ್ನು ರು.1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ದೇಶದ ಸಾಮಾಜಿಕ ಭದ್ರತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ಪಿಂಚಣಿ ಯೋಜನೆಯಡಿ ಈ ಸೌಲಭ್ಯ ದೊರೆಯಲಿದೆ. ದೇಶದಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿದೆ. ಯುವಜನತೆಯೂ ಈ ಕುರಿತು ಗಂಭೀರವಾಗಿದ್ದಾರೆ. ಹೀಗಾಗಿ ತೆರಿಗೆ ವಿನಾಯ್ತಿ ಪಡೆಯಲು ಪಿಂಚಣಿ ನಿಧಿ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಪಿಂಚಣಿ ರಹಿತ ಭಾರತದಲ್ಲಿ ಸಾಮಾಜಿಕ ಭದ್ರತೆಗಾಗಿ ಪಿಂಚಣಿಯುಕ್ತ ಭಾರತ ನಿರ್ಮಿಸಲು ಇದು ಸಹಾಯಕವಾಗಲಿದೆ