ಕೇಂದ್ರ ಬಜೆಟ್

ಹೋಟೆಲ್ ಊಟ ರುಚಿಸಲ್ಲ, ಮನರಂಜನೆ ಖುಷಿ ನೀಡಲ್ಲ

Rashmi Kasaragodu

ಸೇವಾ ತೆರಿಗೆ ಹೆಚ್ಚಳದ ಬಿಸಿ ನೇರವಾಗಿ ತಾಗುವುದು ಹೋಟೆಲ್  ಊಟ ನೆಚ್ಚಿಕೊಂಡಿ
ರುವವರಿಗೆ. ವಾಟರ್ ಪಾರ್ಕ್, ಅಮ್ಯೂಸ್‍ಮೆಂಟ್ ಪಾರ್ಕ್, ಮನರಂಜನೆ ಉದ್ದೇಶಕ್ಕೆ ಒದಗಿಸುವ ಸೇವೆಗಳು, ಮಾನ್ಯತೆ ಇಲ್ಲದ ಕ್ರೀಡಾ ಚಟುವಟಿಕೆಗಳು, ಸ್ಪರ್ಧೆಗಳು, ಸಂಗೀತ ಕಛೇರಿ, ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ಯಾದಿಗಳಲ್ಲಿ ಪ್ರವೇಶ ಶುಲ್ಕ ರು.  500 ಕ್ಕಿಂತ ಜಾಸ್ತಿ ಇದ್ದಲ್ಲಿ, ಖಾಸಗಿ ಕ್ಷೇತ್ರಕ್ಕೆ ಸರ್ಕಾರ ಒದಗಿಸುವ ಯಾವುದೇ ಸೇವೆ,ವಿಮೆ ಕಂತು, ಮದ್ಯ ತಯಾರಿಕೆಯಲ್ಲಿನ ಜಾಬ್‍ವರ್ಕ್ ಇತ್ಯಾದಿಗಳು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಕೆಲವು ಕ್ಷೇತ್ರಗಳಿಗೆ ನೀಡಲಾಗಿದ್ದ ಸೇವಾ ತೆರಿಗೆಯಿಂದ ನೀಡಲಾಗಿದ್ದ ವಿನಾಯಿತಿಯನ್ನು ಹಿಂಪಡೆಯಲಾಗಿದೆ. ವಿಮಾನ ನಿಲ್ದಾಣ ಮತ್ತು ಬಂದರುಗಳ ನಿರ್ಮಾಣ, ಮ್ಯೂಚ್ಯುಯಲ್ ಫಂಡ್  ಏಜೆಂಟ್ ನೀಡುವ ಸೇವೆ, ಲಾಟರಿ ಮಾರಾಟ, ಸರ್ಕಾರ ನಡೆಸುವ ಸಾರ್ವಜನಿಕ ದೂರವಾಣಿ ವ್ಯವಸ್ಥೆ, ವಿಮಾನ ನಿಲ್ದಾಣ ಹಾಗೂ ಆಸ್ಪತ್ರೆಗಳಲ್ಲಿ ದೂರವಾಣಿ ಮೂಲಕ ಪಡೆಯುವಸೇವೆಗಳ ವಿನಾಯಿತಿ ಹಿಂಪಡೆಯಲಾಗಿದೆ. ಜಾನಪದ ಮತ್ತು ಶಾಸ್ತ್ರೀಯ ಕಲಾವಿದರು ತಾವು ನೀಡುವ ಪ್ರತಿ ಪ್ರದರ್ಶನಕ್ಕೆ ರು.  1 ಲಕ್ಷಕ್ಕಿಂತ ಕಡಿಮೆ ಸಂಭಾವನೆ ಪಡೆದರೆ (ಪ್ರಚಾರ ರಾಯಭಾರಿಗಳನ್ನು ಹೊರತುಪಡಿಸಿ), ಅಕ್ಕಿಗ, ಧಾನ್ಯ, ಹಿಟ್ಟು, ಹಾಲು, ಉಪ್ಪುಗಳ ಸಾಗಣೆ, ರಾಷ್ಟ್ರೀಯ ಉದ್ಯಾನ, ಮೃಗಾಲಯ, ವನ್ಯಜೀವಿಧಾಮ ಪ್ರವೇಶ ಶುಲ್ಕಕ್ಕೆ ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

SCROLL FOR NEXT