ರಾಜ್ಯ ಬಜೆಟ್

ದ್ವಿತೀಯ ಪಿಯುಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ

Guruprasad Narayana
ಬೆಂಗಳೂರು: ಕರ್ನಾಟಕ ಪದವಿ ಪೂರ್ಣ ಶಿಕ್ಷಣ ಮಂಡಳಿಯ ದ್ವಿತೀಯ ಪಿಯುಸಿ ಮರುಮೌಲ್ಯಮಾಪನ ಫಲಿತಾಂಶವನ್ನು ಸೋಮವಾರ ಘೋಷಿಸಲಾಗಿದೆ. ಈ ವರ್ಷ ಇಲಾಖೆಗೆ ೧೫,೧೯೫ ಅರ್ಜಿಗಳು ಮರುಮೌಲ್ಯಮಾಪನಕ್ಕೆ ಬಂದಿದ್ದವು. ಅವುಗಳಲ್ಲಿ ೧೨,೧೪೩ ಉತ್ತರ ಪತ್ರಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇಲಾಖೆ ತಿಳಿಸಿದೆ. 
ಆದರೆ ಒಬ್ಬ ಅಭ್ಯರ್ಥಿಗೆ ಮರುಮೌಲ್ಯಮಾಪನದ ನಂತರ ೪೮ ಹೆಚ್ಚುವರಿ ಅಂಕಗಳು ದೊರೆತಿರುವುದು ವಿಶೇಷ. ಮಾರ್ಚ್ ನಲ್ಲಿ ನಡೆದ ಪರೀಕ್ಷೆಗಳಿಗೆ ಮೇ ೧೧ ರಂದು ಫಲಿತಾಂಶ ಹೊರಬಿದ್ದಿತ್ತು. 
ನಿರ್ಧಿಷ್ಟ ವಿಷಯಗಳ ಪತ್ರಿಕೆಗಳಲ್ಲಿ ೪೩೮ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನದ ನಂತರ ನಾಲ್ಕಕ್ಕಿಂತಲೂ ಹೆಚ್ಚು ಅಂಕ ಬಂದಿದ್ದರೆ, ೫೦೨ ವಿದ್ಯಾರ್ಥಿಗಳು ನಾಲ್ಕಕ್ಕಿಂತಲೂ ಹೆಚ್ಚು ಅಂಕ ಕಳೆದುಕೊಂಡಿದ್ದಾರೆ. ೯೭೬ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನದ ನಂತರ ೬ಕ್ಕಿಂತಲೂ ಹೆಚ್ಚು ಅಂಕ ಬಂದಿದೆ ಎಂದು ಇಲಾಖೆ ತಿಳಿಸಿದೆ. 
SCROLL FOR NEXT