ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸುತ್ತಿರುವ ಬಜೆಟ್ ನಲ್ಲಿ ಕೆಲ ತೆರಿಗೆ ವಿನಾಯ್ತಿಗಳನ್ನು ಮುಂದುವರೆಸಿದ್ದಾರೆ.
ಸರಕು ಸೇವಾ ತೆರಿಗೆ ಜಾರಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಸಲು ತೀರ್ಮಾನ.
ಬಿಯರ್, ಫೆನ್ನಿ, ಲಿಕ್ಕರ್, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು.
ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ. ಅಬಕಾರಿ ಶುಲ್ಕದಲ್ಲಿ ಹೆಚ್ಚಳ.
ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ.
ರಾಜ್ಯದಲ್ಲಿ ನೀರಾ ನೀತಿ ಜಾರಿ.