ರಾಜ್ಯ ಬಜೆಟ್

ಸಿದ್ದು ಬಜೆಟ್ ನಲ್ಲಿ ಶಿಕ್ಷಣಕ್ಕೆ ಸಿಕ್ಕಿದ್ದೇನು?

Srinivasamurthy VN

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, 2017-18ನೇ ಸಾಲಿನಲ್ಲಿ 1,86, 561 ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ.

ಈ ಪೈಕಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದು, ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಸಮಸ್ಯೆಗೆ ಪರಿಹಾರ ಕಲ್ಪಿಸಲು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಉನ್ನತ ಶಿಕ್ಷಣಕ್ಕೆ  4,401 ಕೋಟಿ, ವೈದ್ಯಕೀಯ ಶಿಕ್ಷಣಕ್ಕೆ 2004 ಕೋಟಿ ರು ಹಣ ಮೀಸಲಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಪಟ್ಟಿ ಇಲ್ಲಿದೆ.

1. 12 ಲಕ್ಷ ಮಹಿಳೆಯರಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ವಿಸ್ತರಣೆಯ.
2. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರಿಗಾಗಿ 145 ಚಿಕಿತ್ಸಾ ಘಟಕ ಸ್ಥಾಪನೆ.
3. 6 ಹೊಸ ಮೆಡಿಕಲ್ ಕಾಲೇಜು, 5 ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ನಿಧಿ ಮೀಸಲು
4. ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ ಮಕ್ಕಳಿಗೆ ಹಾಲು ಮೊಟ್ಟೆ ವಿತರಣೆ.
6. ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ.
7. ಉನ್ನತ ಶಿಕ್ಷಣ ಇಲಾಖೆಗೆ ಒಟ್ಟು 4,401 ಕೋಟಿ ರುಪಾಯಿ ಅನುದಾನ. ಶಾಲಾ ನಿರ್ವಹಣೆ, ಸುಧಾರಣೆಗೆ ಶಿಕ್ಷಣ ಕಿರಣ ಯೋಜನೆ ಜಾರಿ.
8. ಹಂಪಿ ಕನ್ನಡ ವಿವಿಗೆ 25 ಕೋಟಿ ಯೋಜನೆ. ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪನೆ. ರಾಯಚೂರಿನಲ್ಲಿ ಹೊಸ ವಿವಿ ಸ್ಥಾಪನೆ.
9. 1626 ಪ್ರೌಢಶಿಕ್ಷಕರ ನೇಮಕ. ಪ್ರೌಢಶಿಕ್ಷಣ ಇಲಾಖೆಗೆ 18, 266 ಕೋಟಿ ರುಪಾಯಿ ಮೀಸಲು. 2 ಹಂತಗಳಲ್ಲಿ 1191 ಪಿಯು ಉಪನ್ಯಾಸಕರ ನೇಮಕ.
10. ಗ್ರಾಮೀಣ ಪ್ರದೇಶದಲ್ಲಿ 25 ಪಾಲಿಟೆಕ್ನಿಕ್ ಕಾಲೇಜು ಆರಂಭ. ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಒಂದು ಸಾವಿರ ರುಪಾಯಿ ವಿಶೇಷ ಗೌರವಧನ.
11. 16, 500 ನರ್ಸ್ ಗಳಿಗೆ ಕಂಪ್ಯೂಟರ್ ಟ್ಯಾಬ್ ನೀಡಲಾಗುವುದು. ಹೊಸದಾಗಿ ಅಲ್ಪಸಂಖ್ಯಾತರ 20 ಮೊರಾರ್ಜಿ ದೇಸಾಯಿ ವಸತಿ ಶಾಲೆ, 5 ಪದವಿ ಪೂರ್ವ ಕಾಲೇಜು, 2 ಮಾದರಿ ಶಾಲೆ ಆರಂಭಿಸಲು ಕ್ರಮ
12. ಉತ್ತರಕರ್ನಾಟಕಕ್ಕೆ ಪ್ರತ್ಯೇಕ ಬಯಲಾಟ ಅಕಾಡೆಮಿ. ಬನವಾಸಿ ಹಾಗೂ ಸರ್ವಜ್ಞ ಪೀಠ ಅಭಿವೃದ್ಧಿಗೆ 5 ಕೋಟಿ ಮೀಸಲು.
13. ಮಾಹಿತಿ, ಜೈವಿಕ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ 229 ಕೋಟಿ ರೂ. ಮೀಸಲು
14. ಬೆಂಗಳೂರಿನ ಐಐಐಟಿಯಲ್ಲಿ ರೋಬೋಟಿಕ್ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ.
15. ಜಿಲ್ಲೆಗಳಿಗೆ ಒಂದರಂತೆ 5ಜಿಲ್ಲೆಗೆ ಸಂಚಾರಿ ತಾರಾಲಯ ನಿಯೋಜನೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 23 ಹೊಸ ಮಹಿಳಾ ಹಾಸ್ಟೆಲ್ ನಿರ್ಮಾಣ
16. ಹಾಸ್ಟೆಲ್ ಸೌಲಭ್ಯ ಒಳಗೊಂಡ 10 ಮಾದರಿ ಎಸ್​ಸಿ/ಎಸ್​ಟಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
17. ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ 2000 ರಿಂದ 4000 ಕ್ಕೆ ಏರಿಕೆ
18. ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡಮಿ ಸ್ಥಾಪನೆ. ಬನವಾಸಿ ಅಭಿವೃದ್ಧಿ ಪ್ರಾಧಿಕಾರ, ಸರ್ವಜ್ಞ ಅಭಿವೃದ್ಧಿ ನಿಗಮಕ್ಕೆ 5 ಕೋಟಿ ರೂ.
19. ಧಾರವಾಡ ವಿವಿಯಲ್ಲಿ ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರ ಸ್ಥಾಪನೆ
20. ಜುಲೈ ತಿಂಗಳಿನಿಂದ ವಾರದಲ್ಲಿ 5ದಿನ ವಿದ್ಯಾರ್ಥಿಗಳಿಗೆ ಹಾಲು ವಿತರಣೆ
21. 8ರಿಂದ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಇನ್ನು ಮುಂದೆ ಚೂಡಿದಾರ ಸಮವಸ್ತ್ರ

SCROLL FOR NEXT