ರಾಜ್ಯ ಬಜೆಟ್

ಜನಪರ ಬಜೆಟ್ ಮಂಡಿಸಲು ಹೊರಟ್ಟಿದ್ದೇನೆ: ಸಿಎಂ ಸಿದ್ದರಾಮಯ್ಯ ಟ್ವೀಟ್

Srinivasamurthy VN

ಬೆಂಗಳೂರು: 2017-18 ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿವಾಸದಿಂದ ವಿಧಾನ ಸೌಧಕ್ಕೆ ಆಗಮಿಸಿದ್ದು, ಜನಪರ ಬಜೆಟ್ ಮಂಡಿಸಲು ಉತ್ಸುಕನಾಗಿದ್ದೇನೆ ಎಂದು ಟ್ವೀಟ್  ಮಾಡಿದ್ದಾರೆ.

12 ನೇ ಬಾರಿ ಬಜೆಟ್‌ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರು ಟ್ವೀಟರ್‌ನಲ್ಲಿ, "ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುವ ಬಜೆಟ್‌ ಮಂಡಿಸಲು ಹೊರಟಿದ್ದೇನೆ. ರಾಜ್ಯದ ಜನತೆ 12 ನೇ ಬಾರಿ ಬಜೆಟ್‌ ಮಂಡಿಸಲು  ಸಾರ್ಥಕ ಅವಕಾಶ ನೀಡಿದ್ದಾರೆ. ರಾಜ್ಯದ ಜನರನ್ನು ನೆನೆಯುತ್ತಾ ಬಜೆಟ್‌ ಮಂಡಿಸುತ್ತೇನೆ.ಬಜೆಟ್‌ ಸಾಮನ್ಯ ಜನತೆ, ಮಹಿಳೆಯರು, ರೈತರು, ಯುವಜನತೆ ಮತ್ತು ಉದ್ಯಮಿಗಳ ಪರವಾಗಿರಲಿದೆ" ಎಂದು ಬರೆದಿದ್ದಾರೆ.

ಬೆಳೆ ವಿಮೆ ಪರಿಹಾರ ವಿತರಣೆಗೆ "ಸರಕ್ಷಣಾ ತಂತ್ರಾಂಶ", ಬೆಳೆ ನಷ್ಟ ಪರಿಹಾರ ವಿತರಿಸಲು "ಪರಿಹಾರ ತಂತ್ರಾಂಶ"ವನ್ನು ನಮ್ಮ ಸರ್ಕಾರ ರೂಪಿಸಿದೆ. ಇದು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ಬಂದಿರುವ ವ್ಯವಸ್ಥೆ. ಈ ಮೂಲಕ  ರೈತರು ಮಧ್ಯವರ್ತಿಗಳ ಹಾವಳಿ ಇಲ್ಲದೆ ಪರಿಹಾರವನ್ನು ನೇರವಾಗಿ ಪಡೆಯಬಹುದು. ನಾಡಿನ ಸಮಗ್ರ ವಿಕಾಸಕ್ಕೆ ಕಾರಣವಾಗುವಂಥ 12 ಬಜೆಟ್ ಗಳನ್ನು ಮಂಡಿಸುವ ಸಾರ್ಥಕ ಅವಕಾಶ ನೀಡಿದ ರಾಜ್ಯದ ಜನತೆಯನ್ನು  ನೆನೆಯುತ್ತ ಜನಪರ ಬಜೆಟ್ ಮಂಡನೆಗೆ ಹೊರಟಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ

ಇನ್ನು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್‌.ಎಸ್‌.ಪ್ರಸಾದ್‌ ಅವರು ಬಜೆಟ್‌ ಪ್ರತಿಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದ್ದಾರೆ.

SCROLL FOR NEXT