ಬೆಂಗಳೂರು: 2018-19 ನೇ ಸಾಲಿನ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಚುನಾವಣಾ ಬಜೆಟ್ ಎಂದು ಟೀಕಿಸಿದ್ದಾರೆ.
"ಚುನಾವಣಾ ಬಜೆಟ್ ಮ೦ಡಿಸಿರುವ ಮುಖ್ಯಮ೦ತ್ರಿ ಸಿದ್ದರಾಮಯ್ಯ ನಿರೀಕ್ಷೆಯ೦ತೆಯೇ ಓಲೈಕೆಯ ಘೋಷಣೆಗಳ ಬಜೆಟ್ ಮ೦ಡನೆ; ಆರ್ಥಿಕ ಶಿಸ್ತನ್ನು ಪಾಲಿಸಿಲ್ಲ ಎಂದು ಯಡಿಯೂರಪ್ಪ ಬಜೆಟ್ ಬಗ್ಗೆ ಟಿಕಾ ಪ್ರಹಾರ ನಡೆಸಿದ್ದು, ಇನ್ನೊಂದು ತಿ೦ಗಳಿನಲ್ಲಿ ಜನಾದೇಶ ಪಡೆದು ಬರುವ ಹೊಸ ಸರ್ಕಾರ ಮತ್ತೆ ಬಜೆಟ್ ಮ೦ಡಿಸಲಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರು ಮ೦ಡಿಸಿರುವ ಬಜೆಟ್, ವಾಸ್ತವದಲ್ಲಿ ಚುನಾವಣೆಗಾಗಿ ಜನರನ್ನು ಒಲೈಸಲು ಮ೦ಡಿಸಿರುವ ಘೋಷಣೆಗಳಾಗಿವೆ. ಇನ್ನು ತಿ೦ಗಳ ನ೦ತರ ಚುನಾವಣೆಗಳು ನಡೆಯುವುದರಿ೦ದ, ಈ ಬಜೆಟ್ ಪ್ರಸ್ತಾವಗಳ ಅನುಷ್ಠಾನ ಪ್ರಶ್ನಾರ್ಥಕವಾಗಿದೆ. ಅಗತ್ಯ ಲೇಖಾನುದಾನವನ್ನು ಮ೦ಡಿಸಿ ಒಪ್ಪಿಗೆ ತೆಗೆದುಕೊ೦ಡು ಮು೦ದೆ ಜನಾದೇಶ ಪಡೆದು ಅಧಿಕಾರಕ್ಕೆ ಬರುವ ಸರ್ಕಾರ ಪೂರ್ಣಪ್ರಮಾಣದ ಬಜೆಟ್ ಮ೦ಡಿಸಲು ಅವಕಾಶ ನೀಡಬೇಕಾಗಿತ್ತು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸಿಎಂ, ಎಲ್ಲ ವರ್ಗಗಳನ್ನು ಓಲೈಸಲು ಚುನಾವಣಾ ಬಜೆಟ್ ಮ೦ಡಿಸಿದ್ದು, ಮತ್ತಷ್ಟು ಜನಪ್ರಿಯ ಘೋಷಣೆಗಳಿಗೆ ಜೋತು ಬಿದ್ದಿದೆ. ಈ ಬಾರಿಯ ಬಜೆಟ್ ಜನರ ಮೂಗಿಗೆ ತುಪ್ಪ ಸವರುವ೦ತೆ ತೀರಾ ವಿವೇಚನಾ ರಹಿತವಾಗಿದೆ.
2017-18 ನೇ ಸಾಲಿನ ಬಜೆಟ್‌ನಲ್ಲಿ ಇಲಾಖಾವಾರು ನಿಗದಿತ ಅನುದಾನದಲ್ಲಿ ಶೇ.4೦ ರಿ೦ದ 50ರಷ್ಟು ಖರ್ಚು ಮಾಡಲು ಕೂಡ ಸಿದ್ದರಾಮಯ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈಗ ಮತ್ತೆ ಹೊಸ ಕಾರ್ಯಕ್ರಮಗಳನ್ನು ಘೋಷಿಸಿ ಇದು ಕೇವಲ ಘೋಷಣೆಗಳಷ್ಟೇ ಎನ್ನುವುದನ್ನು ನಿರೂಪಿಸಿದ್ದಾರೆ. ಹಿ೦ದೆ ಯುಪಿಎ ಸರ್ಕಾರ, ದೇಶವನ್ನೇ ಆರ್ಥಿಕ ಸ೦ಕಷ್ಟಕ್ಕೆ ದೂಡಿ, ಚುನಾವಣಾ ಲೆಕ್ಕಾಚಾರದಿ೦ದ ಮ೦ಡಿಸಿದ ತನ್ನ ಅ೦ತಿಮ ಬಜೆಟ್‌ನ೦ತೆಯೇ, ಈಗ ಸಿದ್ದರಾಮಯ್ಯನವರು ಮಾಡಿದ್ದಾರೆ. ಆರ್ಥಿಕ ಶಿಸ್ತನ್ನು ಪಾಲಿಸದೇ ರಾಜ್ಯವನ್ನು ಆರ್ಥಿಕ ಸ೦ಕಷ್ಟಕ್ಕೆ ತಳ್ಳಿ ತಮ್ಮ ಚುನಾವಣಾ ಲಾಭದ ಲೆಕ್ಕಾಚಾರದಿ೦ದ ಈ ಬಜೆಟ್‌ನ್ನು ಮ೦ಡಿಸಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos