ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ಬಜೆಟ್ 2018ರಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 1,681 ಕೋಟಿ ರು.ಗಳನ್ನು ಮೀಸಲಿಡಲಾಗಿದ್ದು, ಪ್ರಮುಖವಾಗಿ ಉತ್ಪಾದನೋದ್ಯಮ ಉತ್ತೇಜಿಸಲು ಇನ್ನೋವೇಶನ್ ಪಾಲಿಸಿ ರೂಪಿಸಲಾಗಿದೆ.
ಬಜೆಟ್ ನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿರುವ ಪ್ರಮುಖಾಂಶಗಳ ಪಟ್ಟಿ ಇಲ್ಲಿದೆ.
ಸರಕು ಸಾಗಾಣಿಕೆ ಸೌಲಭ್ಯ ಸುಧಾರಿಸಕಲು ಲಾಗಿಸ್ಟಿಕ್ ನೀತಿ
ಬೆಂಗಳೂರು ಸಮೀಪ 400 ಎಕರೆ, ಹುಬ್ಬಳಿಯಲ್ಲಿ 50 ಎಕರೆ ಪ್ರದೇಶದಲ್ಲಿ ಲಾಗಿಸ್ಟಿಕ್ ಪಾರ್ಕ್ ನಿರ್ಮಾಣ
ಕೈಗಾರಿಕೆಗಳ ಸ್ಥಾಪನೆಗೆ ಕಾರ್ಮಿಕ ಸಾಂದ್ರತೆಯ ಉದ್ಯಮಗಳ ನೀತಿ ಜಾರಿ
ಅಸಲಿ ಆಸ್ತಿ ತೆರಿಗೆ ಇದೇ ಸೆಪ್ಟೆಂಬರ್ ಒಳಗೆ ಪಾವತಿಸಿದರೆ ಸ್ಥಳಿಯ ಸಂಸ್ಥೆಗಳು ವಿಧಿಸಿದ ದಂಡ ಮನ್ನಾ
ಉತ್ಪಾದನೋದ್ಯಮ ಉತ್ತೇಜಿಸಲು ಇನೋವೇಶನ್ ಪಾಲಿಸಿ ಘೋಷಣೆ
23 ಕೋಟಿ ವೆಚ್ಚದಲ್ಲಿ ಕಲಿಕಾ ಶ್ರೇಷ್ಠತಾ ಕೇಂದ್ರ ಸ್ಥಾಪನೆ
ಗ್ರಾಮೀಣರಿಗೆ ಉದ್ಯೋಗಾವಕಾಶ ಕಲ್ಪಿಸಲು 30 ಎಕರೆ ಬಂಜರು ಭೂಮಿ ಉದ್ಯಮ ವಲಯ ಎಂದು ಘೋಷಣೆ
ರಾಜ್ಯ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ 5 ಕೋಟಿ ಬಿಡುಗಡೆ
ಸಣ್ಣ ಮತ್ತು ಮದ್ಯಮ ಕೈಗಾರಿಕೆಯ ಅಭಿವೃದ್ಧಿಗೆ 11 ಹೊಸ ಕೈಗಾರಿಕಾ ವಸಹಾತು ನಿರ್ಮಾಣ
ಬೆಳಗಾವಿಯಲ್ಲಿ ಸಕ್ಕರೆ ತಂತ್ರಜ್ಞಾನ ಕೋರ್ಸ್ ಆರಂಭಕ್ಕೆ ಚಿಂತನೆ
ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಭಿವೃದ್ಧಿಗೆ ಕೊಡುಗೆಗಳು
ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ಅಭಿವೃದ್ಧಿಗೆ 11 ಹೊಸ ಕೈಗಾರಿಕಾ ವಸಹಾತು ನಿರ್ಮಾಣ
ಬೆಳಗಾವಿಯಲ್ಲಿ ಸಕ್ಕರೆ ತಂತ್ರಜ್ಞಾನ ಕೋರ್ಸ್ ಆರಂಭಕ್ಕೆ ಚಿಂತನೆ
ಕಬ್ಬು ಬೆಳೆಗಾರರಿಗೆ ಉತ್ತೇಜನ ನೀಡಲು ಹೊಸ ಕಬ್ಬು ತಳಿ ಅಭಿವೃದ್ಧಿ ಮತ್ತು ಕಬ್ಬು ಬೆಳೆಗಾರರಿಗೆ ಉತ್ತೇಜನಕ್ಕಗಿ 5 ಕೋಟಿವರೆಗೆ ಸಹಾಯಧನ
ವೈಮಾನಿಕ ಇಂಧನದ ಮೇಲಿನ ತೆರಿಗೆ ಶೇ.5ಕ್ಕೆ ಇಳಿಕೆ ಅಂತೆಯೇ ವೈಮಾನಿಕ ಇಂಧನ ತೆರಿಗೆ ಶೇ.28ರಿಂದ ಶೇ.5ಕ್ಕೆ ಇಳಿಕೆ.
ನೋಂದಣಿ ದಾಖಲೆಗಳ ಡಿಜಿಟಲೀಕರಣಕ್ಕೆ ಸುರಭಿ ಯೋಜನೆ ಘೋಷಣೆ
'ಸುರಭಿ'ಯೋಜನೆಯಲ್ಲಿ ದಾಖಲೆಗಳ ಡಿಜಿಟಲೀಕರಣಕ್ಕೆ ಯೋಜನೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos