ಬೆಂಗಳೂರು: 2018-19ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದು, ಇದು 13ನೇ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಒಟ್ಟು 2,09,181 ಕೋಟಿ ರೂ ವೆಚ್ಚದಿಂದ ಕೂಡಿದ್ದು, ಈ ಪೈಕಿ ರಾಜಸ್ವ ವೆಚ್ಚ- 1,62,637 ಕೋಟಿ ರೂ ಗಳಾಗಿದೆ. ಅಂತೆಯೇ ಬಂಡವಾಳ ವೆಚ್ಚ 35,458 ಕೋಟಿ ರೂ. ಗಳಾಗಿದ್ದು, ಸಾಲ ಮರುಪಾವತಿ 11,086 ಕೋಟಿ ರೂ.ಗಳಾಗಿದೆ.
ಇನ್ನುಳಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಿರುವ ಅನುದಾನದ ಪಟ್ಟಿ ಈ ಕೆಳಕಂಡಂತಿದೆ.
ನಗರಾಭಿವೃದ್ಧಿ - 17,196 ಕೋಟಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ - 14,268 ಕೋಟಿ
ಸಮಾಜ ಕಲ್ಯಾಣ - 11,821 ಕೋಟಿ
ಒಳಾಡಳಿತ & ಸಾರಿಗೆ - 8855 ಕೋಟಿ
ಆರೋಗ್ಯ & ಕುಟುಂಬ ಕಲ್ಯಾಣ - 8822 ಕೋಟಿ
ಕೃಷಿ & ತೋಟಗಾರಿಕೆ - 7301 ಕೋಟಿ
ಮಹಿಳಾ & ಮಕ್ಕಳ ಕಲ್ಯಾಣ - 5371 ಕೋಟಿ
ಆಹಾರ & ನಾಗರಿಕ ಸರಬರಾಜು - 3852 ಕೋಟಿ
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 1681 ಕೋಟಿ
ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ 601 ಕೋಟಿ