ವಿತ್ತ ಸಚಿವ ಅರುಣ್ ಜೇಟ್ಲಿ 
ಕೇಂದ್ರ ಬಜೆಟ್

ಹೆಚ್ಚು ಸದ್ದು ಮಾಡದ ಬಜೆಟ್ ಮುಖ್ಯಾಂಶಗಳು!

ಮಧ್ಯಮ ವರ್ಗದ ಜನರಿಗೆ ಇಂದಿನ ಮಟ್ಟಿಗೆ ಯಾವುದೇ ತೆರೆನಾದ ಅನುಕೂಲ ಅಥವಾ ಸೌಲಭ್ಯ ಕಾಣುತ್ತಿಲ್ಲ. ಕೇವಲ ನನಗೇನು ಲಾಭ ಎನ್ನುವುದನ್ನ ಬಿಟ್ಟು ದೇಶದ ಹಿತ ದೃಷ್ಟಿಯಿಂದ ನೋಡಿದರೆ....

ತೆರಿಗೆ ವಿನಾಯ್ತಿ ಮಿತಿ ಏರಿಕೆ ಸೇರಿದಂತೆ, ಜನಸಾಮಾನ್ಯರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಮೋದಿ ಸರ್ಕಾರದ 2018-19 ನೇ ಸಾಲಿನ ಹಾಗೂ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಿದೆ. ಈ ಲೇಖನದಲ್ಲಿ ನೀವು ಪತ್ರಿಕೆಯಲ್ಲಿ ಕಾಣದೆ ಇದ್ದದ್ದು ಅಥವಾ ಹೆಚ್ಚಿನ ಪ್ರಚಾರ ಪಡೆಯದೇ ಹೋದ ವಿಚಾರಗಳನ್ನ ಪ್ರಸ್ತಾಪಿಸುತ್ತೇನೆ. ಅವುಗಳು ಇವತ್ತಿನ ಮಟ್ಟಿಗೆ ನಮ್ಮ ಜೀವನ ಮಟ್ಟದಲ್ಲಿ ಸುಧಾರಣೆ ತರದೇ ಇರಬಹದು ಆದರೆ ಅವುಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಫಲವನ್ನ ಕೊಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಬನ್ನಿ ಬಜೆಟ್ ನ ಹೆಚ್ಚು ಸಡ್ಡು ಮಾಡದ ಆದರೆ ಪ್ರಮುಖವಾದ ಅಂಶಗಳತ್ತ ಹರಿಸೋಣ ಚಿತ್ತ. 
* NAM  ಅಂದರೆ ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್. ದೇಶದಾದ್ಯಂತ ಇರುವ ಮಾರುಕಟ್ಟೆಗಳನ್ನ ಇಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ಬೆಸೆಯುವ ಹೊಸ ಸಾಹಸಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಭಾರತದಲ್ಲಿ 585 ಎಪಿಎಂಸಿ ಮಾರುಕಟ್ಟೆಯಿದೆ ಅವುಗಳಲ್ಲಿ ನಲವತ್ತು ಆಗಲೇ ಇಂತಹ ನೆಟ್ವರ್ಕ್ ಅಡಿಯಲ್ಲಿ ಬಂದಿವೆ. ಉಳಿದವುಗಳನ್ನ ಮಾರ್ಚ್ 2018 ವೇಳೆಗೆ ಸಂಪರ್ಕ ಕಲ್ಪಿಸಲಾಗುವುದು. 
* ನಮ್ಮ ದೇಶದಲ್ಲಿ ಇರುವ 86 ಪ್ರತಿಶತ ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ದುಂಡಾವರ್ತನೆ ರೈತರ ಸಾವಿನ ಮೂಲ ಕಾರಣವಾಗಿದೆ.  E - NAM  ಮೂಲಕ ದೇಶದ ಹಳ್ಳಿ ಹಳ್ಳಿಗಳಲ್ಲಿ ಹತ್ತಿರತ್ತಿರ 22 ಸಾವಿರ ಗ್ರಾಮೀಣ ಅಗ್ರಿಕಲ್ಚರಲ್ ಮಾರ್ಕೆಟ್ (GrAm) ತೆರೆದು ರೈತರು ತಮ್ಮ ಉತ್ಪನ್ನವನ್ನ ನೇರವಾಗಿ ಗ್ರಾಹಕರಿಗೆ ಅಥವಾ ದೊಡ್ಡ ವ್ಯಾಪಾರಸ್ಥರಿಗೆ ಮಾರುವ ಅವಕಾಶ ಕಲ್ಪಿಸಲಾಗುತ್ತದೆ. 
ನ್ಯಾಷನಲ್ ರೂರಲ್ ಲೈವೆಲಿ ಹುಡ್ ಅಡಿಯಲ್ಲಿ ಆರ್ಗಾನಿಕ್ ಕೃಷಿಯಲ್ಲಿ ತೊಡಗಿಕೊಳ್ಳಲು ಸರಕಾರ ಉತ್ತೇಜನ ನೀಡಲಿದೆ. ಸಾವಿರ ಹೆಕ್ಟರ್ ಮೇಲ್ಪಟ್ಟು ಜಾಗದಲ್ಲಿ ಇಂತಹ ಕೃಷಿಯಲ್ಲಿ ತೊಡಗಿಕೊಳ್ಳಲು ಬೇಕಾದ ಸಹಾಯ ಉತ್ತೇಜನ ಸರಕಾರದವತಿಯಿಂದ ದೊರೆಯಲಿದೆ. 
* ಬಾಂಬೂ ಅಥವಾ ಬಿದಿರನ್ನ ಗ್ರೀನ್ ಗೋಲ್ಡ್ ಅಥವಾ ಹಸಿರು ಚಿನ್ನ ಎನ್ನುತ್ತೇವೆ. ಬಿದಿರನ್ನ ಮರ ಎಂದು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಇದೀಗ ಬಜೆಟ್ ನಲ್ಲಿ 1990 ಕೋಟಿ ರೂಪಾಯಿಯನ್ನ ನ್ಯಾಷನಲ್ ಬಾಂಬೂ ಮಿಷನ್ ಅಡಿಯಲ್ಲಿ ಬಿದಿರು ಬೆಳೆಯಲು ಬಳಸಲಾಗುತ್ತದೆ. 
* ಸೌರಶಕ್ತಿ ಬಳಸುತ್ತಿರುವ ರೈತರಿಗೆ ಸಬ್ಸಿಡಿ ಸಿಗುತ್ತಿದೆ ಅದರ ಜೊತೆಗೆ ಅವರ ಬಳಿ ಉಳಿದ ಹೆಚ್ಚಿನ ಸೌರಶಕ್ತಿಯನ್ನ ಉತ್ತಮ ಬೆಲೆ ಕೊಟ್ಟು ಕೊಳ್ಳಲು ಸರಕಾರ ನಿರ್ಧರಿಸಿದೆ
*ನೀತಿ ಆಯೋಗದ ಸಹಯೋಗದೊಂದಿಗೆ ರಾಜ್ಯಸರಕಾರಗಳ ಜೊತೆ ಮಾತನಾಡಿ ರೈತರಿಗೆ ಬೆಳೆ ಮೇಲೆ ಸಾಲವನ್ನ ನೀಡಲು ಸೂಕ್ತ ರೂಪುರೇಷೆ ಸಿದ್ಧಪಡಿಸಲಾಗುವುದು ಇದರಿಂದ ಚಕ್ರ ಬಡ್ಡಿಗೆ ರೈತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಕೈ ಒಡ್ಡುವುದು ತಪ್ಪಲಿದೆ, ತನ್ಮೂಲಕ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುವ ಸಂಭವವಿದೆ . 
*ಪ್ರಧಾನ ಮಂತ್ರಿಯವರ ಉಜ್ವಲ ಯೋಜನೆಯಡಿಯಲ್ಲಿ 8 ಕೋಟಿ ಮಹಿಳೆಯರಿಗೆ ಉಚಿತ ಎಲ್ಪಿಜಿ ಸಂಪರ್ಕ ಕೊಡುವ ಉದ್ದೇಶ ಸರಕಾರದ ಮುಂದಿದೆ. ಅಷ್ಟು ಮಂದಿ ಮಹಿಳೆಯರು ಹೋಗೆ ಮುಕ್ತ ಅಡುಗೆ ತಯಾರಿಸಲು ಸಾಧ್ಯವಾಗುವುದು. 
* PMRF ಅಂದರೆ ಪ್ರಿಮೆಮಿನಿಸ್ಟರ್ ರಿಸರ್ಚ್ ಫೆಲ್ಲೋಸ್ ಅಡಿಯಲ್ಲಿ ಪ್ರತಿವರ್ಷ ಒಂದು ಸಾವಿರ ಬಿಟೆಕ್ ವಿಧ್ಯಾರ್ಥಿಗಳನ್ನ ಆಯ್ಕೆ ಮಾಡಿ ಅವರಿಗೆ ಪಿಎಚ್ಡಿ ಮಾಡಲು ಅನುದಾನ ನೀಡಲಾಗುತ್ತದೆ. 
* ನ್ಯಾಷನಲ್ ಹೆಲ್ತ್ ಪ್ರೊಟೆಕ್ಷನ್ ಸ್ಕೀಮ್ ಅಡಿಯಲ್ಲಿ ಹತ್ತು ಕೋಟಿ ಪರಿವಾರ ಅಂದರೆ ಹತ್ತಿರತ್ತಿರ ಐವತ್ತು ಕೋಟಿ ಜನರಿಗೆ (ಬಡತನ ಮತ್ತು ಕಡು ಬಡತನದಲ್ಲಿ ಇರುವ ಪರಿವಾರಗಳಿಗೆ ಮಾತ್ರ) 5 ಲಕ್ಷ ರೂಪಾಯಿ ವರೆಗೆ ಆರೋಗ್ಯ ದ ಖರ್ಚು ಭರಿಸಲಿದೆ. ಇದು ಪೂರ್ಣವಾಗಿ ಚಾಲನೆಗೆ ಬಂದರೆ ಜಗತ್ತಿನ ಅತಿ ದೊಡ್ಡ ಸರಕಾರ ನೀಡುತ್ತಿರುವ ಹೆಲ್ತ್ ಕೇರ್ ಎನ್ನುವ ಹೆಗ್ಗಳಿಕೆ ಪಡೆಯಲಿದೆ. 
*ಉತ್ತಮ ವೈದ್ಯಕೀಯ ಶಿಕ್ಷಣ ನೀಡುವ ಸಲುವಾಗಿ 24 ಹೊಸ ಸರಕಾರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯನ್ನ ತೆಗೆಯಲು ಆದೇಶಿಸಲಾಗಿದೆ. 
*18 ಸಾವಿರ ಕಿಲೋಮೀಟರ್ ರೈಲ್ವೆ ಹಳಿಗಳನ್ನ ಮೇಲ್ದರ್ಜೆಗೆ ಏರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. 
* ಕ್ರಿಪ್ಟೋ ಕರೆನ್ಸಿ ಯಿಂದ ಆಗುತ್ತಿರುವ ಅನಾಹುತಗಳನ್ನ ಗಮನದಲ್ಲಿರಿಸಿಕೊಂಡು ಇದನ್ನ ನ್ಯಾಯಬದ್ಧವಲ್ಲ ಎಂದು ತೀರ್ಮಾನಿಸಲಾಗಿದೆ. 
*ಜನರಿಗೆ ಆಧಾರ್ ಸಂಖ್ಯೆ ನೀಡುವಂತೆ ಪ್ರತಿಯೊಂದು ಉದ್ದಿಮೆಗೆ ಸಣ್ಣದಿರಲಿ ಅಥವಾ ದೊಡ್ಡದಿರಲಿ ಒಂದು ಅನನ್ಯ ಸಂಖ್ಯೆಯನ್ನ ನೀಡುವ ಉದ್ದೇಶ ಸರಕಾರದ ಮುಂದಿದೆ. 
*ಒಂದು ಉತ್ತಮ ಗೋಲ್ಡ್ ಪಾಲಿಸಿ ಯನ್ನ ಸರಕಾರ ತರಲು ನಿರ್ಧರಿಸಿದೆ. ಇದರಿಂದ ಜನ ಹೆಚ್ಚಿನ ಕಿರಿಕಿರಿ ಇಲ್ಲದೆ ಗೋಲ್ಡ್ ಅಕೌಂಟ್ ತೆಗೆಯಬಹುದಾಗಿದೆ ಮತ್ತು ಗೋಲ್ಡ್ ಅನ್ನು ಆಸ್ತಿಯ ರೂಪದಲ್ಲಿ ಶೇಖರಿಸಬಹುದಾಗಿದೆ. 
ಮಧ್ಯಮ ವರ್ಗದ ಜನರಿಗೆ ಇಂದಿನ ಮಟ್ಟಿಗೆ ಯಾವುದೇ ತೆರೆನಾದ ಅನುಕೂಲ ಅಥವಾ ಸೌಲಭ್ಯ ಕಾಣುತ್ತಿಲ್ಲ. ಕೇವಲ ನನಗೇನು ಲಾಭ ಎನ್ನುವುದನ್ನ ಬಿಟ್ಟು ದೇಶದ ಹಿತ ದೃಷ್ಟಿಯಿಂದ ನೋಡಿದರೆ ಇದೊಂದು ಉತ್ತಮ ಬಜೆಟ್ ಎನ್ನಬಹುದು. ಭಾರತದಂತಹ ಅತಿ ದೊಡ್ಡ ದೇಶದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಇರುವ ಅಂತರ ಕೂಡ ಬಹು ದೊಡ್ಡದು ಆ ನಿಟ್ಟಿನಲ್ಲಿ ಒಂದಷ್ಟು ಅಂತರ ಕಡಿಮೆ ಮಾಡುವ ಪ್ರಯತ್ನ ಇಲ್ಲಿದೆ. ಹೀಗಾಗಿ ಒಂದು ವರ್ಗದ ಜನ ಅಂದರೆ ಆಗಲೇ ಒಂದು ಮಟ್ಟದಲ್ಲಿ ಜೀವನ ನೆಡೆಸುತ್ತಿರುವರಿಗೆ ಈ ಬಜೆಟ್ ಅತ್ಯಂತ ನಿರಾಶಾದಾಯಕವಾಗಿ ಕಂಡರೆ ಅದು ಕೂಡ ಸುಳ್ಳಲ್ಲ. ಮೊದಲೇ ಹೇಳಿದಂತೆ ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಎಲ್ಲರನ್ನೂ ಖುಷಿಯಾಗಿಸಿಕೊಂಡು ಜೊತೆಯಾಗಿಸಿಕೊಂಡು ನೆಡೆಯುತ್ತೇನೆ ಎನ್ನುವುದು ಕಷ್ಟವೇ ಸರಿ. 
ಬಜೆಟ್ ಮುಗಿದಿದೆ ಇನ್ನೂ ಅವುಗಳ ನಿರ್ವಹಣೆ ಮತ್ತು ಅನುಷ್ಠಾನ ಹೇಗಾಗುತ್ತದೆ ಎನ್ನುವುದನ್ನ ಕಾದು ನೋಡೋಣ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT