ನವದೆಹಲಿ: ದೇಶದ ವಿಮಾನ ನಿಲ್ದಾಣಗಳ ಸಾಮರ್ಥ್ಯವನ್ನು 5 ಪಟ್ಟು ಹೆಚ್ಚಳ ಮಾಡುವ ಕುರಿತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಯೋಜನೆ ರೂಪಿಸಿದ್ದು, ಈ ಬಗ್ಗೆ ಬಜೆಟ್ ಮಂಡನೆ ವೇಳೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಅರುಣ್ ಜೇಟ್ಲಿ, "ಹವಾಯಿ ಚಪ್ಪಲಿ ಧರಿಸುವವರು ಕೂಡ ಹವಾಯಿ ಜಹಾಜ್ (ವಿಮಾನದಲ್ಲಿ) ಹೋಗುವಂತಾಗಿದೆ. ಭಾರತ ಏರ್ಪೋರ್ಟ್ ಪ್ರಾಧಿಕಾರದಡಿಯಲ್ಲಿ ಪ್ರಸ್ತುತ 124 ವಿಮಾನ ನಿಲ್ದಾಣಗಳಿವೆ. ಇವುಗಳ ಸಾಮರ್ಥ್ಯವನ್ನು 5 ಪಟ್ಟು ಹೆಚ್ಚಳ ಮಾಡುವ ಕುರಿತು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂತೆಯೇ ಪ್ರತಿವರ್ಷ 1 ಬಿಲಿಯನ್ ಟ್ರಿಪ್ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಪ್ರಸ್ತುತ ನಾಗರೀಕ ಸೇವೆಯಿಂದ ದೂರವಿರುವ 56 ವಿಮಾನ ನಿಲ್ದಾಣಗಳು ಅಂತೆಯೇ ನಾಗರೀಕ ಸೇವೆಯಿಂದ ದೂರವಿರುವ 31 ಹೆಲಿಪಾಡ್ ಗಳಿವೆ. ಅಂತೆಯೇ ನಾಗರೀಕ ವಿಮಾನಯಾನ ಪ್ರಾಧಿಕಾರದಡಿಯಲ್ಲಿ 124 ವಿಮಾನ ನಿಲ್ದಾಣಗಳಿದ್ದು, ಈ ಎಲ್ಲ ನಿಲ್ದಾಣಗಳ ಸಾಮರ್ಥ್ಯವನ್ನು 5 ಪಟ್ಟು ಹೆಚ್ಚಳ ಮಾಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 14.34 ಲಕ್ಷ ಕೋಟಿ ಹಣವನ್ನು ಮೀಸಲಿರಿಸಿದೆ. ಅಂತೆಯೇ ಈ ವಿಮಾನ ನಿಲ್ದಾಣಗಳಿಂದ ವಾರ್ಷಿಕ 1 ಬಿಲಿಯನ್ ಟ್ರಿಪ್ ಗುರಿ ಹೊಂದಲಾಗಿದೆ ಎಂದು ಹೇಳಿದರು.