ಕರ್ನಾಟಕ ಬಜೆಟ್

ಕರ್ನಾಟಕ ಬಜೆಟ್ 2019: ರಾಜ್ಯದಲ್ಲಿ 4 ಹೊಸ ತಾಲೂಕುಗಳ ಘೋಷಣೆ

Nagaraja AB

ಬೆಂಗಳೂರು: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಂದು ಮಂಡಿಸಿರುವ 2019-20 ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ರಾಜ್ಯದಲ್ಲಿ ನಾಲ್ಕು ಹೊಸ ತಾಲೂಕುಗಳನ್ನು ಘೋಷಿಸಲಾಗಿದೆ.

ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಗರಗಳನ್ನು ಹೊಸ ತಾಲೂಕುಗಳಾಗಿ ಘೋಷಿಸಲಾಗಿದೆ. ಇವುಗಳನ್ನು ತಾಲೂಕುಗಳಾಗಿ ಘೋಷಿಸಬೇಕೆಂಬುದು ಹಲವು ದಿನಗಳ ಬೇಡಿಕೆಯಾಗಿತ್ತು.  

ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇವುಗಳನ್ನು ಹೊಸ ತಾಲೂಕುಗಳನ್ನು ಘೋಷಿಸಲಾಗಿದ್ದು, ಅಲ್ಲಿನ ಸ್ಥಳೀಯರ ಬಹುದಿನ ಬೇಡಿಕೆ ಈಡೇರಿದಂತಾಗಿದೆ.

ರಾಜ್ಯದಲ್ಲಿ ಮೊದಲಿದ್ದ 176 ತಾಲೂಕುಗಳಿಗೆ, ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ  49 ಹೊಸ ತಾಲೂಕುಗಳನ್ನು ಸೇರ್ಪಡೆಗೊಳಿಸಲಾಗಿತ್ತು.
ಪ್ರಸ್ತುತ ಬಜೆಟ್‌ನಲ್ಲಿ ನಾಲ್ಕು ಹೊಸ ತಾಲೂಕುಗಳ ರಚನೆಯಿಂದ ರಾಜ್ಯದ ತಾಲೂಕುಗಳ ಸಂಖ್ಯೆ 229ಕ್ಕೇರಿದೆ.
SCROLL FOR NEXT