ಕರ್ನಾಟಕ ಬಜೆಟ್

ಕರ್ನಾಟಕ ಬಜೆಟ್ 2019: ನೀರಾವರಿ ಯೋಜನೆಗೆ ಬಂಪರ್ ಕೊಡುಗೆ; ಕುಮಾರಣ್ಣ ಕೊಟ್ಟ ಅನುದಾನದ ಮಾಹಿತಿ!

Vishwanath S
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 2019ರ ಆಯವ್ಯಯ ಬಜೆಟ್ ಮಂಡನೆ ಮಾಡುತ್ತಿದ್ದು ರಾಜ್ಯದ ರೈತರ ಅಭಿವೃದ್ಧಿ ಹಿತದೃಷ್ಠಿಯಿಂದ ನೀರಾವರಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. 
* ಜಲಸಂಪನ್ಮೂಲ ಯೋಜನೆಗಳಿಗೆ 17,212 ಕೋಟಿ ರುಪಾಯಿ ಅನುದಾನ. 
* ಇಸ್ರೆಲ್ ಕಿರು ನೀರಾವರಿ ಯೋಜನೆಗೆ 145 ಕೋಟಿ ರು ಅನುದಾನ.
* ಕೆರೂರು, ಇಂಡಿ, ಕೊಪ್ಪಳ, ಕಂಪ್ಲಿ, ಮಸ್ಕಿ ಏತ ನೀರಾವರಿ ಯೋಜನೆ ಜಾರಿ. ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ.
* ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ( ಎಣ್ಣೆ ಹೊಳೆ ಯೋಜನೆ), ಚನ್ನರಾಯಪಟ್ಟಣ, ಹೊಳೆನರಸಿಪುರದಲ್ಲಿ ಹೊಳೆ ತುಂಬಿಸುವ ಕಾರ್ಯಕ್ರಮ.
* 300 ಕೋಟಿ ವೆಚ್ಚದಲ್ಲಿ ಕೆರೂರು ನೀರಾವರಿ ಯೋಜನೆ. ಕೊಪ್ಪಳ ಏತ ನೀರಾವರಿ ಯೋಜನೆಗೆ 200 ಕೋಟಿ. 200 ಕೋಟಿ ವೆಚ್ಚದಲ್ಲಿ ಶಿಕಾರಿಪುರ ಕೆರೆ ತುಂಬಿಸುವ ಯೋಜನೆ. ಕಂಪ್ಲಿ ನೀರಾವರಿ ಯೋಜನೆಗೆ 75 ಕೋಟಿ ರೂಪಾಯಿ. ಉಡುಪಿ ಕೆರೆ ತುಂಬಿಸಲು 40 ಕೋಟಿ ರೂಪಾಯಿ ಅನುದಾನ, 40 ಕೋಟಿ ವೆಚ್ಚದಲ್ಲಿ ಮುಂಡಗೋಡುವಿನಲ್ಲಿ ಕೆರೆಗಳ ಭರ್ತಿ. ಹೇಮಾವತಿ ಎಡದಂತೆ ನಾಲೆ ಯೋಜನೆಗೆ 80 ಕೋಟಿ ರೂಪಾಯಿ. ಒಟ್ಟಾರೆ 1600 ಕೋಟಿ ರೂ. ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ. 
* ಕಾಲುವೆಗಳ ಆಧುನೀಕರಣಕ್ಕೆ 860 ಕೋಟಿ ರೂಪಾಯಿ, ಮಳವಳ್ಳಿ ಅಚ್ಚುಕಟ್ಟು ಪ್ರದೇಶಗಳ ನೀರಾವರಿ ಯೋಜನೆಗೆ 30 ಕೋಟಿ. ಕೆರೆಗಳ ಸಮಗ್ರ ಅಭಿವೃದ್ಧಿಗೆ 449 ಕೋಟಿ ರೂಪಾಯಿ. 
ಕೆರೆಗಳಲ್ಲಿ ಪರಿವೇಷ್ಟಕ ಜಲಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆ:
ಬೆಳ್ಳಂದೂರು ಕೆರೆ, ಅಗರ, ವರ್ತೂರು ಕೆರೆ ಸೇರಿದಂತೆ ರಾಜ್ಯದ 17 ಕಲುಷಿತ ನದಿ ತೀರಗಳಲ್ಲಿ ನಿರಂತರ ಪರಿವೇಷ್ಟಕ ಜಲಗುಣಮಟ್ಟ ಮಾಪನ ಕೇಂದ್ರ ಸ್ಥಾಪನೆಗೆ 9 ಕೋಟಿ ರೂ. ಅನುದಾನವನ್ನು ರಾಜ್ಯ ಬಜೆಟ್ ನಲ್ಲಿ ಸರ್ಕಾರ ಪ್ರಕಟಿಸಿದೆ.
SCROLL FOR NEXT