ಕೇಂದ್ರ ಬಜೆಟ್

ಇಂದು 'ಮಧ್ಯಂತರ ಬಜೆಟ್'; ಮತದಾರರನ್ನು ಸೆಳೆಯಲು ಕೊನೆ ಹಂತದ ಕಸರತ್ತಿನಲ್ಲಿ ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಲೋಕಸಭೆ ಚುನಾವಣೆಗೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಶುಕ್ರವಾರ ಮಂಡಿಸುತ್ತಿರುವ ಮಧ್ಯಂತರ ಬಜೆಟ್ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಮತದಾರರನ್ನು ಸೆಳೆಯಲು ಇದು ಕೊನೆಯ ಅವಕಾಶ ಎನ್ನಬಹುದು.ಮುಂದಿನ ಮೇ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಬಜೆಟ್ ಮಂಡನೆ ವೇದಿಕೆ ಎನ್ನಬಹುದು.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ ರೈಲ್ವೆ ಖಾತೆ ಸಚಿವ ಹಾಗೂ ಮಧ್ಯಂತರ ವಿತ್ತ ಸಚಿವ ಪಿಯೂಷ್ ಗೋಯಲ್ ಮಧ್ಯಂತರ ವಿತ್ತೀಯ ನೀತಿಯನ್ನು ಇಂದು ಮಂಡಿಸಲಿದ್ದಾರೆ.

ಕೆಲ ತಿಂಗಳ ಹಿಂದೆ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೋಲು ಕಂಡಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಮತದಾರ ವಿರೋಧಿ ಬಿಸಿಯನ್ನು ಅನುಭವಿಸಿದ್ದರು. ರೈತರ ಸಾಲಮನ್ನಾ, ಯುವಕರಿಗೆ ಉದ್ಯೋಗ ಸೃಷ್ಟಿ, ಬಡಜನತೆಯ ಉದ್ದಾರಕ್ಕೆ ಹಲವು ಕ್ರಮಗಳನ್ನು ಜಾರಿಗೆ ತಂದು ಕೆಳ ಮತ್ತು ಮಧ್ಯಮ ವರ್ಗದ ಮತದಾರರನ್ನು ಸೆಳೆಯುವ ಅವಶ್ಯಕತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕಿದೆ.

ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಬಡ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳ ಮೇಲೆ ಉಂಟಾಗಿರುವ ತೀವ್ರ ಹೊಡೆತವನ್ನು ನಿವಾರಿಸಲು ಸಣ್ಣ ಉದ್ದಿಮೆದಾರರು ಮತ್ತು ಕೆಳಹಂತದ ತೆರಿಗೆ ಪಾವತಿದಾರರು ಮತ್ತ ರೈತರಿಗೆ ನೆರವು ನೀಡಲು ನಗದು ವರ್ಗಾವಣೆ ಕಾರ್ಯಕ್ರಮವಾಗಿ 700 ಶತಕೋಟಿ (ಡಾಲರ್ 9.8 ಶತಕೋಟಿ) ಹೆಚ್ಚುವರಿ ಹಣ ಖರ್ಚು ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಆರ್ಥಿಕ ನೀತಿಯನ್ನು ಮಧ್ಯಂತರ ಬಜೆಟ್ ನಲ್ಲಿ ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.

ರೈತರ ಸಮಸ್ಯೆಗಳು ಮತ್ತು ತೆರಿಗೆ ದರ ಇಳಿಕೆ, ಇತರ ತೆರಿಗೆ ಪ್ರಯೋಜನಗಳ ಬಗ್ಗೆ ಕೂಡ ಜನರು ನಿರೀಕ್ಷೆ ಹೊಂದಿದ್ದು, ಸಚಿವ ಪೀಯೂಷ್ ಗೋಯಲ್ ಚೊಚ್ಚಲ ಬಜೆಟ್ ಭಾಷಣದಲ್ಲಿ ಪ್ರಸಕ್ತ ವರ್ಷದ ಮಾತ್ರವಲ್ಲದೆ, ಮುಂಬರುವ ಯೋಜನೆಗಳನ್ನು ಕೂಡ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ರೈತರ ಮತ್ತು ಕೃಷಿ ವಲಯದ ಸಮಸ್ಯೆಗಳು, ಮಧ್ಯಮ ವರ್ಗಕ್ಕೆ ತೆರಿಗೆ ಸುಧಾರಣಾ ಕ್ರಮ ಈ ಬಾರಿಯ ಬಜೆಟ್‌ನ ಪ್ರಮುಖ ಅಂಶವಾಗಲಿದೆ. ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಜೆಟ್ ಮಂಡಿಸಿದರೂ, ಮತ್ತೆ ಎನ್‌ಡಿಎ ಸರಕಾರ ಬಂದರೆ ಯೋಜನೆಗಳ ಜಾರಿ ಮತ್ತು ಸಮತೋಲನ ಸಾಧ್ಯವಾಗುವಂತೆ ಕೇಂದ್ರ ಸರಕಾರ ಗಮನ ಹರಿಸಬೇಕಿದೆ.

SCROLL FOR NEXT