ಕೇಂದ್ರ ಬಜೆಟ್

ನಾರಿ ನೀನು ನಾರಾಯಣಿ: ಬಜೆಟ್ ನಲ್ಲಿ ಮಹಿಳೆಯರಿಗೆ ನಿರ್ಮಲಾ ಲೆಕ್ಕ -ಪಕ್ಕಾ!

Shilpa D
ನವದೆಹಲಿ: ಚೊಚ್ಚಲ ಬಜೆಟ್ ಮಂಡಿಸುತ್ತಿರುವ ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರೀಕ್ಷೆಯಂತೆ ಮಹಿಳಾ ಸಬಲೀಕರಣಕ್ಕಾಗಿ ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. 
ಭಾರತದ ಪರಂಪರೆ 'ನಾರಿ ತೂ ನಾರಾಯಣಿ'(ನಾರಿ ನೀನು ನಾರಾಯಣಿ) ಎಂದು ಉಲ್ಲೇಖಿಸುವ ಮೂಲಕ ಸ್ವಾಮಿ ವಿವೇಕಾನಂದರ ಮಾತಿನಂತೆ ಮಹಿಳಾ ಸಬಲೀಕರಣಕ್ಕೆ ಪಣ ತೊಟ್ಟಿದ್ದಾರೆ.
ಮಹಿಳೆಯ ಸ್ಥಿತಿಗತಿ ಬದಲಾಗದೆ ವಿಶ್ವ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಗ್ರಾಮೀಣಾಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗೀದಾರರಾಗಬೇಕು ಎಂದು ಮನವಿ ಮಾಡಿಕೊಂಡಿರುವ ನಿರ್ಮಲಾ ಸೀತಾರಾಮನ್, ಮಹಿಳಾ ಸಬಲೀಕರಣಕ್ಕಾಗಿ ಈ ಹಿಂದೆ ಜಾರಿಗೊಳಿಸಿರುವ ಮುದ್ರಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸೆಲ್ಫ್ ಹೆಲ್ಪ್, ಗ್ರೂಪ್ ಸಪೋರ್ಟ್ನಂತಹ ಯೋಜನೆಗಳು ಮುಂದುವರೆಯಲಿವೆ ಎಂದಿದ್ದಾರೆ. 
ಈ ಹಿಂದಿನ ಯೋಜನೆಗಳೊಂದಿಗೆ ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೂ ಸಾಲ ಸೌಲಭ್ಯ ನೀಡುವುದರ ಜೊತೆಗೆ ಜನ್ ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂ. ಓವರ್ ಡ್ರಾಫ್ಟ್ ಮಾಡಲು ಅವಕಾಶ ನೀಡಲಾಗಿದೆ,  ದೇಶದ ಎಲ್ಲ ಮಹಿಳಾ ಸಂಘಗಳಿಗೆ ಬಡ್ಡಿ ವಿನಾಯಿತಿಯಲ್ಲಿ ಸಾಲ ನೀಡುವುದಾಗಿ ಘೋಷಿಸಿದ್ದಾರೆ.
SCROLL FOR NEXT