ಕೇಂದ್ರ ಬಜೆಟ್

ಬಜೆಟ್: ಇಸ್ರೋಗೆ ಹೊಸ ಅಂಗ ಸಂಸ್ಥೆ ಘೋಷಣೆ; ಕಾರ್ಯನಿರ್ವಹಣೆ ಹೇಗೆ? ಇಸ್ರೋಗೆ ಇದರಿಂದ ಲಾಭವೇನು?: ಇಲ್ಲಿದೆ ಮಾಹಿತಿ

Srinivas Rao BV
ನವದೆಹಲಿ: ಚೊಚ್ಚಲ ಬಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಅಂಗ ಅಂಗಸಂಸ್ಥೆಯನ್ನು ಘೋಷಿಸಿದ್ದಾರೆ. 
ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಇಸ್ರೋ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಣೆ ಮಾಡಲಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಉದ್ದೇಶದತ್ತ ಗಮನ ಹರಿಸಲಿದೆ. 
ಈಗಾಗಲೇ ಬಾಹ್ಯಾಕಾಶ ಎನ್ನುವುದೂ ಒಂದು ಉದ್ಯಮವಾಗಿ ಮಾರ್ಪಾಡಾಗಿದ್ದು, ಜಾಗತಿಕ ಮಟ್ಟದಲ್ಲಿ ಈಗಾಗಲೇ ನೆಲೆಯೂರಿರುವ ಬಾಹ್ಯಾಕಾಶ ಉದ್ಯಮ ಸಂಸ್ಥೆಗಳ ನಡುವೆ ಇಸ್ರೋವನ್ನು ವಾಣಿಜ್ಯೀಕರಣಗೊಳಿಸುವುದಕ್ಕೆ ಎನ್ಎಸ್ಐಎಲ್ ಕಾರ್ಯನಿರ್ವಹಣೆ ಮಾಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 
ಬಾಹ್ಯಾಕಾಶದ ಹಲವು ಉತ್ಪನ್ನಗಳನ್ನು ವಾಣಿಜ್ಯೀಕರಣಗೊಳಿಸುವಲ್ಲಿ ಎನ್ಎಸ್ಐಎಲ್ ಪ್ರಮುಖ ಪಾತ್ರ ವಹಿಸಲಿದ್ದು, ಈ ಪೈಕಿ  ಉಡಾವಣಾ ವಾಹನಗಳು, ತಂತ್ರಜ್ಞಾನದ ವರ್ಗಾವಣೆ, ಬಾಹ್ಯಾಕಾಶ ಉತ್ಪನ್ನಗಳ ಮಾರ್ಕೆಟಿಂಗ್ ಕೂಡ ಸೇರಿರಲಿವೆ ಎಂದು ವಿತ್ತ ಸಚಿವರು ಹೇಳಿದ್ದಾರೆ. 
SCROLL FOR NEXT