ನವದೆಹಲಿ: 2019 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ಕೆಲವು ಕ್ರಮಗಳನ್ನು ಘೋಷಿಸಿದೆ.
ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ತೆರಿಗೆ ವಿನಾಯಿತಿ ಹಾಗೂ ಉತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಬಜೆಟ್ ನಂತರ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ಯೋಜನೆಯನ್ನು ರಾಜ್ಯ ಹೇಗೆ ಸದ್ಭಳಕೆ ಮಾಡಿಕೊಳ್ಳುವ ವಿಷಯವಾಗಿ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
"ಅಪಾರ ಖನಿಜ ಸಂಪತ್ತು, ಪೂರಕ ವಾತಾವರಣ, ಕಚ್ಚಾ ವಸ್ತುಗಳು, ಸೂಕ್ತ ವಾಯುಗುಣ, ವಿಶಾಲ ಮಾರುಕಟ್ಟೆ, ತಂತ್ರಜ್ಞಾನ ಇರುವದರಿಂದ ಕರ್ನಾಟಕವು ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಗೆ ಪೂರಕವಾಗಿದೆ.
ತಕ್ಷಣವೇ ರಾಜ್ಯ ಸರ್ಕಾರ, ಮಾನ್ಯ ಮುಖ್ಯಮಂತ್ರಿಯವರು ಆಸಕ್ತಿ ವಹಿಸಿ ಇದನ್ನು ಗಂಭೀರವಾಗಿ ಪರಿಗಣಿಸಿ, ಬೆಂಗಳೂರು ಮತ್ತು ಹಳೆ ಮೈಸೂರು ಪ್ರಾಂತ್ಯವನ್ನು ವಿದ್ಯುತ್ ವಾಹನಗಳ ಉತ್ಪಾದನಾ ವಲಯ ಮಾಡಲು ಮುಂದೆ ಬರಬೇಕೆಂದು ಕೋರುತ್ತೇನೆ". ಎಂದು ಫೇಸ್ ಬುಕ್ ನಲ್ಲಿ ತೇಜಸ್ವಿ ಸೂರ್ಯ ಬರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos