ನವದೆಹಲಿ: ಶೀಘ್ರದಲ್ಲಿಯೇ 1 ರಿಂದ 20 ರೂಪಾಯಿವರೆಗಿನ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯಲ್ಲಿಂದು ಬಜೆಟ್ ಮಂಡನೆ ವೇಳೆಯಲ್ಲಿ ಈ ವಿಷಯ ತಿಳಿಸಿದ ನಿರ್ಮಲಾ ಸೀತಾರಾಮನ್, 1 ರೂ. 2, 10 ಹಾಗೂ 20 ರೂಪಾಯಿವರೆಗಿನ ಹೊಸ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 7 ರಂದು ಬಿಡುಗಡೆಗೊಳಿಸಿದ್ದಾರೆ. ಇವುಗಳನ್ನು ಸದ್ಯದಲ್ಲಿಯೇ ಸಾರ್ವಜನಿಕರ ಬಳಕೆಗೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಲವು ವೈಶಿಷ್ಠ್ಯತೆಯೊಂದಿಗೆ ಸುಲಭವಾಗಿ ಗುರುತಿಸುವಂತೆ ಈ ನಾಣ್ಯಗಳನ್ನು ರಾಷ್ಟ್ರೀಯ ವಿನ್ಯಾಸ ಸಂಸ್ಥೆ ವಿನ್ಯಾಸಗೊಳಿಸಿದೆ. ಇದಲ್ಲದೇ, ಈ ನಾಣ್ಯಗಳು ಆಗಲ ಹಾಗೂ ತೂಕವನ್ನು ಹೊಂದಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಎಲ್ಲಾ ನಾಣ್ಯಗಳಲ್ಲೂ ಅಶೋಕ ಚಿಹ್ಹೆ ಇರಲಿದೆ. ಇದರ ಕೆಳಗಡೆ ಹಿಂದಿಯಲ್ಲಿ ಸತ್ಯಮೇವ ಜಯತೇ ಎಂಬ ಲಿಪಿ ಇರುತ್ತದೆ. ಎಡಗಡೆ ಹಿಂದಿಯಲ್ಲಿ ಭಾರತ್ ಎಂದು , ಬಲಗಡೆ ಇಂಡಿಯಾ ಎಂದು ಇಂಗ್ಲೀಷ್ ನಲ್ಲಿ ಬರೆದಿರಲಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos