ರಾಜ್ಯ ಬಜೆಟ್

ಮಹದಾಯಿ ಯೋಜನೆಗೆ ಮೀಸಲಿಟ್ಟ ಅನುದಾನ ಸಾಕೇ? ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಸಿಕ್ಕಿದ್ದೇನು? 

Manjula VN

ಬೆಂಗಳೂರು: 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಮಹದಾಯಿ ಯೋಜನೆಗೆ ರೂ.500 ಅನುದಾನ ಮೀಸಲಿಟ್ಟಿದೆ. 

ಉತ್ತರ ಕರ್ನಾಟಕದ ಜನತೆ ಪಾಲಿಗೆ ಮಹತ್ವದ ಯೋಜನೆಯಾಗಿರುವ ಮಹದಾಯಿಗೆ ರಾಜ್ಯ ಸರ್ಕಾರ ರೂ.500 ಕೋಟಿ ಘೋಷಣೆ ಮಾಡಿದೆ. ಈಗಾಗಲೇ ಈ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. 

ಮಹದಾಯಿ ನದಿ ನೀರು ಹಂಚಿಕೆ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ಕೇಂದ್ರ ಸರ್ಕಾರ ಬಹುದಿನಗಳ ನಿರೀಕ್ಷೆಯನ್ನು ಈಡೇರಿಸಿತ್ತು. ಅದರ ಬೆನ್ನಲ್ಲೇ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲು ರೂ.2000 ಕೋಟಿ ಅವಶ್ಯಕತೆ ಇತ್ತು. ಅದರಂತೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅನುದಾನ ಒದಗಿಸಬೇಕೆಂಬ ಕೂಗುಗಳು ಕೇಳಿ ಬಂದಿದ್ದವು. ಇದೀಗ ರಾಜ್ಯ ಸರ್ಕಾರ ರೂ.500 ಕೋಟಿ ಅನುದಾನ ನೀಡಿದೆ. 

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರೂ. 1500 ಕೋಟಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ರೂ. 500 ಕೋಟಿ ಅನುದಾನ ನೀಡಲಾಗಿದೆ. ಇನ್ನು ಬೆಂಗಳೂರು ಸೇರಿದಂತೆ ಬಯಲು ಸೀಮೆಯ ಹಲವು ಜಿಲ್ಲೆಗಳ ಕುಡಿಯುವ  ನೀರಿನ ಉದ್ದೇಶಕ್ಕಾಗಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆಗೆ ಈ ವರ್ಷ ರೂ.1500 ಕೋಟಿಗಳನ್ನು ನೀಡಲಾಗಿದೆ. 2012ರಲ್ಲಿ ರೂ.12,912.36 ಕೋಟಿ ಇದ್ದ ಯೋಜನಾ ವೆಚ್ಚ 2020ರ ಹೊತ್ತಿಗೆ ರೂ. 24,982 ಕೋಟಿಗೆ ಏರಿದೆ. ಈ ಬೃಹತ್ ಮೊತ್ತದ ಯೋಜನೆಗೆ ಈ ವರ್ಷ ನಿಗದಿಯಾಗಿರುವುದು ರೂ.1500 ಕೋಟಿ ಮಾತ್ರ. ಹೀಗಾಗಿ ಯೋಜನೆ ನಿರೀಕ್ಷಿತ ವೇಗದಲ್ಲಿ ನಡೆಯುವುದೇ ಎಂಬ ಅನುಮಾನಗಳು ಮೂಡತೊಡಗಿವೆ. 

SCROLL FOR NEXT