ರಾಜ್ಯ ಬಜೆಟ್

ಸುಸ್ತಿ ಬಡ್ಡಿ ಮನ್ನಾ ಮಾಡಿರುವುದು ಒಳ್ಳೆಯ ಬೆಳವಣಿಗೆ: ಕುರುಬೂರು ಶಾಂತಕುಮಾರ್ 

Srinivasamurthy VN

ಬೆಂಗಳೂರು: ಕೃಷಿ  ಕ್ಷೇತ್ರಕ್ಕೆ 32,259 ಕೋಟಿ ರೂಪಾಯಿಗಳನ್ನು ಮೀಸಲಾಗಿರುವುದು, ಏತ ನೀರಾವರಿ  ಯೋಜನೆಗಳಿಗೆ 5,000 ಕೋಟಿ ಎತ್ತಿನಹೊಳೆ ಯೋಜನೆಗೆ 1500 ಕೋಟಿ, ಮಹಾದಾಯಿ ಯೋಜನೆಗೆ 500  ಕೋಟಿ ರೂಪಾಯಿ ಮೀಸಲಾಗಿರುವುದು ಸ್ವಾಗತಾರ್ಹ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ  ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯಿಸಿದ್ದಾರೆ.

 ಕೃಷಿ ಉಪಕರಣಗಳ ಸಾಲದ ಮೇಲಿನ ಸುಸ್ತಿ  ಬಡ್ಡಿ ಮನ್ನಾ ಮಾಡಿರುವುದು ಒಳ್ಳೆಯ ಬೆಳವಣಿಗೆ, ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟಿರುವ  ಹಣದ ಯೋಜನೆಗಳು ಜಾರಿಯಾದಾಗ ಮಾತ್ರ ಸಾರ್ಥಕವಾಗುತ್ತದೆ ಇಲ್ಲದಿದ್ದರೆ ಹುಸಿ ಬಜೆಟ್  ಆಗುತ್ತದೆ, ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಸರ್ಕಾರ ಖರೀದಿ ಮಾಡುವ ಯೋಜನೆ ಬಗ್ಗೆ ಅಥವಾ ಶಾಸನಬದ್ಧ ಬೆಂಬಲ ಬೆಲೆ ನಿಗದಿ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ,  ಸಾಲಮನ್ನಾ ಗೊಂದಲದ ನಿವಾರಣೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲಇದು ತುಂಬಾ ಬೇಸರದ ಸಂಗತಿ, ರೈತಮಿತ್ರ ಫಾರ್ಮರ್ ಪ್ರೊಡ್ಯೂಸರ್ ಕಂಪನಿ, ಮೈಸೂರಿನ ಸಿಎಫ್‌ಟಿ ಆರ್ ಐ ಸಹಕಾರ  ದೂಂದಿಗೆ ಆರಂಭಿಸಿದ ಚಿಯಾ,ಕಿನೂವ,ಟೆಪ್ಪಬೀಜಗಳನ್ನು ರೈತ ಸಿರಿ ಯೋಜನೆ ಯಲ್ಲಿ  ಸಿರಿಧಾನ್ಯ ಗಳ ಗುಂಪಿಗೆ ಸೇರಿಸಿದ್ದು ಸ್ವಾಗತಾರ್ಹ ಎಂದು  ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

SCROLL FOR NEXT