ಕೇಂದ್ರ ಬಜೆಟ್

ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ಹೇಳುತ್ತದೆ ಆರ್ಥಿಕ ಸಮೀಕ್ಷೆಯ 'ಥಾಲಿನೋಮಿಕ್ಸ್':ಏನಿದು, ಹೇಗೆ? 

Sumana Upadhyaya

ನವದೆಹಲಿ: ಹಣದುಬ್ಬರ ಏರಿಕೆಯಿಂದ ದಿನಬಳಕೆ ವಸ್ತುಗಳ ಬೆಲೆ ದುಬಾರಿಯಾಗಿ ಸಾಮಾನ್ಯ ನಾಗರಿಕನ ಜೇಬಿಗೆ ಕತ್ತರಿ ಹಾಕಿರಬಹುದು. ಆದರೆ ನಿನ್ನೆ ಮಂಡಿಸಲಾದ ಆರ್ಥಿಕ ಸಮೀಕ್ಷೆ ನಿರ್ದಿಷ್ಟ ವ್ಯಾಖ್ಯಾನ ನೀಡುತ್ತದೆ. ಕಾದಂಬರಿಯೊಂದರ ಅಧ್ಯಾಯದಲ್ಲಿ ಬರುವ ಥಾಲಿನೋಮಿಕ್ಸ್ ಎಂಬ ಶಬ್ದವನ್ನು ಎತ್ತಿಕೊಂಡು ಮುಖ್ಯ ಆರ್ಥಿಕ ಸಲಹೆಗಾರ ಕೆ ಸುಬ್ರಹ್ಮಣ್ಯನ್ ಯಾವ ರೀತಿ ಎಂದು ವಿವರಿಸಿದ್ದಾರೆ.


ಥಾಲಿನೋಮಿಕ್ಸ್ ನಿಂದ ಆರ್ಥಿಕ ಸಮೀಕ್ಷೆಯನ್ನು ಸಸ್ಯಹಾರಿಗಳು ಮತ್ತು ಮಾಂಸಾಹಾರಿಗಳೆಂದು ವಿಂಗಡಣೆ ಮಾಡಿ ದಿನನಿತ್ಯದ ಊಟ ತಿಂಡಿಗಳಿಗೆ ಸಾಮಾನ್ಯ ನಾಗರಿಕರಲ್ಲಿ ಎಷ್ಟು ಹಣ ಸರಾಸರಿ ಖರ್ಚಾಗುತ್ತದೆ ಎಂದು ವ್ಯತ್ಯಾಸ ಮಾಡಿ ತೋರಿಸಲಾಗಿದೆ.

 
ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುವವರ ವಾರ್ಷಿಕ ಸರಾಸರಿ ಆದಾಯವನ್ನು ತೆಗೆದುಕೊಂಡು ಸಮೀಕ್ಷೆಯಲ್ಲಿ ಸಸ್ಯಹಾರಿಗಳ ಆಹಾರ ಬಳಕೆ ಮತ್ತು ಖರ್ಚುವೆಚ್ಚ 2006-07ರಿಂದ 2019-20ಕ್ಕೆ ಶೇಕಡಾ 29ರಷ್ಟು ಹೆಚ್ಚಾಗಿದ್ದು ಮಾಂಸಹಾರಿಗಳ ದಿನನಿತ್ಯದ ಆಹಾರ ಖರ್ಚುವೆಚ್ಚ ಶೇಕಡಾ 18ರಷ್ಟು ಮಾತ್ರ ಏರಿಕೆಯಾಗಿದೆ.


ಗ್ರಾಹಕರ ಬೆಲೆ ಸೂಚ್ಯಂಕವನ್ನು ಏಪ್ರಿಲ್ 2006ರಿಂದ ಅಕ್ಟೋಬರ್ 2019ಕ್ಕೆ ಸರಾಸರಿಯಾಗಿ ಹೋಲಿಕೆ ಮಾಡಿ ವಿಶ್ಲೇಷಿಸಿ ಈ ತೀರ್ಮಾನಕ್ಕೆ ಆರ್ಥಿಕ ಸಮೀಕ್ಷೆಯಲ್ಲಿ ಬರಲಾಗಿದೆ. ಸಸ್ಯಹಾರಿಗಳ ದಿನನಿತ್ಯದ ಊಟ ತಿಂಡಿಗಳಲ್ಲಿ ಧಾನ್ಯ, ಬೇಳೆ, ಕಾಳು, ತರಕಾರಿಗಳಿದ್ದರೆ ಮಾಂಸಹಾರಿಗಳ ಥಾಲಿಯಲ್ಲಿ ಧಾನ್ಯ, ತರಕಾರಿ ಮತ್ತು ಮಾಂಸಹಾರವಿರುತ್ತದೆ.


ಬೇಳೆ, ಕಾಳು, ಧಾನ್ಯ, ತರಕಾರಿಗಳ ಬೆಲೆ ಮತ್ತು ದಿನನಿತ್ಯ ಅಡುಗೆ ಮಾಡಲು ಬಳಸುವ ಇಂಧನದ ಬೆಲೆ ನೋಡಿಕೊಂಡು ದಿನ ನಿತ್ಯದ ಊಟ ತಿಂಡಿಗಳ ಬೆಲೆ, ಖರ್ಚುವೆಚ್ಚ ನಿರ್ಧಾರವಾಗುತ್ತದೆ. ಒಂದು ಮನೆಯಲ್ಲಿ ಐದು ಮಂದಿ ಸದಸ್ಯರಿದ್ದರೆ ಅವರು ದಿನಕ್ಕೆ ಎರಡು ಸಸ್ಯಾಹಾರ ಪದಾರ್ಥಗಳನ್ನು ಸೇವಿಸಿದರೆ ಸರಾಸರಿ ವರ್ಷಕ್ಕೆ 10 ಸಾವಿರದ 887 ರೂಪಾಯಿಗಳಾಗುತ್ತದೆ. ಅದೇ ಮಾಂಸಹಾರ ಸೇವಿಸುವ ಮನೆಗಳಲ್ಲಿ ಈ ಮೊತ್ತ ವರ್ಷಕ್ಕೆ 11 ಸಾವಿರದ 787 ರೂಪಾಯಿಗಳಾಗುತ್ತದೆ.

SCROLL FOR NEXT