ಸಂಗ್ರಹ ಚಿತ್ರ 
ರಾಜ್ಯ ಬಜೆಟ್

ರಾಜ್ಯ ಬಜೆಟ್ 2022: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಿಎಂ ಬೊಮ್ಮಾಯಿ ಕೊಟ್ಟಿದ್ದೇಷ್ಟು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಗಾತ್ರ 2,53,165 ಕೋಟಿ ಇದ್ದು, ಕಳೆದ ಬಾರಿಗಿಂತ ಈ ಬಾರಿ 7.7ರಷ್ಟು ಹೆಚ್ಚಳ ಮಾಡಲಾಗಿದೆ. 

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಗಾತ್ರ 2,53,165 ಕೋಟಿ ಇದ್ದು, ಕಳೆದ ಬಾರಿಗಿಂತ ಈ ಬಾರಿ 7.7ರಷ್ಟು ಹೆಚ್ಚಳ ಮಾಡಲಾಗಿದೆ. 

ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಸಮಗ್ರ ಅಭಿವೃದ್ಧಿ ಕಡೆಗೂ ಒಲವು ತೋರಿದ್ದು, ಒಟ್ಟಾರೆಯಾಗಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ ಅನುದಾನ ಮೀಸಲಿಟ್ಟಿದ್ದಾರೆ. ಬೆಂಗಳೂರು ಮೂಲಭೂತ ಸೌಕರ್ಯಕ್ಕೆ 6 ಸಾವಿರ ಕೋಟಿ ವೆಚ್ಚದಲ್ಲಿ ಅಮೃತ್ ನಗರೋತ್ಥಾನದಡಿ ರಸ್ತೆ ಅಭಿವೃದ್ಧಿ, ಗ್ರೇಡ್ ಸಪರೇಟರ್, ಕೆರೆ, ನೀರುಗಾಲುವೆ, ಪಾರ್ಕ್, ತ್ಯಾಜ್ಯ ನಿರ್ವಹಣೆ, ಸ್ಲಂ ಅಭಿವೃದ್ಧಿಗೆ ಮಾನ್ಯತೆ ನೀಡಿದ್ದಾರೆ.

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಅನುದಾನ ಹಂಚಿಕೆ ಈ ರೀತಿ ಇದೆ.
* 2022-23ನೇ ಸಾಲಿನಲ್ಲಿ 33 ಕಿ.ಮೀ ಮೆಟ್ರೋ ಮಾರ್ಗ ಸೇರಿಸಲಾಗುವುದು. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ 58.19 ಕಿ.ಮೀ ಮೆಟ್ರೋ ಕಾಮಗಾರಿ ಆರಂಭವಾಗಿದ್ದು 2025ರೊಳಗೆ ಪೂರ್ಣಗೊಳ್ಳಲಿದೆ.
* ಮೆಟ್ರೋ ಹಂತ್ರ-3 ಯೋಜನೆಯನ್ನು 11,250 ಕೋಟಿ ರೂ ವೆಚ್ಚದಲ್ಲಿ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗುವುದು. ಹೆಬ್ಬಾಳದಿಂದ-ಜೆ‌ಪಿ ನಗರದವರೆಗೆ 32 ಕಿ.ಮೀ ರಿಂಗ್ ರಸ್ತೆ ಮಾರ್ಗ ಹಾಗೂ ಹೊಸಹಳ್ಳಿಯಿಂದ-ಕಡಬಗೆರೆಗೆ 13 ಕಿ.ಮೀ ಮಾರ್ಗ
* 2022-23 ಸಾಲಿನಲ್ಲಿ 37 ಕಿ.ಮೀ ಉದ್ದದ ಸರ್ಜಾಪುರ, ಅಗರ, ಕೋರಮಂಗಲ, ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ 15 ಸಾವಿರ ವೆಚ್ಚದಲ್ಲಿ 36 ಕಿ.ಮೀ ಹೊಸಮಾರ್ಗಕ್ಕೆ ಡಿಪಿಆರ್ ತಯಾರಿಸಲು ಕ್ರಮ.
* ಬನಶಂಕರಿ ಜಂಕ್ಷನ್ ನಲ್ಲಿ 45 ಕೋಟಿ ವೆಚ್ಚದಲ್ಲಿ ಸ್ಕೈವಾಕ್(ಪಾದಾಚಾರಿ-ರಸ್ತೆಬದಿ ವ್ಯಾಪಾರಿಗಳಸ ಸುರಕ್ಷತೆ ಹಾಗೂ ಮೆಟ್ರೋ ನಿಲ್ದಾಣವನ್ನು- ಬಸ್ ನಿಲ್ದಾಣದೊಂದಿಗೆ ಸಂಪರ್ಕಿಸಲು)
* ವೈಟ್ ಫೀಲ್ಡ್, ಕೆ.ಆರ್ ಪುರಂ, ಯಶವಂತಪುರ, ಜ್ಞಾನಭಾರತಿ, ಯಲಹಂಕ ನಿಲ್ದಾಣಗಳಲ್ಲಿ 55 ಕೋಟಿ ರೂ ವೆಚ್ಚದಲ್ಲಿ ರೈಲ್ವೆಯೊಂದಿಗೆ ಮೆಟ್ರೋ ನಿಲ್ದಾಣದ ಸಂಪರ್ಕದ ಕಾಮಗಾರಿ(ಸಬ್ ಅರ್ಬನ್ ರೈಲ್ವೇ)
* 73 ಕಿ.ಮೀ ಉದ್ದದ ಫೆರಿಫೆರಲ್ ರಿಂಗ್ ರಸ್ತೆಗೆ ಭೂಸ್ವಾಧೀನ ವೆಚ್ಚ ಸೇರಿ 21,091 ಕೋಟಿ ರೂ ಈಗಾಗಲೇ ಅನುಮೋದನೆಯಾಗಿದ್ದು, DBFOT ಮಾದರಿಯಲ್ಕಿ ಗುತ್ತಿಗೆದಾರರೇ ಭೂಸ್ವಾಧೀನ ಮತ್ತು ನಿರ್ಮಾಣ ವೆಚ್ಚ ಭರಿಸುವುದರೊಂದಿಗೆ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ
* ಗೊರಗುಂಟೆಪಾಳ್ಯ ಗ್ರೇಡ್ ಸಪರೇಟರ್ ಮೇಲ್ಸೇತುವೆ ನಿರ್ಮಾಣಕ್ಕೆ ಬಿಬಿಎಂಪಿ ಬಿಡಿಎ ಜಂಟಿ ಕಾಮಗಾರಿ
* ಬಿಡಿಎ ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ
* ಸರ್ ಎಂ ವಿಶ್ವೇಶ್ವರಯ್ಯ ಬಡಾವಣೆ ಬನಶಂಕರಿ ೬ ನೇ ಹಂತ ಅಂಜನಾಪುರ ಬಡಾವಣೆ ರಸ್ತೆ, ಚರಂಡಿ ಕಾಮಗಾರಿಗೆ 404 ಕೋಟಿ ವೆಚ್ಚದಲ್ಲಿ ಬಿಡಿಎ ಯಿಂದ ನಿರ್ಮಾಣ ನಂತರ ಪಾಲಿಕೆಗೆ ಹಸ್ತಾಂತರ
* ನಗರದ NGEF ನ 105 ಎಕರೆ ಪ್ರದೇಶದಲ್ಲಿ ಸಿಂಗಾಪುರ್ ಮಾದರಿಯ ಗ್ರೀನ್ ಎಕ್ಸ್ ಪೋ ನಿರ್ಮಾಣ
* ಆರು ಲಕ್ಷ 'ಬಿ' ಖಾತಾಗಳನ್ನು ಎ ವಹಿಗೆ ದಾಖಲಿಸಲು ಭೂಕಂದಾಯ ನಿಯಮದಡಿ ಪರಿಶೀಲಿಸಿ ಕಾನೂನು ಕ್ರಮ
* ಉಪನಗರ ರೈಲ್ವೇ ಯೋಜನೆಯನ್ನು 15,267 ಕೋಟಿ ರೂ ವೆಚ್ಚದಲ್ಕಿ 2026 ರ ವೇಳೆಗೆ ಪೂರ್ಣಗೊಳಿಸುವ ಉದ್ದೇಶ.
* ನಗರಕ್ಕೆ 775 ದಶಲಕ್ಷ ಲೀಟರ್ ಕಾವೇರಿ ನೀರು ತರಲು 5,550 ಕೋಟಿ ರೂ ವೆಚ್ಚದಲ್ಲಿ ಕಾವೇರಿ 5 ನೇ ಹಂತ ಜಾರಿಯಲ್ಲಿದ್ದು, 2024-25 ರೊಳಗೆ ಪೂರ್ಣಗೊಳಿಸಲಾಗುವುದು.
* ಹಳೇಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಉನ್ನತೀಕರಣಕ್ಕೆ 1500 ಕೋಟಿ ರೂ ವೆಚ್ಚ
* ಎತ್ತಿನಹೊಳೆಯಿಂದ 1.7 ಟಿ.ಎಂಸಿ ನೀರು ಬಳಸಿಕೊಳ್ಳಲು 312 ಕೋಟಿಯ ಟಿಜಿ ಹಳ್ಳಿ ಕಾಮಗಾರಿ 22-23 ರಲ್ಲಿ ಮುಕ್ತಾಯ
* ನಗರದ ರಾಜಕಾಲುವೆ ಅಭಿವೃದ್ಧಿಪಡಿಸಿ ನಾಗರಿಕರ ವಿಹಾರ ತಾಣವಾಗಿಸಲು 195 ಕೋಟಿ ರೂ ವೆಚ್ಚದಲ್ಲಿ ಕೋರಮಂಗಲ ರಾಜಕಾಲುವೆಯನ್ನು ಅಭಿವೃದ್ಧಿ ಪಡಿಸಲಾಗ್ತಿದೆ
* ನಗರದಲ್ಕಿ ಪ್ರವಾಹ ಪರಿಸ್ಥಿತಿ ತಡೆಯಲು ರಾಜಕಾಲುವೆ ಅಭಿವೃದ್ಧಿಗೆ 1,500 ಕೋಟಿ ರೂ ಮೊತ್ತದಲ್ಲಿ ಯೋಜನೆ
* ನಗರದ 4 ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
* 20 ಶಾಲೆಗಳನ್ನು 'ಬೆಂಗಳೂರು ಪಬ್ಲಿಕ್ ಶಾಲೆ ಅಭಿವೃದ್ಧಿಪಡಿಸಲು 89 ಕೋಟಿ ಮೀಸಲು'
* ಮಡಿವಾಳ ಕೆರೆ- ಎಲೆಮಲ್ಲಪ್ಪಶೆಟ್ಟಿ ಕೆರೆ ಅಭಿವೃದ್ಧಿಗೆ ಪಾಲಿಕೆಯಿಂದ ರೂಪುರೇಷೆ ಸಿದ್ಧತೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT