ರಾಜ್ಯ ಬಜೆಟ್

ಬಜೆಟ್ ನಲ್ಲಿ ಮಹಿಳಾ ಪರ ಯೋಜನೆಗಳಿಗೆ ಸಿಂಹಪಾಲು: ಮಕ್ಕಳ ಯೋಜನೆಗಳಿಗಿಲ್ಲ ಹೆಚ್ಚಿನ ಪಾಲು!

Shilpa D

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದ ಬಹುಪಾಲು ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ಇಲಾಖೆ ಕಸಿದುಕೊಂಡಿದೆ.

ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2,000 ರೂ ಆರ್ಥಿಕ ನೆರವು ಮತ್ತು ಶಕ್ತಿಯೋಜನೆಯಡಿ- ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆಗಾಗಿ ಹೆಚ್ಚಿನ ಹಣ ಮೀಸಲಿಡಬೇಕಾಗಿದೆ ಹೀಗಾಗಿ ಪ್ರಮುಖ ಸಮಸ್ಯೆಗಳನ್ನು ಬದಿಗೊತ್ತಲಾಗುತ್ತಿದೆ ಎಂದು ತಜ್ಞರು ಹತಾಶಗೊಂಡಿದ್ದಾರೆ.

ಚೈಲ್ಡ್ ರೈಟ್ಸ್ ಟ್ರಸ್ಟ್ ನ ನಿರ್ದೇಶಕ ನಾಗಸಿಂಹ ಜಿ ರಾವ್ ಮಾತನಾಡಿ, ‘ಈ ಹಿಂದೆ ಮಕ್ಕಳ ರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮಗಳ ಬಗ್ಗೆ ನಾವು ಒತ್ತಾಯಿಸಿದ್ದೆವು, ಆದರೆ ಬಜೆಟ್ ನಲ್ಲಿ ಯಾವುದನ್ನೂ ಘೋಷಿಸಲಿಲ್ಲ. ಮಕ್ಕಳಿಗೆ POCSO ಜಾಗೃತಿ ಅಥವಾ ಶಿಕ್ಷಕರಿಗೆ ಯಾವುದೇ ತರಬೇತಿಯ ಬಗ್ಗೆ ಉಲ್ಲೇಖವಿಲ್ಲ. ಪ್ರಸ್ತುತ ರಚನೆಯಲ್ಲಿ ತಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸಿರುವುದರಿಂದ ಮಕ್ಕಳು ಹೊಸ ಇಲಾಖೆಯನ್ನು ಪಡೆಯಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

2023-2024ರಲ್ಲಿ ಮಹಿಳಾ ಯೋಜನೆಗಳಿಗೆ 70,427 ಕೋಟಿ ಮತ್ತು ಮಕ್ಕಳ ಯೋಜನೆಗಳಿಗೆ 51,229 ಕೋಟಿ ಅನುದಾನ ನೀಡಲಾಗಿದೆ. ಆದಾಗ್ಯೂ, ಮಹಿಳಾ ಯೋಜನೆಗಳಿಗೆ ಸುಮಾರು ಅರ್ಧದಷ್ಟು ಹಂಚಿಕೆಯು ಹೋಗುತ್ತದೆ, ಗೃಹ ಲಕ್ಷ್ಮಿಗೆ 30,000 ಕೋಟಿ ಮತ್ತು ಶಕ್ತಿಗೆ 4,000 ಕೋಟಿ ರೂ. ಹಣದ ಅವಶ್ಯಕತೆಯಿದೆ.

ಲೈಂಗಿಕ ಶಿಕ್ಷಣದಂತಹ ಕೆಲವು ಅಗತ್ಯಗಳನ್ನು ಸರ್ಕಾರವು ನಿರ್ಲಕ್ಷಿಸುತ್ತದೆ, ಆದರೆ ಶಾಲೆಗಳು, ಹಾಸ್ಟೆಲ್‌ಗಳು ಮತ್ತು ವಸತಿ ಶಾಲೆಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಮುಟ್ಟಿನ ಶಿಕ್ಷಣ, ಸ್ಯಾನಿಟರಿ ನ್ಯಾಪ್ಕಿನ್‌ಗಳ ಗುಣಮಟ್ಟದ ಬಗ್ಗೆ ಗಮನಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ವಾಸುದೇವ್ ಶರ್ಮಾ ಹೇಳಿದರು.

ಮಹಿಳೆಯರಿಗಾಗಿ ಇರುವ ಕೆಲವು ವಾಣಿಜ್ಯ ಯೋಜನೆಗಳಲ್ಲಿ ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ ಶೇಕಡಾ 4 ರಷ್ಟು ಸಬ್ಸಿಡಿ ಸಾಲಗಳು, ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಮತ್ತು ಸಾಲದ ಮಿತಿಯನ್ನು 2 ಕೋಟಿಯಿಂದ 5 ಕೋಟಿಗೆ ಹೆಚ್ಚಿಸಲಾಗಿದೆ.

ಆಸಿಡ್ ದಾಳಿಯಿಂದ ಬದುಕುಳಿದವರನ್ನು ಬೆಂಬಲಿಸಲು 2 ಕೋಟಿ ಹಣವನ್ನು ಮೀಸಲಿಡಲಾಗಿದೆ. ಕ್ರೀಡೆಗಳಲ್ಲಿ ವಿಶೇಷ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳು ಮತ್ತು ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ವಾರ್ಷಿಕವಾಗಿ 10 ಕೋಟಿ ಮೀಸಲಿಡಲಾಗಿದೆ. ಐದು ಟ್ರಾಫಿಕ್ ಮತ್ತು ಆರು ಮಹಿಳಾ ಪೊಲೀಸ್ ಠಾಣೆಗಳನ್ನು ತೆರೆಯಲಾಗುವುದು, ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು 2,454 ಹೊಸ ಪೋಸ್ಟ್‌ಗಳನ್ನು ರಚಿಸಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಯಾವುದೇ ಘೋಷಣೆ ಮಾಡಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಬಜೆಟ್‌ನ ಅವಲೋಕನವು ಸಕಾರಾತ್ಮಕವಾಗಿ ಕಾಣುತ್ತದೆ, ಆದಾಗ್ಯೂ, ಯೋಜನೆಗಳಿಗೆ ನಿಖರವಾದ ಹಂಚಿಕೆಯ ಬಗ್ಗೆ ನಮಗೆ ಖಚಿತ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

SCROLL FOR NEXT