ವಾಣಿಜ್ಯ

ಎಲ್ಲಿ ಹೋದರು ಬಿಡಿ ವ್ಯಾಪಾರಿಗಳು?

ಕಳೆದ ಅಕ್ಟೋಬರ್‌ನಲ್ಲಿ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸಂವೇದಿ ಸೂಚ್ಯಂಕ 21,000 ದ ಗೆರೆಯನ್ನು ದಾಟಿ ವಿಜೃಂಭಿಸಿದಾಗಲೇ ವೈಯಕ್ತಿಕ ಹೂಡಿಕೆದಾರರು, ಪೇಟೆ ಏರುಗತಿಯಲ್ಲಿ ಸಾಗಿದ್ದರೂ, ಪೇಟೆಯಿಂದ ನಿರ್ಗಮಿಸಿದ್ದರು. ಆ ಬಿಡಿ ವ್ಯಾಪಾರಿಗಳು ಎಲ್ಲಿಗೆ ಹೋದರೋ ಗೊತ್ತಿಲ್ಲ.
ಅಕ್ಟೋಬರ್‌ನಲ್ಲೇ ಮ್ಯೂಚುಯಲ್ ಫಂಡ್‌ಗಳಿಂದ ಸುಮಾರು ಐದು ಲಕ್ಷ ಖಾತೆಗಳು ಬಂದ್ ಆದವು. ಅದರಲ್ಲಿ ಬಹುಹೆಚ್ಚಿನ ಸಂಖ್ಯೆ ಎಂದರೆ, ಈಕ್ವಿಟಿ (ಷೇರು) ಖಾತೆಗಳೇ. ಇದರಿಂದ ಒಂದೇ ತಿಂಗಳಲ್ಲಿ ಮ್ಯೂಚುಯಲ್ ಫಂಡ್‌ಗಳಿಂದ 3540 ಕೋಟಿ ರುಪಾಯಿಗಳ ಬಂಡವಾಳ ಬೇರೆ ಕಡೆಗೆ ಹೋದಂತಾಗಿದೆ. ಈ ಒತ್ತಡವನ್ನು ನಿಭಾಯಿಸಲು ಫಂಡ್ ಮ್ಯಾನೇಜರ್‌ಗಳು ಸುಮಾರು 4000 ಕೋಟಿ ರುಪಾಯಿಗಳ ಮೌಲ್ಯದ ಷೇರುಗಳನ್ನು ಮಾರಬೇಕಾಗಿ ಬಂದಿತ್ತು. ಈಗಲೂ ಮ್ಯೂಚುಯಲ್ ಫಂಡ್‌ಗಳಲ್ಲಿ ಸುಮಾರು 73 ಲಕ್ಷ ಕೋಟಿ ರುಪಾಯಿಗಳ ಈಕ್ವಿಟಿ ಸಂಗ್ರಹವಿದ್ದರೂ ಅದರಿಂದ ಯಾರಿಗೂ ಪ್ರಯೋಜನವಾದಂತಿಲ್ಲ.
ಸಾಮಾನ್ಯ ಜನರು, ನಿಗದಿಯಾದ ಅವಧಿಯಲ್ಲಿ ಹಣ ಕಟ್ಟುತ್ತಿದ್ದ ಎಸ್.ಐ.ಪಿ. ಯೋಜನೆಗಳಿಂದಲೂ ಹೊರಗೆ ಹೋಗುತ್ತಿದ್ದಾರೆ. ಇದೇನೂ ಒಳ್ಳೆಯ ವಿಚಾರವಲ್ಲ. ಈಗಲೂ ಅನೇಕ ಮ್ಯೂಚುಯಲ್ ಫಂಡ್‌ಗಳು ತಮ್ಮ ಗ್ರಾಹಕರಿಗೆ ಲಾಭ ಗಳಿಸಿಕೊಡುತ್ತಿವೆ. ಅದನ್ನು ಹುಡುಕ ಬೇಕಷ್ಟೇ.
ಇನ್‌ಪ್ಲೇಷನ್ ಏರಿಳಿತಕ್ಕೆ ಜೋಡಣೆಯಾದ ಹೊಸ ಹತ್ತು ವರ್ಷಗಳ ಬಾಂಡ್ ಈಗ ಪೇಟೆಯಲ್ಲಿದೆ. ಈ ಬಾಂಡ್‌ಗಳು ಪೇಟೆ ಪ್ರಪಂಚದಲ್ಲಿ ಭದ್ರತೆಯನ್ನು ಮೂಡಿಸಬಹುದೇನೋ.

ಸರ್ವಿಸ್ - ಗೂಡ್ಸ್ ಟ್ಯಾಕ್ಸ್
ಇಡೀ ದೇಶವನ್ನು ಒಂದೇ ಮಾರಾಟ ಜಾಲದ ಅಡಿಯಲ್ಲಿ ತರಬೇಕೆನ್ನುವ ಉದ್ದೇಶದ ಈಡೇರಿಕೆಗೆ ಅಗತ್ಯವಾಗಿ ಬೇಕಾಗಿರುವುದು, ದೇಶದಲ್ಲಿ ವಸ್ತುಗಳು ಹಾಗೂ ಸೇವಾ ಸೌಲಭ್ಯಗಳ ವಿತರಣೆಯಲ್ಲಿ ನಿರತರಾದ ವ್ಯಾಪಾರಿಗಳ ಪಟ್ಟಿ ಹಾಗೂ ಅವರ ವ್ಯವಹಾರದ ಮೌಲ್ಯದ ವಿವರಗಳು.
ಮೌಲ್ಯ ವರ್ಧಿತ ತೆರಿಗೆ (ವ್ಯಾಟ್), ವಸ್ತು - ಸೇವೆ ತೆರಿಗೆ (ಜಿಎಸ್‌ಟಿ) ಮಾಹಿತಿಯ ಸಮಗ್ರ ಸ್ವರೂಪದ ವಿವರಗಳೂ ಬೇಕು. ಒಂದು ಅಂದಾಜಿನಂತೆ ದೇಶದಲ್ಲಿ ಸುಮಾರು ಆರೂವರೆ ಕೋಟಿ ವ್ಯಾಪಾರಿಗಳಿದ್ದಾರೆ. ಅವರೆಲ್ಲರ ವಿವರಗಳನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಿಲ್ಲ. ವ್ಯಾಟ್ ತೆರಿಗೆಯ ವಲಯದಲ್ಲಿ 3 ಕೋಟಿ ವ್ಯಾಪಾರಿಗಳಿದ್ದಾರೆ. ಈ ವರ್ಗದ ವ್ಯಾಪಾರಿಗಳಲ್ಲಿ ಸುಮಾರು ಅರ್ಧ ಭಾಗದಷ್ಟು ವ್ಯಾಪಾರಿಗಳಿಗೆ ಶಾಶ್ವತ ಖಾತೆ ಸಂಖ್ಯೆಯೇ (ಪ್ಯಾನ್) ಇಲ್ಲ. ಅವರು ಕಾರ್ಡ್‌ಗಳನ್ನೇ ಮಾಡಿಸಿಲ್ಲ. ಈ ಸ್ಥಿತಿಯಲ್ಲಿ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರುವುದಾದರೂ ಹೇಗೆ?

ಕೊನೆ ಮಾತು: ದುವ್ವೂರಿ ಸುಬ್ಬರಾಯರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗ, ಅವರಿಗೂ, ವಿತ್ತಮಂತ್ರಿ ಪಿ. ಚಿದಂಬರಮ್ ಅವರಿಗೂ ಬಗೆಹರಿಯದೇ ಇದ್ದ ಜಗಳ ಎಂದರೆ, ಬಡ್ಡಿ ದರವನ್ನು ಹೆಚ್ಚಿಸದೇ ಇನ್‌ಫ್ಲೇಷನ್ ನಿಯಂತ್ರಣ ಸಾಧ್ಯವಿಲ್ಲ ಎನ್ನುವ ವಿಚಾರದಲ್ಲಿದ್ದ ಭಿನ್ನಾಭಿಪ್ರಾಯ. ಬಡ್ಡಿ ದರ ಇಳಿದರೆ ಮಾತ್ರ ಅಭಿವೃದ್ಧಿ ಸಾಧ್ಯವೆನ್ನುವ ನಂಬಿಕೆ. ಸುಬ್ಬರಾಯರ ಜಾಗಕ್ಕೆ ರಘುರಾಮನ್ ರಾಜನ್ ಅವರನ್ನು ಕರೆದು ತಂದವರೇ ಚಿದಂಬರಮ್. ರಾಜನ್ ಅವರೂ ತಮ್ಮ ಎರಡು ತ್ರೈಮಾಸಿಕ ಅವಧಿಯ ಪ್ರಕಟಣೆಗಳಲ್ಲೂ ಬಡ್ಡಿ ದರ ಇಳಿಸಿಲ್ಲ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!