ಆರ್ಥಿಕ ಪ್ರಗತಿಗೆ ಸಂಬಂಧಿಸಿ ಹೊಸ ವರುಷವು ಹೊಸ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಸರ್ಕಾರಿ ಬಾಂಡ್‌ಗಳ ಬೇಡಿಕೆ, ಪೂರೈಕೆಯಲ್ಲಾಗುತ್ತಿರುವ ಬೆಳವಣಿಗೆಗಳು, ಓಎಂಓ (ಓಪನ್ ಮಾರ್ಕೆಟ್ ಆಪರೇಷನ್)ಗೆ ಸಂಬಂಧಿಸಿ ಧನಾತ್ಮಕ ಮಾರುಕಟ್ಟೆ ಮನೋಭಾವ, ಪ್ರಥಮ ತ್ರೈಮಾಸಿಕದಲ್ಲಿ ಸಾಲದ ಮೇಲಿನ ಬಡ್ಡಿ ದರ ಕಡಿತ... ಇವೆಲ್ಲವೂ 2013ಕ್ಕೆ ಹೊಸ ಸಂತಸದ ಆರಂಭವನ್ನು ನೀಡಲಿದೆ ಎಂಬ ಭಾವನೆ ಉದ್ದಿಮೆ ವಲಯದಲ್ಲಿದೆ.
ಬಾಂಡ್‌ಗಳ ಬೇಡಿಕೆ ಹೆಚ್ಚಳ
2012ರ ಕೊನೆಯ ಕೆಲವು ತಿಂಗಳುಗಳಲ್ಲಿ ದೊಡ್ಡ ಗಾತ್ರದ ಉದ್ದಿಮೆಗಳಲ್ಲಿ ಅಲ್ಪ ಮಟ್ಟಿನ ಸ್ಥಿರತೆ ಕಂಡುಬಂದಿತ್ತು. ನಿಶ್ಚಿತ ಠೇವಣಿ ಮಾರುಕಟ್ಟೆಯ ಬಂಡವಾಳ ಹರಿವೂ ಹೆಚ್ಚಾಯಿತು. ಅದೇ ರೀತಿ, ಮೊದಲಾರ್ಧದಲ್ಲಿ ಕಾರ್ಪೊರೇಟ್ ಬಾಂಡ್‌ಗಳೂ ಉತ್ತಮ ಹಂತ ತಲುಪಿದ್ದವು. ಅಲ್ಪಾವಧಿ ಬಾಂಡ್ ಫಂಡ್‌ಗಳು ಹಾಗೂ ಆದಾಯ/ಅಭಿವೃದ್ಧಿ ಬಾಂಡ್ ಫಂಡ್‌ಗಳತ್ತ ಅನೇಕರು ಆಕರ್ಷಿತರಾಗಿದ್ದರು. ಇದರಿಂದಾಗಿ ಈ ಎರಡಕ್ಕೂ ಅತಿ ಹೆಚ್ಚು ಬಂಡವಾಳ ಹರಿದುಬಂತು.
ದರ ಕಡಿತದ ನಿರೀಕ್ಷೆಯಲ್ಲಿ
ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಒಟ್ಟಾರೆಯಾಗಿ ಹೇಳುವುದಾದರೆ ಲಾಂಗ್ ಬಾಂಡ್ ಹಾಗೂ ಫ್ಲೆಕ್ಸಿ ಬಾಂಡ್ ಫಂಡ್‌ಗಳು ಉತ್ತಮ ಆದಾಯವನ್ನು ಗಳಿಸುತ್ತಿರುವುದರಿಂದ ನಿಶ್ಚಿತ ಆದಾಯ ಫಂಡ್‌ಗಳಿಗೆ 2013 ಅತ್ಯುತ್ತಮ ವರ್ಷವಾಗಲಿ ಎಂಬುವುದೇ ನಮ್ಮ ಹಾರೈಕೆ. <
(ಲೇಖಕರು ಎಲ್ ಆ್ಯಂಡ್ ಟಿ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್‌ನ ಫಿಕ್ಸ್‌ಡ್ ಇನ್‌ಕಂ ಮುಖ್ಯಸ್ಥರು)
-ಶ್ರೀರಾಮ್ ರಾಮನಾಥನ್