ವಾಣಿಜ್ಯ

ಮ್ಯೂಚುವಲ್ ಫಂಡ್

ಕಣ್ಣುಮಚ್ಚಿ ಖರೀದಿ
ಕೆಲವರು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೊದಲು ಯೋಚಿಸುವುದೇ ಇಲ್ಲ. ಸ್ಟಾರ್ ಫಂಡ್‌ಗಳಲ್ಲಷ್ಟೇ ಹೂಡಿಕೆ ಮಾಡುತ್ತಾರೆ. ಇದು ಪ್ರತಿಯೊಬ್ಬರೂ ಮಾಡುವ ಮೊದಲ ಮತ್ತು ಸಾಮಾನ್ಯ ತಪ್ಪು. ಫೈವ್‌ಸ್ಟಾರ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೊದಲು ಅದು ಮಾರುಕಟ್ಟೆ ಏರಿಳಿತಗಳ ಸಂದರ್ಭದಲ್ಲಿ ಯಾವ ರೀತಿ ಪ್ರತಿಕ್ರಿಯಿಸಿದೆ ಎನ್ನುವ ಕುರಿತು ಮಾಹಿತಿ ಕಲೆಹಾಕುವುದು ಅಗತ್ಯ. ಅದರ ಹೂಡಿಕೆ ವಿಧಾನ ಹಾಗೂ ಅದರ ರಿಸ್ಕ್ ಪ್ರೊಫೈಲ್ ನಿಮ್ಮ ಪೋರ್ಟ್‌ಫೋಲಿಯೋಗೆ ಸರಿಹೊಂದುವಂತಿದೆಯೇ ಎನ್ನುವುದನ್ನು ಪರಿಶೀಲಿಸಬೇಕು.

ಫಂಡ್ ಮ್ಯಾನೇಜರ್
ಕೆಲವು ಪ್ರಕರಣಗಳಲ್ಲಿ  ಫಂಡ್ ಅತ್ಯುತ್ತಮ ಸಾಧನೆ ತೋರಲು ಫಂಡ್ ಮ್ಯಾನೇಜರ್ ಮುಖ್ಯ ಕಾರಣನಾಗುತ್ತಾನೆ. ಮುಂದೆ ಆ ಫಂಡ್ ಜತೆಗೆ ಆತ ಇಲ್ಲದೇ ಹೋದಾಗ ಸ್ಟಾರ್ ರೇಟಿಂಗ್ ಫಂಡ್‌ಗಳಾಗಿದ್ದರೂ ಹೂಡಿಕೆದಾರರು ಅದರಿಂದ ದೂರ ಸರಿಯಬಹುದು. ಆದರೆ, ವಿವಿಧ ಫಂಡ್ ಹೌಸ್‌ಗಳು ಪ್ರತ್ಯೇಕ ಹೂಡಿಕೆ ಸಂಸ್ಕೃತಿಯನ್ನು ಹೊಂದಿವೆ ಎನ್ನುವುದನ್ನು ನಾವು ಮರೆಯಬಾರದು. ಕೆಲವು ಸಂಸ್ಥೆಗಳು ಸಾಂಸ್ಥಿಕ ಪ್ರಕ್ರಿಯನ್ನು ಅನುಸರಿಸಬಹುದು ಅಥವಾ ತಂಡಗಳು ಒಟ್ಟಾರೆ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇಂಥ ಪರಿಸ್ಥಿತಿಯಲ್ಲಿ ಫಂಡ್ ಮ್ಯಾನೇಜರ್ ಅನುಪಸ್ಥಿತಿ ಆ ಫಂಡ್‌ನ ಸಾಧನೆ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದರೆ, ಹಲವು ಪ್ರಕರಣಗಳಲ್ಲಿ ಸ್ಟಾರ್ ಫಂಡ್ ಮ್ಯಾನೇಜರ್ ಏಕಾಂಗಿಯಾಗಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಆಗ ಅವನ ಅನುಪಸ್ಥಿತಿಯಲ್ಲಿ ಫಂಡ್‌ನ ಹಿಂದಿನ ಸಾಧನೆಗಳು ಅಪ್ರಸ್ತುತ ಆಗುತ್ತವೆ.

ಸಮಾನವಾಗಿ ನೋಡುವುದು
ಫೈವ್ ಸ್ಟಾರ್ ಲಾರ್ಜ್ ಕ್ಯಾಪ್ ಫಂಡ್‌ಗೂ ಫೈವ್‌ಸ್ಟಾರ್ ಮಿಡ್ ಕ್ಯಾಪ್ ಫಂಡ್‌ಗೂ ಸಾಕಷ್ಟು ವ್ಯತ್ಯಾಸ ಇದೆ ಎಂಬುದು ಅನೇಕ ಹೂಡಿಕೆದಾರರಿಗೆ ಗೊತ್ತು. ಆದರೆ, ಒಂದೇ ಗುಂಪಿನಲ್ಲಿರುವ ಅಥವಾ ಒಂದೇ ದರ್ಜೆಯ ಮತ್ತು ಒಂದೇ ರೇಟಿಂಗ್‌ನ ಫಂಡ್‌ಗಳು ಸಮಾನವಲ್ಲ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಗುಂಪೊಂದರಲ್ಲಿ ಫಂಡ್ 3 ವರ್ಷ ಪೂರ್ಣಗೊಳಿಸಿದಾಗ ಅದರ ಸಾಧನೆ ಗಮನಿಸಿ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಆದರೆ, ಅದು 5 ವರ್ಷ ಪೂರ್ಣಗೊಳಿಸಿದ ಕೂಡಲೇ ಅದರ ಒಟ್ಟಾರೆ ರೇಟಿಂಗ್ ಮೂರು ವರ್ಷ ಮತ್ತು ಐದು ವರ್ಷದ ಸಾಧನೆಯೊಂದಿಗೆ ಮಿಳಿತವಾಗುತ್ತದೆ. ಇಂಥ ಸಂದರ್ಭದಲ್ಲಿ ಅದರ ದೀರ್ಘಾವಧಿ ಸಾಧನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಫಂಡ್ 10 ವರ್ಷ ಪೂರ್ಣಗೊಳಿಸಿದಾಗಲೂ ಇದೇ ರೀತಿಯ ಪ್ರಕ್ರಿಯೆ ಅನುಸರಿಸಲಾಗುತ್ತದೆ. ಆಗ 3 ವರ್ಷದ ಸಾಧನೆಗೆ ಫೈವ್‌ಸ್ಟಾರ್ ಪಡೆದಿರುವ ಫಂಡ್‌ಗೂ 10 ವರ್ಷಕ್ಕಿಂತಲೂ ಹೆಚ್ಚಿನ ಕಾಲಾವಧಿಯ ಫೈವ್‌ಸ್ಟಾರ್ ಫಂಡ್‌ಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ದೀರ್ಘಾವಧಿಯಲ್ಲಿ 10 ವರ್ಷ ಪೂರೈಸಿದ ಫೈವ್‌ಸ್ಟಾರ್ ಫಂಡ್ ತನ್ನ ಸಾಮರ್ಥ್ಯವನ್ನು ಸಮರ್ಥವಾಗಿ ಪ್ರದರ್ಶಿಸಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ಪದಕ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!