ವಾಣಿಜ್ಯ

ಕೆಂಪಲ್ಲ ಬಿಳಿಹಾಸು!

ಗುಟ್ಕಾ ನಿಷೇಧ ಚಿಂತೆ ಬಿಟ್ಟುಬಿಡಿ, ಅಡಕೆಯನ್ನು ಪಾನ್‌ಗೆ ಬಳಸುವ ಶಾಶ್ವತ ಚಿಂತನೆ ರೂಪಿಸಿದೆ. ಇದು ಭವಿಷ್ಯದಲ್ಲಿ ಅಡಕೆ...

ಗುಟ್ಕಾ ನಿಷೇಧ ಚಿಂತೆ ಬಿಟ್ಟುಬಿಡಿ, ಅಡಕೆಯನ್ನು ಪಾನ್‌ಗೆ ಬಳಸುವ ಶಾಶ್ವತ ಚಿಂತನೆ ರೂಪಿಸಿದೆ. ಇದು ಭವಿಷ್ಯದಲ್ಲಿ ಅಡಕೆ ಬೆಳೆಗಾರರಿಗೆ ಬೆಲೆ ಕುಸಿತದ ಭೀತಿಯನ್ನು ದೂರ ಮಾಡುವ ವಿಶ್ವಾಸ ಹೊಂದಿದೆ.
ಗುಟ್ಕಾ ನಿಷೇಧಕ್ಕೆ ಪರ್ಯಾಯವಾಗಿ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ, ತನ್ನದೇ ಬ್ರಾಂಡ್‌ನಲ್ಲಿ ಗುಜರಾತ್‌ಗೆ ಪೂರೈಸುತ್ತಿದ್ದ ಅಡಕೆಯ ವಿವಿಧ ಪ್ಯಾಕೆಟ್‌ಗಳನ್ನು ಇಡೀ ಉತ್ತರ ಭಾರತಕ್ಕೆ ವಿಸ್ತರಿಸುತ್ತಿದೆ.
ಇದರಿಂದ ಗುಟ್ಕಾ ನಿಷೇಧಿಸಿದರೂ ಬಿಳಿ ಅಡಕೆ ಅಥವಾ ಕೆಂಪಡಕೆ ಬೆಳೆಗಾರರಿಗೆ ಏನೂ ತೊಂದರೆಯಾಗದು. ಭವಿಷ್ಯದಲ್ಲಿ ಅಡಕೆ ಬೆಳೆಗಾರರು ಮಾರುಕಟ್ಟೆ ಧಾರಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಗುಜರಾತ್‌ನ ಅಹಮದಾಬಾದ್‌ಗೆ ಏಳು ತಿಂಗಳಿಂದ 'ಕ್ಯಾಂಪ್ಕೋ ಬ್ರಾಂಡ್‌' ಹೆಸರಿನಲ್ಲಿ ವಿವಿಧ ಪ್ಯಾಕ್‌ಗಳಲ್ಲಿ ಗುಣಮಟ್ಟದ ಅಡಕೆ ಪೂರೈಕೆಯಾಗುತ್ತಿದೆ. ಇದನ್ನೇ ಉತ್ತರ ಭಾರತದ ಎಲ್ಲ ರಾಜ್ಯಕ್ಕೆ ವಿಸ್ತರಿಸಿ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ.

ಪಾನ್‌ವಾಲಾಗಳಿಗೆ ಪೂರೈಕೆ
ಪ್ರಸಕ್ತ ಕ್ಯಾಂಪ್ಕೋ ಅಡಕೆ ಪ್ಯಾಕೆಟ್ ಪೂರೈಕೆಯಾಗುತ್ತಿರುವುದು ಅಹಮದಾಬಾದ್‌ನ ಕೇಂದ್ರಕ್ಕೆ ಮಾತ್ರ. ಪಾನ್‌ವಾಲಾಗಳಿಗೆ ಗುಣಮಟ್ಟದ ಬಿಳಿ ಅಡಕೆಯೇ ಬೇಕು. ಇದಕ್ಕೆ ಎಂದಿಗೂ ಬೇಡಿಕೆ ಕಡಿಮೆಯಾಗದು. ಇಡೀ ಗುಜರಾತ್‌ನ 182 ಕೇಂದ್ರಗಳಿಗೆ ಕ್ಯಾಂಪ್ಕೋ ಅಡಕೆ ಪ್ಯಾಕೆಟ್‌ಗೆ ಬೇಡಿಕೆ ಇದೆ. ಮಾತ್ರವಲ್ಲ ಉತ್ತರ ಭಾರತದ 20 ರಾಜ್ಯಗಳಿಗೆ ಇದೇ ರೀತಿ ಅಡಕೆ ಪ್ಯಾಕೆಟ್‌ಗಳನ್ನು ಸಿದ್ಧಗೊಳಿಸಿ ಮಾರುಕಟ್ಟೆ ಒದಗಿಸಲಿದೆ. ಮೋರ, ಮೋತಿ, ಶೇವರ್ಧನ್ ಮತ್ತು ಜಾಂ ಮಾದರಿಯ ಅಡಕೆಯನ್ನು 1, 5, 10 ಕಿಲೋ ಪ್ಯಾಕೆಟ್‌ಗಳಲ್ಲಿ ಪೂರೈಸುತ್ತಿದೆ.
ಉತ್ತರ ಭಾರತದಲ್ಲಿ ಅಡಕೆಯನ್ನು ಪಾನ್ ಜತೆ ಜಗಿಯುತ್ತಾರೆ. ಇದಕ್ಕೆ ಉಪಯೋಗಿಸುವುದು ಗುಣಮಟ್ಟದ ಬಿಳಿ (ಚಾಲಿ) ಅಡಕೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಚಾಲಿ ಅಡಕೆಯ ಶೇ.10 ಮಾತ್ರ ಕ್ಯಾಂಪ್ಕೋ ಖರೀದಿಸುತ್ತದೆ. ಉಳಿದ ಶೇ.90 ಅಡಕೆ ಹೊರ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಖರೀದಿಸುತ್ತಾರೆ. ಇದುವೇ ಅಡಕೆ ಮಾರುಕಟ್ಟೆ ಧಾರಣೆ ಏರುಪೇರಿಗೆ ಕಾರಣ.

ಕೆಂಪಿನಿಂದ ಬಿಳಿಯತ್ತ...
ಕ್ಯಾಂಪ್ಕೋ ವಾರ್ಷಿಕ ವಹಿವಾಟಿನ 5 ಲಕ್ಷ ಕ್ವಿಂಟಲ್ ಅಡಕೆಯಲ್ಲಿ ಈಗ ಗುಜರಾತ್ ಮಾರುಕಟ್ಟೆಗೆ ಪೂರೈಸುವುದು 70 ಟನ್ ಮಾತ್ರ. ಉತ್ತರ ಭಾರತಕ್ಕೆ ವಿಸ್ತರಿಸಿದರೆ 2.50 ಲಕ್ಷ ಕ್ವಿಂಟಲ್ ಅಡಕೆ ಬೇಕು. ಉತ್ತರ ಕನ್ನಡದಲ್ಲಿ ಉತ್ಪಾದಿಸುವ ಕೆಂಪಡಕೆ ವಾರ್ಷಿಕ ವಹಿವಾಟು 2 ಲಕ್ಷ ಟನ್. ಕ್ಯಾಂಪ್ಕೋ ಖರೀದಿಸುವುದು 2.50 ಲಕ್ಷ ಟನ್. ಗುಟ್ಕಾ ನಿಷೇಧದಿಂದ ಇಲ್ಲಿಯೂ ಬೆಳೆಗಾರರು ಕೆಂಪಡಕೆಯನ್ನು ಬಿಳಿ ಅಡಕೆಗೆ ಪರಿವರ್ತಿಸಲು ಸಾಧ್ಯವಿದೆ. ಈ ಬಗ್ಗೆ ಪ್ರೇರೇಪಿಸಲಾಗುವುದು ಎನ್ನುವುದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಅಭಿಪ್ರಾಯ.

50 ಕೋಟಿ ಯೋಜನೆ
ಬಿಳಿ ಅಡಕೆಗೆ ಶಾಶ್ವತ ಮಾರುಕಟ್ಟೆ ರೂಪಿಸಲು ಮುಂದಾಗಿರುವ ಕ್ಯಾಂಪ್ಕೋ, ಪುತ್ತೂರು ಹಾಗೂ ಬದಿಯಡ್ಕಗಳಲ್ಲಿ ರು. 50 ಕೋಟಿ ವೆಚ್ಚದಲ್ಲಿ ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕ ತೆರೆಯಲು ಉದ್ದೇಶಿಸಿದೆ. ತಕ್ಷಣಕ್ಕೆ ಅಗತ್ಯ ಹಣಕಾಸು ನೆರವು ಒದಗಿಸುವಂತೆ ಶೀಘ್ರವೇ ಕ್ಯಾಂಪ್ಕೋ ನಿಯೋಗ ರಾಜ್ಯ ಸರ್ಕಾರವನ್ನು ಕೋರಲಿದೆ.
ಎರಡು ಘಟಕಗಳನ್ನು ಸ್ಥಾಪಿಸಿ, ಕರಾವಳಿ ಅಡಕೆಯನ್ನು ಇಲ್ಲಿಯೇ ಸಂಸ್ಕರಿಸಿ, ಉತ್ತರ ಭಾರತಕ್ಕೆ ಪ್ಯಾಕೆಟ್‌ಗಳಲ್ಲಿ ಮಾರುವುದು ಸುಲಭ ಎನ್ನುವುದು ಕ್ಯಾಂಪ್ಕೋ ಲೆಕ್ಕಾಚಾರ.

- ಆತ್ಮಭೂಷಣ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!